ಕಂದಾಯ ಸಿಬ್ಬಂದಿ ವಿರುದ್ಧ ಸಕಲೇಶಪುರದಲ್ಲಿ ಮಹಿಳೆಯಿಂದ ಜಾತಿ ನಿಂದನೆ ಪ್ರಕರಣ

KannadaprabhaNewsNetwork |  
Published : Jun 10, 2024, 12:31 AM IST
9ಎಚ್ಎಸ್ಎನ್3 : ರಸ್ತೆ ಒತ್ತುವರಿ ಬಿಡಿಸಲು ಮುಂದಾಗಿದಕ್ಕೆ ಕಂದಾಯ ಮತ್ತು ಸರ್ವೆ ಇಲಾಖೆಯ ಸಿಬ್ಬಂದಿಗಳ ಮೇಲೆ ದಾಖಲಾಗಿರುವ ಜಾತಿ ನಿಂದನೆ ಪ್ರಕರಣ ಹಿಂಪಡೆಯಬೇಕೆಂದು ಒತ್ತಾಯಿಸಿ   ಸಕಲೇಶಪುರ ತಾಲೂಕು ಕಂದಾಯ ಇಲಾಖಾ ನೌಕರರ ಸಂಘದ ವತಿಯಿಂದ  ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಸಕಲೇಶಪುರದಲ್ಲಿ ರಸ್ತೆ ಒತ್ತುವರಿ ತೆರವುಗೊಳಿಸಲು ಮುಂದಾದ ಕಂದಾಯ ಇಲಾಖೆಯ ಮತ್ತು ಸರ್ವೆ ಇಲಾಖೆಯ ಸಿಬ್ಬಂದಿ ವಿರುದ್ಧ ಮಹಿಳೆಯೊಬ್ಬರು ಜಾತಿ ನಿಂದನೆ ಪ್ರಕರಣವನ್ನು ತಾಲೂಕಿನ ಯಸಳೂರು ಪೋಲಿಸ್ ಠಾಣೆಯಲ್ಲಿ ದಾಖಲಿಸಿದ್ದಾರೆ.

ಯಸಳೂರು ಠಾಣೆಯಲ್ಲಿ ದೂರು । ಪ್ರಕರಣ ರದ್ದತಿಗೆ ನೌಕರರ ಸಂಘ ಮನವಿ

ಸಕಲೇಶಪುರ: ರಸ್ತೆ ಒತ್ತುವರಿ ತೆರವುಗೊಳಿಸಲು ಮುಂದಾದ ಕಂದಾಯ ಇಲಾಖೆಯ ಮತ್ತು ಸರ್ವೆ ಇಲಾಖೆಯ ಸಿಬ್ಬಂದಿ ವಿರುದ್ಧ ಮಹಿಳೆಯೊಬ್ಬರು ಜಾತಿ ನಿಂದನೆ ಪ್ರಕರಣವನ್ನು ತಾಲೂಕಿನ ಯಸಳೂರು ಪೋಲಿಸ್ ಠಾಣೆಯಲ್ಲಿ ದಾಖಲಿಸಿದ್ದಾರೆ.ತಾಲೂಕಿನ ಹೆತ್ತೂರು ಗ್ರಾಮದ ಸರ್ವೆನಂ ೨೦೪ರಲ್ಲಿ ನಕಾಶೆಯಲ್ಲಿ ಕಂಡ ರಸ್ತೆ ಒತ್ತುವರಿಯಾಗಿದ್ದು ಇದನ್ನು ತೆರವುಗೊಳಿಸುವಂತೆ ತಹಸೀಲ್ದಾರ್ ಹಾಗೂ ಇತರ ಅಧಿಕಾರಿಗಳು ನೀಡಿದ ಆದೇಶದ ಮೇಲೆ ಯಸಳೂರು ಪೋಲಿಸ್ ಠಾಣೆಯ ಸಿಬ್ಬಂದಿ ಸಮ್ಮುಖದಲ್ಲಿ ಮೇ 25 ರಂದು ಸರ್ವೆ ಕಾರ್ಯ ಮಾಡಲಾಗಿದ್ದು ಈ ಸಂರ್ಧಭದಲ್ಲಿ ಜೆಸಿಬಿಯಿಂದ ದಾರಿಯನ್ನು ಸ್ವಚ್ಛಗೊಳಿಸಿ ಉಳಿದ ದಾರಿಯನ್ನು ತೆರವುಗೊಳಿಸಲು ಹೋದಾಗ ಕಮಲಮ್ಮ ಎಂಬುವರು ಜಾಗವನ್ನು ತೆರವುಗೊಳಿಸಲು ಅಡ್ಡಿಪಡಿಸಿದ್ದರಿಂದ ರಸ್ತೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ ಮತ್ತೊಂದು ದಿನ ಕಾರ್ಯಾಚರಣೆ ಮಾಡಲು ತೀರ್ಮಾನಿಸಲಾಗಿತ್ತು. ಆದರೆ ಕಮಲಮ್ಮ ಕಂದಾಯ ಇಲಾಖೆಯ ಅಧಿಕಾರಿಗಳು ದಬ್ಬಾಳಿಕೆಯಿಂದ ಹಿಡುವಳಿ ಜಾಗವನ್ನು ತೆರವು ಮಾಡಲು ಮುಂದಾಗಿದ್ದು ಈ ಸಂರ್ಧಭದಲ್ಲಿ ಅಧಿಕಾರಿಗಳು ಜಾತಿ ನಿಂದನೆ ಮಾಡಿದ್ದಾರೆಂದು ಆರೋಪಿಸಿ ಹೆತ್ತೂರು ಹೋಬಳಿಯ ಉಪ ತಹಸೀಲ್ದಾರ್ ಗಂಗಾಧರ್, ಕಂದಾಯ ನಿರೀಕ್ಷಕ ಸಿಕಂದರ್, ಸರ್ವೆ ಅಧಿಕಾರಿ ಗಣೇಶ್ ಹಾಗೂ ಗ್ರಾಮಸ್ಥ ಮಹೇಶ್ ಎಂಬುವರ ಮೇಲೆ ಯಸಳೂರು ಠಾಣೆಯಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಾರೆ.

ಡಿಸಿಗೆ ಸರ್ಕಾರಿ ನೌಕರರ ಸಂಘ ಮನವಿ

ಯಸಳೂರು ಪೋಲಿಸರು ನಿಯಮಗಳನ್ನು ಗಾಳಿಗೆ ತೂರಿ ಏಕಾಏಕಿ ಪ್ರಕರಣ ದಾಖಲಿಸಿದ್ದಾರೆ. ಇದರಿಂದಾಗಿ ತಮ್ಮ ನೌಕರರಿಗೆ ಮಾನಸಿಕವಾಗಿ ಅಘಾತವಾಗಿದ್ದು ಕೂಡಲೇ ಪ್ರಕರಣವನ್ನು ಹಿಂಪಡೆಯಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಸರ್ಕಾರಿ ನೌಕರರ ಸಂಘದ ವತಿಯಿಂದ ಉಗ್ರ ಹೋರಾಟ ಮಾಡಲಾಗುತ್ತದೆಂದು ಜಿಲ್ಲಾಧಿಕಾರಿ ಸತ್ಯಭಾಮರವರಿಗೆ ಸರ್ಕಾರಿ ನೌಕರರ ಸಂಘ ಮನವಿ ಸಲ್ಲಿಸಿದೆ.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೃಷ್ಣೇಗೌಡ, ಚಂದ್ರೇಗೌಡ, ತಹಸೀಲ್ದಾರ್ ಮೇಘನಾ, ಶಿರಸ್ತೇದಾರ್ ಉಮೇಶ್, ಕಂದಾಯ ಇಲಾಖೆ ಸಿಬ್ಬಂದಿ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

500 ನಾಯಿಗಳಿಗೆ ಚಿಕನ್‌ ರೈಸ್ ನೀಡಲು ವರ್ಷಕ್ಕೆ 1.83 ಕೋಟಿ
ಯಲಹಂಕದಲ್ಲಿ ‘ಚೀನಾದ ಹ್ಯಾಂಗ್‌ಝೌ’ ಮಾದರಿ ರೈಲು ನಿಲ್ದಾಣ