ಶತಮಾನಗಳ ಕನಸು ನನಸಾಗುತ್ತಿದೆ: ಗುತ್ತೇದಾರ

KannadaprabhaNewsNetwork |  
Published : Jan 21, 2024, 01:34 AM IST
ಅಫಜಲ್ಪುರ ತಾಲೂಕಿನ ದೇವಲ ಗಾಣಗಾಪೂರದ ದತ್ತಾತ್ರೇಯ ದೇವಸ್ಥಾನದಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಅಫಜಲ್ಪುರ ತಾಲೂಕಿನ ಸುಕ್ಷೇತ್ರ ದೇವಲ ಗಾಣಗಾಪೂರದ ದತ್ತಾತ್ರೇಯ ದೇವಸ್ಥಾನದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕರೆಯ ಮೇರೆಗೆ ದೇವಸ್ಥಾನಗಳ ಸ್ವಚ್ಚತಾ ಕಾರ್ಯ.

ಕನ್ನಡಪ್ರಭ ವಾರ್ತೆ ಚವಡಾಪುರ

ಶತಮಾನಗಳ ನಿರೀಕ್ಷೆ, ಲಕ್ಷಾಂತರ ರಾಮಭಕ್ತರ ತ್ಯಾಗ ಬಲಿದಾನಕ್ಕೆ ಪ್ರತಿಫಲವಾಗಿ ಅಯೋಧ್ಯೆಯಲ್ಲಿ ರಾಮಲಲ್ಲಾನ ಭವ್ಯ ಮಂದಿರ ನಿರ್ಮಾಣವಾಗುತ್ತಿದ್ದು ಜ.22ರಂದು ಲೋಕಾರ್ಪಣೆಯಾಗುತ್ತಿದ್ದು ಶತಮಾನಗಳ ಕನಸು ನನಸಾಗುತ್ತಿದೆ ಎಂದು ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಹೇಳಿದರು.

ಅಫಜಲ್ಪುರ ತಾಲೂಕಿನ ಸುಕ್ಷೇತ್ರ ದೇವಲ ಗಾಣಗಾಪೂರದ ದತ್ತಾತ್ರೇಯ ದೇವಸ್ಥಾನದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕರೆಯ ಮೇರೆಗೆ ದೇವಸ್ಥಾನಗಳ ಸ್ವಚ್ಚತಾ ಕಾರ್ಯದಲ್ಲಿ ಭಾಗಿಯಾಗಿ ಮಾತನಾಡಿದ ಅವರು ರಾಮ ಮಂದಿರ ಲೋಕಾರ್ಪಣೆಯ ಹಿನ್ನೆಲೆ ನಮ್ಮ ಭಾಗಗಳಲ್ಲಿನ ಪುಣ್ಯಕ್ಷೇತ್ರಗಳ ಸ್ವಚ್ಚತಾ ಕಾರ್ಯ ಮಾಡಬೇಕೆಂದು ಪ್ರಧಾನ ಮಂತ್ರಿಗಳ ಕರೆ ಇದ್ದು ಎಲ್ಲಾ ರಾಮಭಕ್ತರು ದೇವಸ್ಥಾನಗಳ ಸ್ವಚ್ಚತಾ ಕಾರ್ಯ ಮಾಡಲಾಗುತ್ತಿದೆ. ಇದು ಯಾವುದೇ ಪಕ್ಷದ ಕಾರ್ಯಕ್ರಮವಲ್ಲ, ಯಾವುದೇ ಧರ್ಮಿಯರಿಗೆ ಸೀಮಿತವಾದ ಕಾರ್ಯಕ್ರಮವಲ್ಲ. ಎಲ್ಲರಿಗೂ ರಾಮ ಆದರ್ಶವಾಗಿದ್ದಾನೆ. ಹೀಗಾಗಿ ಎಲ್ಲಾ ರಾಮಭಕ್ತರು ನಿಮ್ಮ ಹತ್ತಿರದ ಪುಣ್ಯಕ್ಷೇತ್ರಗಳನ್ನು ಸ್ವಚ್ಚಗೊಳಿಸಿ. ಜ.22ರಂದು ರಾಮ ಮಂದಿರ ಲೋಕಾರ್ಪಣೆ ಪ್ರಯುಕ್ತ ನಿಮ್ಮ ಮನೆಗಳಲ್ಲಿ ದೀಪ ಬೆಳಗಿ ಗೌರವ ಸೂಚಿಸಿ ಎಂದು ತಿಳಿಸಿದರು.

ಯುವ ಮುಖಂಡ ರಿತೇಶ ಗುತ್ತೇದಾರ ಮಾತನಾಡಿ ಇದು ನವಭಾರತದ ಭವ್ಯ ದೇವಾಲಯದ ಲೋಕಾರ್ಪಣೆಯ ಸಂತಸದ ಸಮಯ. ನಾವೆಲ್ಲರೂ ಜಾಗೃತರಾಗಿ ಸಂಭ್ರಮಿಸುವ ಸಮಯ. ರಾಮಾಯಣದ ಕಾಲದಲ್ಲಿ ಹನುಮನ ಎದೆಯೊಳಗೆ ರಾಮನಿದ್ದನು, ಈಗ ಎಲ್ಲರ ಹೃದಯದಲ್ಲೂ ರಾಮ ಮನೆಮಾಡಿದ್ದಾನೆ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಅಂಬಾರಾಯ ಅಷ್ಟಗಿ, ಶಾಮರಾವ ಪಾಟೀಲ, ಶಿವರಾಜ ಮಹಾಜನ, ಬೀರಣ್ಣ ಕಲ್ಲೂರ, ದೇವೇಂದ್ರ ಜಮಾದಾರ, ಶಿವು ಘಾಣೂರ, ಮಲ್ಲಿಕಾರ್ಜುನ ಪಾಟೀಲ, ಶ್ರೀಮಂತ ಭಂಡಾರಿ, ಬಲವಂತ ಜಕಬಾ, ಮಾಳಪ್ಪ ಪೂಜಾರಿ, ಭೀಮರಾವ ಕಲಶೆಟ್ಟಿ, ಮಲ್ಲಿನಾಥ ಪಾಟೀಲ, ವಿಜಯಕುಮಾರ ಭಂಡಾರಿ, ಕರುಣಾಕರ ಪೂಜಾರಿ, ಪ್ರಖ್ಯಾತ ಪೂಜಾರಿ, ಪ್ರೀಯಾಂಕ ಪೂಜಾರಿ, ರಶೀದ ಪಟೇಲ, ರವಿ ಪಾಟೀಲ, ದತ್ತು ನಿಂಬರ್ಗಿ, ಭಾಗಪ್ಪ ವಡಗೇರಿ ಇದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ