ಯುವಜನತೆ ದುಶ್ಚಟಗಳಿಂದ ದೂರವಿದ್ದಲ್ಲಿ ಉಜ್ವಲ ಭವಿಷ್ಯ ಸಾಧ್ಯ: ಸುಪ್ರಿತಾ

KannadaprabhaNewsNetwork |  
Published : Sep 01, 2025, 01:03 AM IST
ೇ್ | Kannada Prabha

ಸಾರಾಂಶ

ಶೃಂಗೇರಿ, ಯುವಶಕ್ತಿ ದೇಶದ ನಿಜವಾದ ಶಕ್ತಿ. ಸಮಾಜದ ಆಸ್ತಿ. ಸದೃಢ ದೇಶ, ಉತ್ತಮ ಸಮಾಜ ನಿರ್ಮಾಣದಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಯುವ ಜನತೆ ದುಶ್ಚಟಗಳಿಂದ ದೂರವಿದ್ದಲ್ಲಿ ಉತ್ತಮ ಭವಿಷ್ಯ ರೂಪಿಸಿ ಕೊಳ್ಳಲು ಸಾಧ್ಯ ಎಂದು ತಾಲೂಕು ಪಂಚಾಯಿತಿ ಎನ್ಆರ್ ಎಲ್ಎಂ ವಿಭಾಗ ವಲಯ ಮೇಲ್ವಿಚಾರಕಿ ಸುಪ್ರಿತಾ ಹೇಳಿದರು.

- ತಾಲೂಕಿನ ನೆಮ್ಮಾರು ಪಂಚಾಯಿತಿಯಲ್ಲಿ ಸಂಜೀವಿನಿ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ

ಕನ್ನಡಪ್ರಭ ವಾರ್ತೆ ಶೃಂಗೇರಿ

ಯುವಶಕ್ತಿ ದೇಶದ ನಿಜವಾದ ಶಕ್ತಿ. ಸಮಾಜದ ಆಸ್ತಿ. ಸದೃಢ ದೇಶ, ಉತ್ತಮ ಸಮಾಜ ನಿರ್ಮಾಣದಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಯುವ ಜನತೆ ದುಶ್ಚಟಗಳಿಂದ ದೂರವಿದ್ದಲ್ಲಿ ಉತ್ತಮ ಭವಿಷ್ಯ ರೂಪಿಸಿ ಕೊಳ್ಳಲು ಸಾಧ್ಯ ಎಂದು ತಾಲೂಕು ಪಂಚಾಯಿತಿ ಎನ್ಆರ್ ಎಲ್ಎಂ ವಿಭಾಗ ವಲಯ ಮೇಲ್ವಿಚಾರಕಿ ಸುಪ್ರಿತಾ ಹೇಳಿದರು.

ತಾಲೂಕಿನ ನೆಮ್ಮಾರು ಪಂಚಾಯಿತಿ ಆವರಣದಲ್ಲಿ ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವ ನೋಪಾಯ ಅಭಿಯಾನ ಹಾಗೂ ನೆಮ್ಮಾರ್ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಮಾದಕ ದ್ರವ್ಯ ಮುಕ್ತ ಕರ್ನಾಟಕ ಜನಜಾಗೃತಿ ಅಭಿಯಾನ, ಪೋಸ್ಟರ್ ಬಿಡುಗಡೆ ಹಾಗೂ ಪ್ರತಿಜ್ಞಾ ವಿಧಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು.

ಯಾವುದೇ ಒಂದು ರಾಷ್ಟ್ರ ಅಭಿವೃದ್ಧಿ ಪಥದಲ್ಲಿ ಸಾಗಬೇಕಾದರೆ ಅಲ್ಲಿನ ಯುವಶಕ್ತಿ ಬಹಳ ಮುಖ್ಯ. ಮುಂದುವರಿದ ರಾಷ್ಟ್ರಗಳು ಯುವಶಕ್ತಿಯನ್ನು ಬಳಸಿಕೊಂಡು ಪ್ರಗತಿಯತ್ತ ಸಾಗಿವೆ. ಯುವಜನತೆ ದಿಕ್ಕು ತಪ್ಪಿದರೆ ದೇಶದ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಇಂದಿನ ಅಪರಾಧ ಪ್ರಕರಣಗಳು, ತಂಬಾಕು ಉತ್ಪನ್ನಗಳ ಸೇವನೆ, ಮಾದಕ ದ್ರವ್ಯ ಜಾಲಗಳಲ್ಲಿ ಯುವಜನತೆಯೇ ಹೆಚ್ಚು ಪಾಲ್ಗೊಳ್ಳುತ್ತಿರುವುದು ವಿಷಾದಕರ ಸಂಗತಿ ಎಂದರು.

ಯುವಜನರನ್ನು ಹೆಚ್ಚು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿದೆ. ನಿರುದ್ಯೋಗ ಸಮಸ್ಯೆ ಸೇರಿದಂತೆ ಮಾಹಿತಿ ಕೊರತೆಯಿಂದ ಯುವಜನತೆ ಮಾದಕ ದ್ರವ್ಯಗಳ ಜಾಲ. ಅಪರಾಧ ಕೃತ್ಯಗಳತ್ತ ಮುಖಮಾಡುತ್ತಿದೆ. ತಂಬಾಕು, ಗುಟ್ಕ, ಮಾಕ ಪದಾರ್ಥಗಳ ಸೇವನೆಯಿಂದ ತಮ್ಮ ಬದುಕನ್ನೇ ಹಾಳು ಮಾಡಿಕೊಳ್ಳುವ ಜೊತೆಗೆ ಕುಟುಂಬ, ಸಮಾಜದ ಆರೋಗ್ಯ ಹಾಳುಮಾಡುತ್ತಿದ್ದಾರೆ. ಯುವ ಜನತೆಯಲ್ಲಿ ಜಾಗೃತಿ ಮೂಡಿಸಬೇಕಿದೆ.

ಯುವಜನತೆ ಗರಿಷ್ಠ ಸಂಖ್ಯೆಯಲ್ಲಿ ಮಾದಕ ವಸ್ತು ಮುಕ್ತ ಭಾರತ ಅಭಿಯಾನಕ್ಕೆ ಸೇರುವುದು ಬಹಳ ಮುಖ್ಯ. ತಾವು ಅರಿವು ಮೂಡಿಸಿಕೊಳ್ಳುವ ಜೊತೆಗೆ ಜನರಲ್ಲಿಯೂ ಜಾಗೃತಿ, ಅರಿವು ಮೂಡಿಸಬೇಕು.ಈ ಅಭಿಯಾನದಡಿ ನಾವೆಲ್ಲರೂ ಒಂದಾಗಬೇಕು. ಸಮುದಾಯ, ಕುಟುಂಬ, ಸ್ನೇಹಿತರು ಮಾತ್ರವಲ್ಲದೇ ನಾವೆಲ್ಲರೂ ಮಾದಕ ವಸ್ತು ಮುಕ್ತರಾಗುತ್ತೇವೆ ಎಂದು ಪ್ರತಿಜ್ಞೆ ಮಾಡಬೇಕು. ನಮ್ಮಿಂದಲೇ ಈ ಕಾರ್ಯ ಆಗಬೇಕಿದೆ. ಉತ್ತಮ ಸಮಾಜ ನಿರ್ಮಾಣ ನಮ್ಮ ಗುರಿಯಾಗಬೇಕು. ಮಾದಕ ವಸ್ತು ಮುಕ್ತ ಕರ್ನಾಟಕ ನಿರ್ಮಾಣಕ್ಕೆ ನಾವೆಲ್ಲರು ಪಣ ತೊಡಬೇಕಿದೆ ಎಂದರು.

ಈ ಸಂದರ್ಭದಲ್ಲಿ ಪ್ರತಿಜ್ಞಾ ವಿಧಿ ಭೋದಿಸಲಾಯಿತು. ನೆಮ್ಮಾರು ಗ್ರಾಪಂ ಅಭಿವೃದ್ಧಿ ಅಧಿಕಾರಿ ಶ್ರೀಕಾಂತಿ, ಎನ್ಆರ್ ಎಲ್ಎಂ ನ ವಿನಯ್, ಜಿಪಿಎಲ್ಎಫ್ ನ ವಸಂತಿ,ಸುನಿತಾ, ಮಧುವತಿ, ಭಾಗ್ಯ,ಶೈಲಾ ಸ್ವಸಹಾಯ ಸಂಘದ ಪದಾಧಿಕಾರಿಗಳು, ಗ್ರಾಪಂ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.

31 ಶ್ರೀ ಚಿತ್ರ 1-

ಶೃಂಗೇರಿ ನೆಮ್ಮಾರು ಗ್ರಾಮಪಂಚಾಯಿತಿ ಆವರಣದಲ್ಲಿ ನಡೆದ ಮಾದಕ ವಸ್ತು ಮುಕ್ತ ಕರ್ನಾಟಕ ಜನಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಹಿತ್ಯ ಕ್ಷೇತ್ರಕ್ಕೆ ಸಿದ್ಧಲಿಂಗ ಶ್ರೀಗಳ ಕೊಡುಗೆ ಅಪಾರ: ಕೋರ್ಲಹಳ್ಳಿ
ಬೋವಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸವಲತ್ತು ತಲುಪಿಸುವ ಗುರಿ: ಎಂ. ರಾಮಪ್ಪ