ಧಾರಾಕಾರ ಮಳೆಗೆ ತಂಪಾದ ದಾಂಡೇಲಿ

KannadaprabhaNewsNetwork |  
Published : May 18, 2026, 03:30 AM IST
ಎಚ್೧೭.೫-ಡಿಎನ್‌ಡಿ೩: ಧಾರಾಕಾರ ಮಳೆಗೆ ತಂಪಾದ ದಾಂಡೇಲಿ | Kannada Prabha

ಸಾರಾಂಶ

ಬಿಸಿಲಿನ ಝಳದಿಂದ ಕಂಗಾಲಾಗಿದ್ದ ಜನರಿಗೆ ಭಾನುವಾರ ಸುರಿದ ಗುಡುಗು, ಮಿಂಚು, ಸಿಡಿಲು ಸಹಿತ ಮಳೆಯಿಂದಾಗಿ ತಂಪೆರಚಿದಂತಾಗಿದೆ.

ದಾಂಡೇಲಿ:

ಬಿಸಿಲಿನ ಝಳದಿಂದ ಕಂಗಾಲಾಗಿದ್ದ ಜನರಿಗೆ ಭಾನುವಾರ ಸುರಿದ ಗುಡುಗು, ಮಿಂಚು, ಸಿಡಿಲು ಸಹಿತ ಮಳೆಯಿಂದಾಗಿ ತಂಪೆರಚಿದಂತಾಗಿದೆ.

ಕಳೆದ ಕೆಲವು ದಿನಗಳಿಂದ ಬಿಸಿಲು ಝಳ ಹೆಚ್ಚಾಗಿದ್ದರಿಂದ ದಾಂಡೇಲಿ ತಾಲೂಕಿನಲ್ಲಿ ಜನ ಶೆಕೆಯಿಂದ ಪರಿತಪ್ಪಿಸುತ್ತಿದ್ದರು. ಭಾನುವಾರ ಶೆಕೆ ಇನ್ನು ಹೆಚ್ಚಾಗಿ ಪರದಾಡುತ್ತಿದ್ದ ಜನರಿಗೆ ಮಳೆರಾಯ ಬಂದು ತಂಪ ಮಾಡಿದ್ದಾನೆ. ಸುಮಾರು ಅರ್ಧ ಗಂಟೆ ಅಷ್ಟೇ ಗುಡುಗು, ಮಿಂಚು, ಸಿಡಿಲಿಂದ ಕೂಡಿದ್ದ ಮಳೆಯಿಂದಾಗಿ ದಾಂಡೇಲಿ ತಾಲೂಕಿನ ಜನರನ್ನು ತಂಪಾಗಿಸಿದೆ.

ನಗರದಲ್ಲಿ ಸುರಿದ ಧಾರಾಕಾರ ಮಳೆಯಿಂದ ದಾಂಡೇಲಿ ನಗರದ ಮೇಲೆ ಮಳೆ ನೀರು ತುಂಬಿ ಹರಿದಿದ್ದು, ವಾಹನ ಸವಾರ, ದ್ವಿಕಚ್ರ ವಾಹನ ಸವಾರರಿಗೆ, ಜನರಿಗೆ ಓಡಾಡಲು ತೊಂದರೆ ಅನುಭವಿಸಿದರು.ಭಾರಿ ಗಾಳಿ, ಮಿಂಚು-ಗುಡುಗು ಸಹಿತ ಮಳೆಯಾಗುವ ಸಾಧ್ಯತೆ:

ಭಾರತೀಯ ಹವಾಮಾನ ಇಲಾಖೆ, ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ, ಉತ್ತರ ಕನ್ನಡ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಮೇ 18ರವರೆಗೆ ಭಾರಿ ಗಾಳಿ ಹಾಗೂ ಮಿಂಚು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿರುವ ಬಗ್ಗೆ ಎಂದು ಮುನ್ಸೂಚನೆ ನೀಡಲಾಗಿರುವುದರಿಂದ ಈ ಕೆಳಗಿನಂತೆ ಸೂಚನೆಗಳನ್ನು ಪಾಲಿಸುವಂತೆ ತಿಳಿಸಲಾಗಿದೆ.ಮಿನುಗಾರರು ಮೇಲಿನ ದಿನದಂದು ಸಮುದ್ರದಲ್ಲಿ ಅಲೆಗಳು ತೀವ್ರತೆ ಇರುವುದರಿಂದ ಮೀನುಗಾರಿಕೆ ತೆರಳದಂತೆ ಸೂಚಿಸಲಾಗಿದೆ.ಪ್ರವಾಸಿಗರು, ಸಾರ್ವಜನಿಕರು ನದಿ/ನೀರಿರುವ ಪ್ರದೇಶ ಮತ್ತು ಸಮುದ್ರಕ್ಕೆ ಇಳಿಯದಂತೆ ಕಟ್ಟೆಚ್ಚರ ವಹಿಸುವುದು. ಮಳೆಯ ಜೊತೆಗೆ ಗಾಳಿ ಕೂಡಾ 40-60 ಕಿಮೀ ವೇಗದಿಂದ ಬೀಸುವ ಸಾಧ್ಯತೆಯಿರುವುದರಿಂದ ಅಪಾಯಕಾರಿ ಮರಗಳ ಸಮೀಪದ ಮನೆಗಳಲ್ಲಿಯ ಜನರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುವುದು ಮತ್ತು ಮರಗಳ ಕೆಳಗೆ ಆಶ್ರಯ ಪಡೆಯದಂತೆ ಸೂಚಿಸಲಾಗಿದೆ.

ಸಮುದ್ರತೀರಕ್ಕೆ ಮಕ್ಕಳು ಹೋಗದಂತೆ ಪಾಲಕರು ಜಾಗೃತಿ ವಹಿಸಬೇಕು.ತುರ್ತು ಸೇವೆಗೆ 24x7 ಕಂಟ್ರೋಲ್ ರೂಮ್ ಸಂಖ್ಯೆ 08382-229857 ಮೊ. 9483511015 ನ್ನು ಸಂಪರ್ಕಿಸುವಂತೆ ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೀನಕೆರೆ ಗ್ರಾಮದಲ್ಲಿ 3 ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ
ಡೆಂಘೀ, ಮಲೇರಿಯಾ ಮುಕ್ತ ಜಿಲ್ಲೆಯಾಗಲು ಶ್ರಮಿಸಿ: ಡಿಸಿ ಕವಿತಾ ಎಸ್.ಮನ್ನಿಕೇರಿ