ಬೀರೂರಲ್ಲಿ ಜಿದ್ದಾಜಿದ್ದಿನ ಕುಸ್ತಿ ಸಮರಕ್ಕೆ ತೆರೆ

KannadaprabhaNewsNetwork |  
Published : Mar 17, 2026, 01:30 AM IST
16ಬೀರೂರು1ಬೀರೂರಿನ ಕಿತ್ತೂರುರಾಣೆಚನ್ನಮ್ಮಕ್ರೀಡಾಂಗಣದ ಕುಸ್ತಿ ಅಖಾಡದಲ್ಲಿ ಎರಡು ದಿನಗಳ ಕಾಲ ರಾಜ್ಯಮಟ್ಟದ ಹೊನಲು ಬೆಳಕಿನ ಕುಸ್ತಿ ಪಂದ್ಯಾವಳಿಯಲ್ಲಿ ಬೆಳ್ಳಿಗದೆಯ ಕುಸ್ತಿಗೆ ಶಿವಾಜಿ ವ್ಯಾಯಾಮ ಶಾಲೆಯ ಸಮಿತಿ ವತಿಯಿಂದ ಕುಸ್ತಿ ಪಟುಗಳಿಗೆ ಶುಭಹಾರೈಸಿದರು. | Kannada Prabha

ಸಾರಾಂಶ

ಬೀರೂರು.ಶ್ರೀ ವೀರಭದ್ರಸ್ವಾಮಿ ರಥೋತ್ಸವದ ಅಂಗವಾಗಿ ಶ್ರೀ ಶಿವಾಜಿ ವ್ಯಾಯಾಮ ಶಾಲೆ ಸೇವಾ ಸಂಘ ಮತ್ತು ಪುರಸಭೆ ಮತ್ತು ಸಾರ್ವಜನಿಕರ ಸಂಯುಕ್ತ ಆಶ್ರಯದಲ್ಲಿ ಕಳೆದ ಎರಡು ದಿನಗಳಿಂದ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಭಾರಿ ಬಹಿರಂಗ ಕುಸ್ತಿ ಪಂದ್ಯಾವಳಿಯಲ್ಲಿ ಮಹಾರಾಷ್ಟ್ರದ ಪ್ರಥಮೇಶ್ ಪಾಟೀಲ್ ಬೆಳ್ಳಿಗದೆ ವಿಜೇತರಾದರು.

ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿ । ಮಹಾರಾಷ್ಟ್ರದ ಪ್ರಥಮೇಶ್ ಪಾಟೀಲ್‌ಗೆ ಬೆಳ್ಳಿಗದೆ ಪ್ರಶಸ್ತಿ । ಕನ್ನಡಪ್ರಭ ವಾರ್ತೆ ಬೀರೂರು.

ಶ್ರೀ ವೀರಭದ್ರಸ್ವಾಮಿ ರಥೋತ್ಸವದ ಅಂಗವಾಗಿ ಶ್ರೀ ಶಿವಾಜಿ ವ್ಯಾಯಾಮ ಶಾಲೆ ಸೇವಾ ಸಂಘ ಮತ್ತು ಪುರಸಭೆ ಮತ್ತು ಸಾರ್ವಜನಿಕರ ಸಂಯುಕ್ತ ಆಶ್ರಯದಲ್ಲಿ ಕಳೆದ ಎರಡು ದಿನಗಳಿಂದ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಭಾರಿ ಬಹಿರಂಗ ಕುಸ್ತಿ ಪಂದ್ಯಾವಳಿಯಲ್ಲಿ ಮಹಾರಾಷ್ಟ್ರದ ಪ್ರಥಮೇಶ್ ಪಾಟೀಲ್ ಬೆಳ್ಳಿಗದೆ ವಿಜೇತರಾದರು.

ಭಾನುವಾರ ಸಂಜೆ ಪಂದ್ಯಾವಳಿಯ ರೋಚಕ ಜಿದ್ದಾಜಿದ್ದಿನ ಸಮರಕ್ಕೆ ನೆರೆದಿದ್ದ ಅಪಾರ ಜನಸ್ತೋಮ ಸಾಕ್ಷಿಯಾಯಿತು. ಬೆಳ್ಳಿಗದೆ ಪ್ರಶಸ್ತಿಯ ಪ್ರಮುಖ ಘಟ್ಟದ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಕುಸ್ತಿ ಯಲ್ಲಿ ಹರಿಯಾಣದ ಅಮಿತ್ ಕುಮಾರ್ ಮತ್ತು ಮಹಾರಾಷ್ಟ್ರದ ಪ್ರಥಮೇಶ್ ಪಾಟೀಲ್ ನಡುವೆ ಹಣಾಹಣಿ ನಡೆಯಿತು. ಇವರಿಬ್ಬರ ಪಟ್ಟುಗಳನ್ನು ವೀಕ್ಷಿಸಿದ ಪ್ರೇಕ್ಷಕರು ಹೊಡೆಯೋ, ಪಲ್ಟಾಯಿಸು, ಹಿಡಿ ಪಟ್ಟು ಎಂದು ಕೇಕೆ ಹಾಕುವ ಸಂದರ್ಭದಲ್ಲಿ ತನ್ನ ಕುಸ್ತಿಯ ಚಾಲಾಕಿತನ ಮತ್ತು ವಿವಿಧ ಪಟ್ಟುಗಳನ್ನು ಹಾಕಿ ಮಹಾರಾಷ್ಟ್ರದ ಪ್ರಥಮೇಶ್ ಬೆಳ್ಳಿಗದೆ ಪಡೆದುಕೊಂಡರು.ಪುರಸಭೆ ಹಾಗೂ ಶ್ರೀ ಶಿವಾಜಿ ವ್ಯಾಯಾಮ ಶಾಲೆ ಸಹಯೋಗದಲ್ಲಿ ನಡೆದ ಪಂದ್ಯಾವಳಿಯಲ್ಲಿ ವಿವಿಧ ರಾಜ್ಯಹಾಗೂ ಜಿಲ್ಲೆಗಳಿಂದ ಆಗಮಿಸಿದ್ದ ಕುಸ್ತಿ ಪಟುಗಳು ಕಸರತ್ತುಗಳ ಮೂಲಕ ಗಮನಸೆಳೆದರು. ಪ್ರಾಚೀನ ಕ್ರೀಡೆಗಳು ಮರೆಯಾಗುತ್ತಿರುವ ಸಂಧರ್ಭದಲ್ಲಿ ಮಲ್ಲಯುದ್ಧದ ಭಾಗವಾದ ಕುಸ್ತಿ ಕಲೆ ಇನ್ನೂ ಜೀವಂತವಾಗಿದೆ ಎಂದು ಪಂದ್ಯಾವಳಿ ಸಾರಿತು. ಮೈಸೂರು, ಭದ್ರಾವತಿ, ಶಿವಮೊಗ್ಗ, ಬಾಗಲಕೋಟೆ, ದೂರದ ಬಿಜಾಪುರ, ಬೆಳಗಾಂ , ಜಮುಖಂಡಿ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ನೂರಾರು ಕುಸ್ತಿ ಪಟುಗಳು ಆಗಮಿಸಿ ಅತ್ಯುತ್ತಮ ಪಟುಗಳ ಮೂಲಕ ತಮ್ಮ ಸಾಮರ್ಥ್ಯ ಮತ್ತು ಶಕ್ತಿ ಪ್ರದರ್ಶಿಸಿದರು. ಕ್ರೀಡೆಗಳನ್ನು ಬೆಂಬಲಿಸುತ್ತಿರುವ ಸಂಗೊಳ್ಳಿ ರಾಯಣ್ಣ, ಕುಂಬಾರ, ಸವಿತಾ ಸಮಾಜ, ಅಖಾಡ ಕುಸ್ತಿ, ಪೌರ ಪ್ರಶಸ್ತಿ, ಕಾರ್ಮಿಕ ಸಂಘ, ಶ್ರೀಮೈಲಾರಲಿಂಗಸ್ವಾಮಿ, ಅಂಜುಮಾನ್, ಮದೀನಾ, ಅಂತರಘಟ್ಟಮ್ಮ ದೇವಿ, ಸ್ನೇಹಬಳಗ, ಗಣಪತಿ ಪೆಂಡಾಲ್, ಭಗೀರಥ, ಆಟೋ ಸಂಘ ಸೇರಿದಂತೆ ಹಲವು ಹೆಸರಿನ ಪ್ರಶಸ್ತಿಗೆ ಕುಸ್ತಿ ನಡೆದವು. 2 ದಿನಗಳಲ್ಲಿ 150 ಕ್ಕೂ ಹೆಚ್ಚಿನಜೊತೆ ಕುಸ್ತಿ ಪಂದ್ಯಗಳು ನಡೆದು ಕುಸ್ತಿಪ್ರೇಮಿಗಳಿಗೆ ಮುದನೀಡಿತು.ಶಿವಾಜಿ ವ್ಯಾಯಾಮ ಶಾಲೆ ಸೇವಾ ಸಂಘದ ಅಧ್ಯಕ್ಷ ಕುಮಾರಸ್ವಾಮಿ , ಗೌರವಾಧ್ಯಕ್ಷ ಮಾಜಿ ಜಿ.ಪಂ ಸದಸ್ಯ ಬಿ.ಪಿ. ನಾಗರಾಜ್, ಕಾರ್ಯದರ್ಶಿ ಹೂವಿನ ಬಿ.ಎಂ.ಹರೀಶ್, ಸಹಕಾರ್ಯದರ್ಶಿ ಪ್ರಕಾಶ್, ಹಿರಿಯ ಕುಸ್ತಿ ತೀರ್ಪುಗಾರ ಓಂಕಾರ್ ಹಾಗೂ ಉಪ್ಪಿನ ಮಂಜುನಾಥ್ ಮತ್ತು ಸಮಿತಿಯ ಶಶಿಧರ್, ಪುನೀತ್, ಮಲ್ಲಿಕ್, ಪ್ರವೀಣ್,ಕಾಂತರಾಜ್ ಸ್ನೇಹಿತರು ಇದ್ದರು. ಇದೇ ಸಂದರ್ಭದಲ್ಲಿ ಹಿರಿಯ ಕುಸ್ತಿ ಪಟುಗಳು ಹಾಗೂ ದಾನಿಗಳಿಗೆ ಗೌರವ ಸಮರ್ಪಿಸಲಾಯಿತು.ಮಾಜಿ ಶಾಸಕ ಬೆಳ್ಳಿ ಪ್ರಕಾಶ್, ಕಾಂಗ್ರೆಸ್ ಮುಖಂಡ ಭಂಡಾರಿ ಶ್ರೀನಿವಾಸ್, ಮಾರ್ಗದ ಮಧು, ಪುರಸಭೆ ಮಾಜಿ ಅಧ್ಯಕ್ಷ ಬಿ.ಕೆ.ಶಶಿಧರ್ ಸೇರಿದಂತೆ ಮತ್ತಿತರ ಗಣ್ಯರು, ಪುರಸಭಾ ಮಾಜಿ ಅಧ್ಯಕ್ಷ ಮತ್ತು ಸದಸ್ಯರು ಕುಸ್ತಿ ಪಂದ್ಯಾವಳಿ ವೀಕ್ಷಿಸಿದರು. 16ಬೀರೂರು1ಬೀರೂರಿನ ಕಿತ್ತೂರುರಾಣೆ ಚನ್ನಮ್ಮಕ್ರೀಡಾಂಗಣದಲ್ಲಿ ಬೆಳ್ಳಿಗಧೆ ಪಂದ್ಯದಲ್ಲಿ ಸ್ಫರ್ಧೆಗಿಳಿದ ಕುಸ್ತಿ ಪಟುಗಳಿಗೆ ಶಿವಾಜಿ ವ್ಯಾಯಾಮ ಶಾಲೆ ಸಮಿತಿಯಿಂದ ಶುಭಹಾರೈಸಲಾಯಿತು.16 ಬೀರೂರು 2ಬೆಳ್ಳಿಗದೆ ವಿಜೇತ ಮಹಾರಾಷ್ಟ್ರದ ಪ್ರಥಮೇಶ್ ಪಾಟೀಲ್

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಳಮೀಸಲಾತಿ ಜಾರಿ ಸಂಬಂಧ ತೀರ್ಮಾನ ಕೈಗೊಳ್ಳಿ
ಗುತ್ತಿಗೆದಾರರು ಪುರಸಭೆ ನಿಯಮದಂತೆ ಸುಂಕ ವಸೂಲಿ ಮಾಡಿ