ಕರಾಳ ದಿನ ಆಚರಿಸಿದ್ದ ಎಂಇಎಸ್‌ನ ಮುಖಂಡರ ಮೇಲೆ ಕೇಸ್‌ ದಾಖಲು

KannadaprabhaNewsNetwork |  
Published : Nov 04, 2024, 12:22 AM IST

ಸಾರಾಂಶ

ಕರ್ನಾಟಕ ರಾಜ್ಯೋತ್ಸವಕ್ಕೆ ವಿರುದ್ಧವಾಗಿ ಬೆಳಗಾವಿಯಲ್ಲಿ ಕರಾಳ ದಿನಾಚರಣೆ, ಪ್ರತಿಭಟನೆ ಮಾಡಿದ ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿಯ (ಎಂಇಎಸ್‌) 46 ಮುಖಂಡರು ಸೇರಿ ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ.

ಬೆಳಗಾವಿ: ಕರ್ನಾಟಕ ರಾಜ್ಯೋತ್ಸವಕ್ಕೆ ವಿರುದ್ಧವಾಗಿ ಬೆಳಗಾವಿಯಲ್ಲಿ ಕರಾಳ ದಿನಾಚರಣೆ, ಪ್ರತಿಭಟನೆ ಮಾಡಿದ ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿಯ (ಎಂಇಎಸ್‌) 46 ಮುಖಂಡರು ಸೇರಿ ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ.

ಮಾಜಿ ಶಾಸಕ ಮನೋಹರ ಕಿಣೇಕರ, ಎಂಇಎಸ್‌ ಮುಖಂಡರಾದ ಶುಭಂ ಶೆಳ್ಕೆ, ರಮಾಕಾಂತ ಕೊಂಡುಸ್ಕ್‌, ವಿಕಾಸ ಕಲಘಟಗಿ, ಪ್ರಕಾಶ ಮರಗಾಳೆ ಸೇರಿ 46 ಮುಖಂಡರ ಮೇಲೆ ಮಾರ್ಕೆಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನ.1ರಂದು ರಾಜ್ಯೋತ್ಸವಕ್ಕೆ ವಿರುದ್ಧವಾಗಿ ಎಂಇಎಸ್‌ ಕಾರ್ಯಕರ್ತರು ಜಿಲ್ಲಾಡಳಿತ ಅನುಮತಿ ನೀಡದಿದ್ದರೂ ಕರಾಳ ದಿನ ಆಚರಿಸಿ, ಪ್ರತಿಭಟನಾ ಮೆರವಣಿಗೆ ನಡೆಸಿದ್ದರು. ಅಲ್ಲದೆ ಗಡಿಭಾಗದಲ್ಲಿರುವ ಮರಾಠಿ ಬಹುಭಾಷಿಕ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡುವಂತೆ ಘೋಷಣೆ ಕೂಗಿ ಉದ್ಧಟನ ಪ್ರದರ್ಶಿಸಿದ್ದರು. ಇವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳುವಂತೆ ಕನ್ನಡಪರ ಸಂಘಟನೆಗಳು ಆಗ್ರಹಿಸಿದ್ದವು.

ಸಾರ್ವಜನಿಕವಾಗಿ ಶಾಂತಿ ಭಂಗ, ದೊಂಬಿ ಎಬ್ಬಿಸಲು ಪ್ರಚೋದನೆ, ಅಕ್ರಮವಾಗಿ ಕೂಟ ಸೇರಿ ಸಭೆ ನಡೆಸಿದ್ದಕ್ಕೆ ಬಿಎನ್ಎಸ್ ಕಾಯ್ದೆ 189(2),192, 292, 285, 190 ಕಲಂ ಅಡಿ ಪ್ರಕರಣ ದಾಖಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಜೆಟಲ್ಲಿ ಹೇಳಿದಂತೆ 15 ಸಾವಿರ ಶಿಕ್ಷಕರ ಹುದ್ದೆ ಭರ್ತಿ ಶೀಘ್ರ: ಮಧು
ಬೆಂಗಳೂರಿನ ಕೊಳಚೆ ನೀರಿಂದ ತರಕಾರಿಯೂ ವಿಷ : ಸಂಸತ್ತಲ್ಲಿ ಗೌಡ