ಶಾಶ್ವತ ಯೋಜನೆಗಳ ರೂಪಿಸುವ ಸರ್ಕಾರ ಜನಮನ ಗೆಲ್ಲಬಲ್ಲದು: ಕೇದಾರಲಿಂಗ ಶ್ರೀ

KannadaprabhaNewsNetwork |  
Published : Oct 20, 2024, 01:49 AM IST
ಇಲ್ಲಿನ ಕಲ್ಲುಸಾಗರ ಬೀದಿಯಲ್ಲಿರುವ ಬಸವೇಶ್ವರ ದೇವಾಲಯದ ಹಿಂಭಾಗದಲ್ಲಿನ ಹಿರೇಮಠದಲ್ಲಿ ನಡೆದ 145ನೇ ಶಿವಾನುಭವ ಗೋಷ್ಠಿ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದ ಹಿರೇಮಠದ ಶ್ರೀಗಳು) | Kannada Prabha

ಸಾರಾಂಶ

ನಮ್ಮನ್ನಾಳುವ ಸರ್ಕಾರಗಳು ಯಾವುದೇ ರಾಜಕೀಯ ಪಕ್ಷಗಳಿಗೆ ಸೇರಿದ್ದಾಗಿರಲಿ, ಬಡವರಿಗೆ ನೀಡುವಂತಹ ಯೋಜನೆಗಳು ಮತ್ತು ಸಾರ್ವತ್ರಿಕವಾಗಿ ರೂಪಿಸುವಂತಹ ಯೋಜನೆಗಳು ಶಾಶ್ವತವಾಗಿರಬೇಕು. ಆಗ ಅಂತಹ ಯೋಜನೆಗಳು ಜನಪ್ರಿಯತೆ ಪಡೆದುಕೊಳ್ಳುತ್ತವೆ ಎಂದು ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಮಹಾಸ್ವಾಮೀಜಿ ನುಡಿದಿದ್ದಾರೆ.

- ಚನ್ನಗಿರಿ ಹಿರೇಮಠದಲ್ಲಿ ಶಿವಾನುಭವ ಗೋಷ್ಠಿ ಕಾರ್ಯಕ್ರಮ- - - ಚನ್ನಗಿರಿ: ನಮ್ಮನ್ನಾಳುವ ಸರ್ಕಾರಗಳು ಯಾವುದೇ ರಾಜಕೀಯ ಪಕ್ಷಗಳಿಗೆ ಸೇರಿದ್ದಾಗಿರಲಿ, ಬಡವರಿಗೆ ನೀಡುವಂತಹ ಯೋಜನೆಗಳು ಮತ್ತು ಸಾರ್ವತ್ರಿಕವಾಗಿ ರೂಪಿಸುವಂತಹ ಯೋಜನೆಗಳು ಶಾಶ್ವತವಾಗಿರಬೇಕು. ಆಗ ಅಂತಹ ಯೋಜನೆಗಳು ಜನಪ್ರಿಯತೆ ಪಡೆದುಕೊಳ್ಳುತ್ತವೆ ಎಂದು ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಮಹಾಸ್ವಾಮೀಜಿ ನುಡಿದರು.

ಪಟ್ಟಣದ ಕಲ್ಲುಸಾಗರ ಬೀದಿಯ ಬಸವೇಶ್ವರ ದೇವಾಲಯ ಹಿಂಭಾಗದ ಹಿರೇಮಠದಲ್ಲಿ ನಡೆದ 145ನೇ ಶಿವಾನುಭವ ಗೋಷ್ಠಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಮತಗಳಿಕೆ ಆಸೆಗಾಗಿ ಬಡವರು, ಸ್ಥಿತಿವಂತರು, ಜಮೀನ್ದಾರರಿಗೆಲ್ಲ ತಾತ್ಕಾಲಿಕ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದು ಇದರಿಂದ ಇಡೀ ವ್ಯವಸ್ಥೆಯೇ ದಿಕ್ಕೆಟ್ಟು ಹೋಗುವಂತಹ ಸ್ಥಿತಿಯಾಗಿದೆ. ಶಾಶ್ವತ ಯೋಜನೆಗಳನ್ನು ರೂಪಿಸಿದ ಜನನಾಯಕರು ಸದಾ ಜನರ ಸ್ಮರಣೆಯಲ್ಲಿ ಇರಬಲ್ಲದು ಎಂದರು.

ಸ್ವಾತಂತ್ರ್ಯ ಬಂದು ಇಲ್ಲಿಯವರೆಗೆ ಹಲವಾರು ರಾಜಕೀಯ ಪಕ್ಷಗಳು ಕರ್ನಾಟಕ ರಾಜ್ಯದಲ್ಲಿ ಆಡಳಿತವನ್ನು ನಡೆಸಿವೆ. ಆದರೆ, ಯಾವುದೇ ಶಾಶ್ವತ ಯೋಜನೆಗಳನ್ನು ಜಾರಿಗೆ ತಂದಿಲ್ಲ. ವೃದ್ಧರು, ವಿಕಲಚೇತನರು, ವಿಧವೆಯರು, ಕಲಾವಿದರು ಇಂಥವರಿಗೆ ಸಹಾಯ ಆಗುವಂತೆ ಸಾಮಾಜಿಕ ಭದ್ರತಾ ಯೋಜನೆ ಮಾತ್ರ ಶಾಶ್ವತ ಆಗಿರುವುದನ್ನು ಕಾಣಬಹುದು. ಇದೊಂದನ್ನು ಬಿಟ್ಟರೆ ತಾತ್ಕಲಿಕವಾಗಿ ತರುವ ಯೋಜನೆಗಳೆಲ್ಲವೂ ಅಧಿಕಾರ ನಡೆಸುವ ಕೆಟ್ಟ ಆಸೆಗಾಗಿ ತಂದವಾಗಿವೆ ಎಂದು ಸರ್ಕಾರಗಳ ನಿಷ್ಕಾರಳಜಿ ಬಗ್ಗೆ ಬೇಸರಿಸಿದರು.

ಸಮಾರಂಭದಲ್ಲಿ ಪುರಸಭೆ ಮಾಜಿ ಸದಸ್ಯೆ ಎಚ್.ಎಸ್. ಪ್ರೇಮಾವತಿ, ಅಂಗನವಾಡಿ ಕಾರ್ಯಕರ್ತೆಯರ ಸಂಘದ ಮಾಜಿ ಕಾರ್ಯದರ್ಶಿ ಉಮಾದೇವಿ, ಮಹಿಳಾ ಸಂಘಟನೆಗಳ ಪ್ರಮುಖರಾದ ಸುಜಾತಮ್ಮ, ವೀಣಾ ವಸಂತ್, ಕರಿಸಿದ್ದಪ್ಪ ಮಾಸ್ತರ್ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಬಾಲಾಜಿ, ಶಿವಕೇಶವ, ಅಕ್ಕ ಮಹಾದೇವಿ ಮಹಿಳಾ ಭಜನಾ ಸಂಘದ ಸದಸ್ಯರು ಭಜನಾ ಪದಗಳನ್ನು ಹಾಡಿದರು.

- - - -19ಕೆಸಿಎನ್‌ಜಿ1:

ಶಿವಾನುಭವ ಗೋಷ್ಠಿ ಕಾರ್ಯಕ್ರಮದಲ್ಲಿ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡಿದರು.

PREV

Recommended Stories

ಬಾಗಲಕೋಟೆ ತೋಟಗಾರಿಕಾ ವಿಜ್ಞಾನ ವಿವಿಗೆ ಅನುದಾನ: ಸಚಿವ
ಸಂಭ್ರಮದ ಮೌನೇಶ್ವರ ಜಾತ್ರಾ ಮಹೋತ್ಸವ