ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಈ ವೇಳೆ ಕೋಳಿ ಕುಣಿತ ಹಾಗೂ ಗೊಂಬೆಗಳು, ಹುಲಿವೇಷ ಕುಣಿತ, ಹೀರೂರಿನ ಕರಡಿ ಮಜಲು, ಸನಾದಿ ಬ್ಯಾಂಡ್‌ಸೆಟ್, ಜೋಗತಿ ನೃತ್ಯ, ಕುದುರೆ ಕುಣಿತ, ಹಲಗಿ ಮೇಳ, ನಾಸಿಕ ಡೋಲು, ವೀರಗಾಸೆ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳ ಪ್ರದರ್ಶನಗಳು ಮೆರವಣಿಗೆಯ ಆಕರ್ಷಣೆಯಾಗಿದ್ದವು. ಮಹಿಳೆಯರು ಕುಂಭಕಳಶದೊಂದಿಗೆ ಭಾಗವಹಿಸಿದ್ದರು. ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ಭಕ್ತರು ಮೆರವಣೆಯಲ್ಲಿ ಪಾಲ್ಗೊಂಡು ದೇವಿ ಕೃಪೆಗೆ ಪಾತ್ರರಾದರು.ಕಟ್ಟೆಯ ಮೇಲೆ ಪ್ರತಿಷ್ಠಾಪಣೆಗೊಂಡಿದ್ದ ಗ್ರಾಮ ದೇವತೆ ಹಾಗೂ ಶಾರದಾ ದೇವಿ ಭಕ್ತರಿಗೆ ದರ್ಶನ ನೀಡಿದರು. ಗ್ರಾಮ ದೇವತೆ ಜಾತ್ರೆಯಲ್ಲಿ ಭಾಗವಹಿಸಿದ್ದ ಭಕ್ತರು ತಮ್ಮ ಹರಕೆಗಳನ್ನು ತೀರಿಸಿ ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥಿಸಿದರು. ಜಾತ್ರೆ ಹಿನ್ನೆಲೆಯಲ್ಲಿ ಶುಕ್ರವಾರ ಮುಂಜಾನೆಯಿಂದಲೇ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಎಲ್ಲ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡು ಗ್ರಾಮ ದೇವತೆಗೆ ವಿಶೇಷ ಪೂಜೆ ಸಲ್ಲಿಸಿದರು. ಮಹಿಳೆಯರು ಸಂಭ್ರಮದಿಂದ ದೇವತೆಯ ಮೆರವಣಿಗೆಯಲ್ಲಿ ಭಾಗಿಯಾಗಿ ಪುನೀತರಾದರು. ಜಾತ್ರಾ ಕಮಿಟಿಯ ಮುಖ್ಯಸ್ಥರಾದ ಶರಣು ಸಜ್ಜನ, ಸುನೀಲ ಇಲ್ಲೂರ, ಸಂಗನಗೌಡ ಬಿರಾದಾರ, ಸತೀಶ ಓಸ್ವಾಲ್, ಪ್ರಭುರಾಜ ಕಲಬುರ್ಗಿ, ಸುರೇಶ ಪಾಟೀಲ, ಪುರಸಭೆ ಅಧ್ಯಕ್ಷ ಮೈಬೂಬ ಗೊಳಸಂಗಿ, ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಹಿರಿಯ ಮುಖಂಡರಾದ ಎಂ.ಬಿ.ನಾವದಗಿ ನೇತೃತ್ವ ವಹಿಸಿದ್ದರು.ಜಾತ್ರೆ ನಿಮಿತ್ತ ಆಯಕಟ್ಟಿನ ಸ್ಥಳಗಳಲ್ಲಿ ಸಿಪಿಐ ಪೈಸುವುದ್ದಿನ ಹಾಗೂ ಪಿಎಸೈ ಸಂಜಯಕುಮಾರ ತಿಪ್ಪಾರೆಡ್ಡಿ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್‌ನ್ನು ಒದಗಿಸಲಾಗಿತ್ತು. ಎಲ್ಲ ಪ್ರಮುಖ ರಸ್ತೆಗಳಲ್ಲಿ, ಮನರಂಜನಾ ಸ್ಥಳಗಳಲ್ಲಿ ದೇವಸ್ಥಾನಗಳಲ್ಲಿ ಎಲ್ಲಡೆ ಸಿಸಿ ಟಿವಿ ಅಳವಡಿಸಲಾಗಿತ್ತು. ಜಾತ್ರೆ ಹಿನ್ನಲೆಯಲ್ಲಿ ಭಕ್ತರಿಗಾಗಿ ಮಹಾಪ್ರಸಾದ ವಿತರಣೆ, ಸಂಜೆ ವಿವಿಧ ಖ್ಯಾತ ಕಲಾವಿದರಿಂದ ಗಾಯಕರಿಂದ ಮನರಂಜನೆ ಕಾರ್ಯಕ್ರಮಗಳನ್ನು, ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಲಾಗಿದೆ.ಈಕೆಪಿಸಿಸಿ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಪಲ್ಲವಿ ನಾಡಗೌಡ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಶ್ರೀಕಾಂತ ಚಲವಾದಿ, ಎಂ.ಎಸ್.ನಾವದಗಿ, ಡಾ.ವಿರೇಶ ಪಾಟೀಲ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಗುರಲಿಂಗಪ್ಪಗೌಡ ಪಾಟೀಲ, ಗಣೇಶ ಅನ್ನಗೋನಿ, ಬಾಲಾಜಿ ಶುಗರ್ಸ್‌ನ ಮುಖ್ಯಸ್ಥ ರಾಹುಲಗೌಡ ಪಾಟೀಲ, ಮುತ್ತು ಕಡಿ, ಗಫೂರಸಾಬ ಮಕಾಂದಾರ, ಸಿ.ಎಲ್.ಬಿರಾದಾರ, ವಿರುಪಾಕ್ಷೀ ಪತ್ತಾರ, ರಾಜು ಬಳ್ಳೋಳ್ಳಿ, ರುದ್ರುಗೌಡ ಅಂಗಡಗೇರಿ, ಸಾಧನಾ ಮಹಿಳಾ ಒಕ್ಕೂಟದ ಮುಖ್ಯಸ್ಥೆ ಗಿರಿಜಾ ಕಡಿ, ನೀಲಮ್ಮ ಚಲವಾದಿ, ಕಲಾವತಿ ಬಡಿಗೇರ, ಶೋಭಾ ಶಳ್ಳಗಿ, ಸತೀಶ ಕುಲಕರ್ಣೀ, ಪುರಸಭೆ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಸೇರಿ ಸಾವಿರಾರು ಜನ ಭಾಗವಹಿಸಿದ್ದರು.