ಆಲದ ಮರ ಬಿದ್ದು ಸಂಚಾರಕ್ಕೆ ತೊಂದರೆ

KannadaprabhaNewsNetwork |  
Published : Mar 20, 2024, 01:17 AM IST
 ಬೃಹತ್‌ ಆಲದ ಮರ | Kannada Prabha

ಸಾರಾಂಶ

ಸಾವಳಗಿ: ಜಮಖಂಡಿ-ಸಾವಳಗಿ ಸಂಪರ್ಕ ಕಲ್ಪಿಸುವ ನಾಕೂರ ಹಳ್ಳದ ಹತ್ತಿರ ಬೃಹತ್‌ ಆಲದ ಮರ ಮಂಗಳವಾರ ರಸ್ತೆ ಮೇಲೆ ಬಿದ್ದಿದ್ದರಿಂದ ರಸ್ತೆ ಸಂಚಾರಕ್ಕೆ ಕೆಲಕಾಲ ತೊಂದರೆ ಉಂಟಾಗಿತ್ತು. ಬೆಳಗ್ಗೆ 10 ಗಂಟೆಗೆ ಮರ ಬಿದ್ದು, ಸಂಚಾರಕ್ಕೆ ತೊಂದರೆಯಾಗಿದೆ ಎನ್ನುವ ಮಾಹಿತಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಗೊತ್ತಾಗಿದ್ದರೂ ಮಧ್ಯಾಹ್ನ 3 ಗಂಟೆವರೆಗೆ ತೆರವುಗೊಳಿಸುವ ಗೋಜಿಗೆ ಹೋಗಲಿಲ್ಲ.

ಸಾವಳಗಿ: ಜಮಖಂಡಿ-ಸಾವಳಗಿ ಸಂಪರ್ಕ ಕಲ್ಪಿಸುವ ನಾಕೂರ ಹಳ್ಳದ ಹತ್ತಿರ ಬೃಹತ್‌ ಆಲದ ಮರ ಮಂಗಳವಾರ ರಸ್ತೆ ಮೇಲೆ ಬಿದ್ದಿದ್ದರಿಂದ ರಸ್ತೆ ಸಂಚಾರಕ್ಕೆ ಕೆಲಕಾಲ ತೊಂದರೆ ಉಂಟಾಗಿತ್ತು. ಬೆಳಗ್ಗೆ 10 ಗಂಟೆಗೆ ಮರ ಬಿದ್ದು, ಸಂಚಾರಕ್ಕೆ ತೊಂದರೆಯಾಗಿದೆ ಎನ್ನುವ ಮಾಹಿತಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಗೊತ್ತಾಗಿದ್ದರೂ ಮಧ್ಯಾಹ್ನ 3 ಗಂಟೆವರೆಗೆ ತೆರವುಗೊಳಿಸುವ ಗೋಜಿಗೆ ಹೋಗಲಿಲ್ಲ. ಕೊನೆಯ ಪಕ್ಷ ರಸ್ತೆಯ ಮೇಲೆ ಬಿದ್ದಿರುವ ಕೊಂಬೆಗಳನ್ನಾದರು ತುಂಡರಿಸಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವ ಕೆಲವನ್ನೂ ಅಧಿಕಾರಿಗಳು ಮಾಡದಿರುವುದು ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಯಿತು. ಕೊನೆಗೆ ವಾಹನ ಸವಾರರೇ ಕೊಂಬೆಗಳನ್ನು ರಸ್ತೆಯ ಒಂದು ಬದಿಗೆ ಸರಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಮಲಾಕರ ಭಟ್‌ಗೆ ಸುಚಿತ್ರಾಳಿಂದ ಹನಿಟ್ರ್ಯಾಪ್‌! - ಖಾಸಗಿ ಕ್ಷಣಗಳ ವಿಡಿಯೋ ಮಾಡಿ ಬ್ಲ್ಯಾಕ್‌ ಮೇಲ್‌
ರಾಜಧಾನಿಯಲ್ಲಿ ಡ್ರಗ್ಸ್ ಬೇಟೆ : ಸಾವಿರ ವ್ಯಸನಿಗಳ ಸೆರೆ