ಸಾವಿನಲ್ಲೂ ಒಂದಾದ ದಂಪತಿಗಳು!

KannadaprabhaNewsNetwork |  
Published : Jul 31, 2024, 01:04 AM IST
ದಂಪತಿ30 | Kannada Prabha

ಸಾರಾಂಶ

ಎಡೇರುಗುತ್ತು ನಿವಾಸಿ ಸುಂದರ ಶೆಟ್ಟಿ ಮತ್ತು ಅವರ ಪತ್ನಿ ವನಜಾ ಶೆಟ್ಟಿ ಒಂದೇ ದಿನ ೫ ಗಂಟೆಗಳ ಅಂತರದಲ್ಲಿ ನಿಧನರಾದರು.

ಕನ್ನಡಪ್ರಭ ವಾರ್ತೆ ಕಾಪು

ಇಲ್ಲಿನ ಬೆಳ್ಳೆ ಗ್ರಾ.ಪಂ. ವ್ಯಾಪ್ತಿಯ ಎಡೇರುಗುತ್ತು ನಿವಾಸಿ ಸುಂದರ ಶೆಟ್ಟಿ (೭೦) ಮತ್ತು ಅವರ ಪತ್ನಿ ವನಜಾ ಶೆಟ್ಟಿ (೬೨) ಸೋಮವಾರ ಒಂದೇ ದಿನ ೫ ಗಂಟೆಗಳ ಅಂತರದಲ್ಲಿ ನಿಧನರಾದರು.

ಸೋಮವಾರ ಬೆಳಗ್ಗೆ ೯ ಗಂಟೆಗೆ ಸುಂದರ ಶೆಟ್ಟಿ ಅವರು ವಯೋಸಹಜ ಅನಾರೋಗ್ಯದಿಂದ ಎಡೇರುಗುತ್ತುವಿನಲ್ಲಿ ನಿಧನರಾದರು. ಅವರ ಪಾರ್ಥಿವ ಶರೀರವನ್ನು ಶಂಕರಪುರದ ಅವರ ಮೂಲ ನಿವಾಸಕ್ಕೆ ಕೊಂಡೊಯ್ಯಲಾಯಿತು. ಮಧ್ಯಾಹ್ನ ಸುಮಾರು ೨ ಗಂಟೆಯ ಅವಧಿಗೆ ಅವರ ಪತ್ನಿ ವನಜಾ ಶೆಟ್ಟಿ ಅವರೂ ನಿಧನರಾಗಿದ್ದು, ಪತಿ-ಪತ್ನಿ ಸಾವಿನಲ್ಲೂ ಒಂದಾದರು.

ಸುಂದರ ಶೆಟ್ಟಿ ಅವರು ಪಾಕತಜ್ಞರಾಗಿದ್ದು, ಅಡುಗೆಯಲ್ಲಿ ವಿಶೇಷ ಪರಿಣಿತಿ ಹೊಂದಿದ್ದರು. ದಂಪತಿಗೆ ಮಕ್ಕಳಿಲ್ಲ.

--------

ಆಸ್ಕರ್ ಫರ್ನಾಂಡಿಸರ ಡ್ರೈವರ್ ಫ್ರಾನ್ಸಿಸ್ ಮಸ್ಕರೇನಸ್ ನಿಧನ

ಉಡುಪಿ: ಕಾಂಗ್ರೆಸ್ ನಾಯಕ ದಿ. ಆಸ್ಕರ್ ಫರ್ನಾಂಡಿಸ್ ಅವರ ಟೆಂಪೋ ಮತ್ತು ಜೀಪಿನ ಚಾಲಕರಾಗಿದ್ದ ಅಮ್ಮುಂಜೆ ಗ್ರಾಮದ ನಿವಾಸಿ ಫ್ರಾನ್ಸಿಸ್ ಮಸ್ಕರೇನಸ್ (70) ಮಂಗಳವಾರ ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಫ್ರಾನ್ಸಿಸ್ ಅವರು ಆಸ್ಕರ್ ಫರ್ನಾಂಡಿಸ್ ರಾಜಕೀಯಕ್ಕೆ ಇಳಿಯುವ ಮೊದಲು ಅವರ ತರಕಾರಿಯ ಟೆಂಪೋ ಚಾಲಕರಾಗಿ, ನಂತರ ಅವರ ಮೂರು ಚುನಾವಣೆಯಲ್ಲಿ ಜೀಪು ಚಾಲಕರಾಗಿ ದುಡಿದಿದ್ದರು.

ಕೊಳಲಗಿರಿಯ ಆಟೋ ಚಾಲಕರ ಹಿರಿಯ ಸದಸ್ಯರಾಗಿದ್ದು, ಇಲ್ಲಿನ ಸಂತ ಅಂತೋನಿ ಆರ್ತಾಡಾಕ್ಸ್ ಚರ್ಚಿನ ಟ್ರಸ್ಟಿಯಾಗಿ ಸೇವೆ ಸಲ್ಲಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಂಗಡಗಿ, ನಾಲತವಾಡಗೆ ಪಿಯು ಕಾಲೇಜು ಪರಿಶೀಲಿಸಿ ಮಂಜೂರು
ಲಗಾನಿ ಹೆಸರಿನಲ್ಲಿ ಕಬ್ಬು ಬೆಳೆಗಾರರ ಲೂಟಿ