ಜಮಖಂಡಿ: ನಗರ ಠಾಣೆಯಿಂದ ಕೂಗಳತೆ ದೂರದಲ್ಲಿರುವ ಪ್ರಭಾತನಗರದಲ್ಲಿ ದರೋಡೆಕೋರರ ಗುಂಪು ಸುತ್ತಾಡಿ ದರೋಡೆಗೆ ಯತ್ನಿಸಿ ವಿಫಲವಾದ ಘಟನೆ ಭಾನುವಾರ ನಸುಕಿನ ಜಾವ 3 ಗಂಟೆಯ ಹೊತ್ತಿಗೆ ನಡೆದಿದೆ. ಪ್ರಭಾತನಗರದ ನಿವಾಸಿ ನೀರಾವರಿ ಇಲಾಖೆಯ ಎಂಜಿನಿಯರ್ ಮಂಜುನಾಥ ತೆಗ್ಗಿ ಅವರ ಕಚೇರಿಯ ಬೀಗ ಮುರಿದ ದರೋಡೆ ಖೋರರು ಹುಡುಕಾಟ ನಡೆಸಿದ್ದಾರೆ. ಬೀಗ ಮುರಿಯುವ ಸಪ್ಪಳಕ್ಕೆ ಪಕ್ಕದ ಮನೆಯವರು ಎದ್ದು ಕೂಗಾಡಿದ್ದಾರೆ. ಈ ವೇಳೆ ದರೋಡೆಕೋರರ ಗುಂಪು ಅಲ್ಲಿ ಜಾಗ ಖಾಲಿ ಮಾಡಿದ್ದಾರೆ.
ನಗರದಲ್ಲಿ ಅಪರಿಚಿತ ವ್ಯಕ್ತಿಗಳು ಸಂಶಯಾಸ್ಪದ ರೀತಿಯಲ್ಲಿ ತಿರುಗಾಡುತ್ತಿರುವುದನ್ನು ಗಮನಿಸಿದರೇ ಕೂಡಲೇ ಹತ್ತಿರದ ಠಾಣೆಗೆ ಮಾಹಿತಿ ನೀಡುವಂತೆ ಡಿವೈಎಸ್‌ಪಿ ಶಾಂತವೀರ, ಸಿಪಿಐ ಮಲ್ಲಪ್ಪ ಮಡ್ಡಿ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.