ಕನ್ನಡಪ್ರಭ ವಾರ್ತೆ ಕೋಲಾರ
ತಾಲೂಕಿನ ವೇಮಗಲ್ ಯೋಜನೆ ಕಚೇರಿ ವ್ಯಾಪ್ತಿಯ ವೇಮಗಲ್ ವಲಯದ ಕುರುಗಲ್ ಕಾರ್ಯಕ್ಷೇತ್ರದ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಪರಿಸರ ಮಾಹಿತಿ ಕಾರ್ಯಕ್ರಮದಲ್ಲಿ ಗಿಡ ನೆಟ್ಟು ಉದ್ಘಾಟಿಸಿ ಮಾತನಾಡಿದರು.
ಇಂದು ಪ್ರಕೃತಿಯು ಪ್ಲಾಸ್ಟಿಕ್‌ಮಯವಾಗುತ್ತಿದ್ದು, ಇದರಿಂದ ಅಂತರ್ಜಲಕ್ಕೆ ಮಾರಕವಾಗುತ್ತಿದೆ. ಜಾನುವಾರುಗಳು ಆಹಾರದ ಜತೆ ಪ್ಲಾಸ್ಟಿಕ್ ಸೇರಿ ಅವರು ಸಾಯುವ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದು ಅತ್ಯಂತ ವಿಷಾದಕರ ಎಂದ ಅವರು, ಪ್ಲಾಸ್ಟಿಕ್ ಮುಕ್ತ ಜಿಲ್ಲೆಯ ನಿರ್ಮಾಣ ಪ್ರತಿಯೊಬ್ಬ ವಿದ್ಯಾರ್ಥಿಯ ಗುರಿಯಾಗಲಿ ಎಂದರು.ಮನೆಯಿಂದ ಅಂಗಡಿಗೆ ಹೋಗುವಾಗ ಕಡ್ಡಾಯವಾಗಿ ಬಟ್ಟೆ ಚೀಲ ತೆಗೆದುಕೊಂಡು ಹೋಗಲು ನಿಮ್ಮ ಪೋಷಕರಿಗೆ ಸಲಹೆ ನೀಡಿ, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಲು ವಿದ್ಯಾರ್ಥಿ ಸಮುದಾಯ ನೆರವಾಗಬೇಕು, ಮಕ್ಕಳು ಮನಸ್ಸು ಮಾಡಿದರೆ ಪರಿಸರ ಉಳಿಸುವ ಪ್ರಯತ್ನದಲ್ಲಿ ಯಶ ಖಚಿತ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುರುಗಲ್ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಗಂಗಾಧರ್ ಮೂರ್ತಿ, ಶಾಲೆಯ ಆವರಣದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಒಂದೊಂದು ಗಿಡ ನೆಟ್ಟು ಪೋಷಿಸಿದರೆ ಅದು ಮುಂದಿನ ದಿನಗಳಲ್ಲಿ ನಿಮ್ಮ ನೆನಪಾಗಿ ಉಳಿಯುತ್ತದೆ, ಪರಿಸರ ಮಾಲಿನ್ಯ ತಡೆಗೆ ಗ್ರಾಮ, ಶಾಲೆ ಎಲ್ಲಕಡೆಯೂ ನಿಮ್ಮ ಸೇವೆ ಇರಬೇಕು ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಭಾಗ್ಯಶ್ರೀ, ಬೃಂದಾ, ನವ್ಯ, ಗಜಗೌರಿ, ಗಜೇಂದ್ರ, ಶೇಖರ್, ಕೃಷಿ ಮೇಲ್ವಿಚಾರಕರು, ಮಂಜುನಾಥ್ ಇದ್ದರು.