ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ
ಭಾನುವಾರ ದೀಪ್ತಿ ಪ್ರೌಢ ಶಾಲೆಯಲ್ಲಿ 2006 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ತರಗತಿಯಲ್ಲಿ ವ್ಯಾಸಂಗ ಮಾಡಿದ್ದ ಹಳೇ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಸ್ನೇಹ ಸಮ್ಮಿಲನ ಹಾಗೂ ಗುರು ವಂದನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಳೇ ವಿದ್ಯಾರ್ಥಿ ಬಿ.ಎನ್. ಹರ್ಷ ಮಾತನಾಡಿ, 2006 ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಇಂದು ಕೆಲವರು ವಿದೇಶದಲ್ಲಿದ್ದಾರೆ. ವೈದ್ಯಕೀಯ ಕ್ಷೇತ್ರ ಹಿಡಿದು ಹತ್ತಾರು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಸ್ನೇಹ ಸಮ್ಮಿಲನದ ಮೂಲಕ ಮತ್ತೆ ಎಲ್ಲರನ್ನು ನೋಡುವ ಅವಕಾಶ ಸಿಕ್ಕಿದೆ ಎಂದರು.
ಸಮಾಜ ವಿಜ್ಞಾನ ಶಿಕ್ಷಕಿಯಾಗಿದ್ದ ಲೀಲಾ ಜೋನ್, ಗಣಿತ ಶಿಕ್ಷಕರಾಗಿದ್ದ ದೇವರಾಜ್, ಡ್ರಾಯಿಂಗ್ ಶಿಕ್ಷಕಿಯಾಗಿದ್ದ ಜೆಸ್ಸಿ ತಮ್ಮ ನೆನಪುಗಳನ್ನು ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಅಂದಿನ ಸಾಲಿನಲ್ಲಿ ಮುಖ್ಯೋಪಾಧ್ಯಾಯರಾಗಿ ದ್ದ ದಿ. ಜೇಮ್ಸ್ ಜಾರ್ಜ್ ಕಲ್ಲರಕ್ಕಲ್ ಹಾಗೂ ಅಕಾಲಿಕ ನಿಧನರಾದ 4 ಜನರಿಗೆ ಸಂತಾಪ ಸೂಚಿಸಲಾಯಿತು.ಇದೇ ಸಂದರ್ಭದಲ್ಲಿ ಗುರುಗಳನ್ನು ಗೌರವಿಸಲಾಯಿತು. ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.