ಕನ್ನಡಪ್ರಭ ವಾರ್ತೆ ಕಲಬುರಗಿ
ಇವರು ತಮ್ಮ ಪಕ್ಷದ ಸಂಕೇತವಾಗಿರುವ ಆನೆಯ ಪ್ರತಕಿೃತಿ ಸಿದ್ಧಪಡಿಸಿ ಅದನ್ನೇ ಹತ್ತಿ ಮೆರವಣಿಗೆಯಲ್ಲಿ ಚುನಾವಣಾಧಿಕಾರಿಗಳ ಕಚೇರಿವರೆಗೂ ಬಂದು ನಂತರ ಅಲ್ಲಿಂದ ಆ ಆನೆಯ ಪ್ರತಿಕೃತಿಯಿಂದ ಇಳಿದು ನಾಮಪತ್ರ ಸಲ್ಲಿಸಿದ್ದಾರೆ. ಇವರು ನಾಮಪತ್ರ ಸಲ್ಲಿಕೆಗೆ ಬಳಸಿದ್ದು ಕೃತಕ ಆನೆಯನ್ನ, ಈ ಕೃತಕ ಆನೆಯ ಪ್ರತಕಿೃತಿ ಮೇಲೆಯೇ ಹತ್ತಿ ಕುಳಿತು ಜಮನ ಸೆಳೆದ ರ ಆನೆ ಮೆರವಣಿಗೆ ಜಮನ ಸೆಳಯಿತು.
ನಾಮಪತ್ರ ಸಲ್ಲಿಕೆಗೆ ಆನೇ ಏರಿ ಬಂದ ಬಿಎಸ್ಪಿಯ ಅಭ್ಯರ್ಥಿ ಹುಚ್ಚಪ್ಪ ಅವರನ್ನು ರಸ್ತೆಯಲ್ಲಿ ಕಂಡು ದಂಗಾದರು. ಯಾಕೆ ಆನೆ ಮೆರವಣಿಗೆ ಎಂದು ಪರಸ್ಪರ ಮುಂದಾಗುತ್ತಿದ್ದಂತೆಯೇ ಬಿಎಸ್ಪಿ ಸಿಂಬಾಲ್ ಆನೆ ಎಂಬುದು ಗೊತ್ತಾಗಿ ಮೆರವಣಿಗೆ ಅಚ್ಚರಿಯಿಂದ ವೀಕ್ಷಿಸಿದರು. ಇವರ ಕೃತಕ ಆನೆಯನ್ನು ಕಂಡವರು ಇದು ನಿಜ ಆನೆ ಎಂದೇ ಭಾವಿಸುವಂತಿತ್ತು.ಕೃತಕ ಆನೆ ಮೇಲೆ ಬೃಹತ್ ರೋಡ್ ಶೋ ಮೂಲಕ ನಾಮಪತ್ರ ಸಲ್ಲಿಸಿದ ಹುಚ್ಚಪ್ಪ ಅವರ ಕ್ರಮ ವಿನೂತನವಾಗಿ ಕಂಡು ಬಂತು. ಕೃತಕ ಆನೆಯನ್ನು ಸರಳವಾಗಿ ಹತ್ತಿದ್ದ ಹುಚ್ಚಪ್ಪ ಅವರು ಅದರಿಂದ ಮಿನಿ ವಿಧಾನಸೌದದಲ್ಲಿರೋ ಚುನಾವಣಾಧಿಕಾರಿ ಕಚೇರಿ ಹತ್ತಿರ ಇಳಿಯುವಾಗ ಕೆಲಹೊತ್ತು ಸರ್ಕಸ್ ಮಾಡಬೇಕಾಯ್ತು.