ಟ್ರಾಫಿಕ್‌ ಜಾಮ್‌ ನಡುವೆ ಕಾರಲ್ಲೇ ನಿದ್ದೆಗೆ ಜಾರಿದ ಚಾಲಕ: ವೈರಲ್‌

KannadaprabhaNewsNetwork |  
Published : Oct 31, 2024, 02:03 AM IST
Traffic | Kannada Prabha

ಸಾರಾಂಶ

ಸಂಚಾರ ದಟ್ಟಣೆ ಹಾಗೂ ವಾಹನಗಳ ಜೋರು ಹಾರ್ನ್‌ ಶಬ್ದದ ನಡುವೆಯೂ ನಡು ರಸ್ತೆಯಲ್ಲಿ ಚಾಲಕನೊಬ್ಬ ಕಾರಿನಲ್ಲಿಯೇ ನಿದ್ದೆಗೆ ಜಾರಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸಂಚಾರ ದಟ್ಟಣೆ ಹಾಗೂ ವಾಹನಗಳ ಜೋರು ಹಾರ್ನ್‌ ಶಬ್ದದ ನಡುವೆಯೂ ನಡು ರಸ್ತೆಯಲ್ಲಿ ಚಾಲಕನೊಬ್ಬ ಕಾರಿನಲ್ಲಿಯೇ ನಿದ್ದೆಗೆ ಜಾರಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಇತ್ತೀಚೆಗೆ ಎಚ್‌ಎಸ್‌ಆರ್‌ ಲೇಔಟ್‌-ಸಿಲ್ಕ್‌ ಬೋರ್ಡ್‌ ರಸ್ತೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಕುಟುಂಬದ ಸದಸ್ಯರ ಜತೆಗೆ ಪ್ರವಾಸಕ್ಕೆ ತೆರಳಿ ಸುಸ್ತಾಗಿದ್ದ ಕಾರು ಚಾಲಕ, ಸಂಚಾರ ದಟ್ಟಣೆ ಹಿನ್ನೆಲೆಯಲ್ಲಿ ಕಾರನ್ನು ರಸ್ತೆಯಲ್ಲಿ ನಿಲ್ಲಿಸಿದ್ದಾರೆ. ಈ ವೇಳೆ ಕಣ್ಣು ಮುಚ್ಚಿ ನಿದ್ದೆಗೆ ಜಾರಿದ್ದಾರೆ. ಈ ನಡುವೆ ದಟ್ಟಣೆ ಕಡಿಮೆಯಾಗಿ ವಾಹನಗಳು ಮಂದಗತಿಯಲ್ಲಿ ಮುಂದಕ್ಕೆ ಚಲಿಸಿವೆ. ಆದರೂ ಚಾಲಕ ನಿದ್ದೆಯಿಂದ ಎಚ್ಚರಗೊಂಡಿಲ್ಲ. ಹಿಂದಿನ ವಾಹನಗಳು ಜೋರಾಗಿ ಹಾರ್ನ್‌ ಮಾಡಿದರೂ ಚಾಲಕ ಎಚ್ಚರಗೊಂಡಿಲ್ಲ.

ಬಳಿಕ ಸಾರ್ವಜನಿಕರೊಬ್ಬರು ತಮ್ಮ ಮೊಬೈಲ್‌ನಲ್ಲಿ ಚಾಲಕ ಕಾರಿನಲ್ಲಿ ನಿದ್ದೆ ಮಾಡುತ್ತಿರುವುದನ್ನು ವಿಡಿಯೋ ಮಾಡಿದ್ದಾರೆ. ಬಳಿಕ ಕಾರಿನ ಗಾಜು ತಟ್ಟಿ ಚಾಲಕನನ್ನು ಎಚ್ಚರಗೊಳಿಸಿದ್ದಾರೆ. ನಂತರ ಚಾಲಕ ಕಾರನ್ನು ಮುಂದಕ್ಕೆ ಚಲಾಯಿಸಿಕೊಂಡು ತೆರಳಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಬೆಂಗಳೂರು ರಸ್ತೆಗಳಲ್ಲಿ ವಾಹನ ಸಂಚಾರ ದಟ್ಟಣೆ ಬಗ್ಗೆ ಚರ್ಚೆಗಳು ಆರಂಭವಾಗಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಾರತೀಯರ ಕರೆತರಲು ವಿಶೇಷ ವಿಮಾನ ಮಾಡಿ: ಮೋದಿಗೆ ಸಿಎಂ ಸಿದ್ದು ಪತ್ರ
100ಕ್ಕೂ ಕನ್ನಡಿಗರ ಹೊತ್ತು ಬಂತು ಮೊದಲ ವಿಮಾನ