ಲಕ್ಷ್ಮೇಶ್ವರದಲ್ಲಿ ಗಣೇಶನಿಗೆ ಅದ್ಧೂರಿ ವಿದಾಯ

KannadaprabhaNewsNetwork |  
Published : Sep 09, 2025, 01:01 AM IST
ಪೊಟೊ- ಲಕ್ಷ್ಮೇಶ್ವರದ ಶ್ರೀ ಸೊಮೇಶ್ವರ ತೇರಿನ ಮನೆ ಹತ್ತಿರದ ಗಣೇಶನ ಮೂರ್ತಿ ವಿಸರ್ಜನೆಗೆ ಸಿಪಿಐ ನಾಗರಾಜ ಮಾಡಳ್ಳಿ ಉದ್ಘಾಟಿಸಿದರು. ಪಿಎಸೈ ನಾಗರಾಜ ಗಡಾದ, ಶಿವಯೋಗಿ ಅಂಕಲಕೋಟಿ, ಅಶ್ವಿನಿ ಅಂಕಲಕೋಟಿ, ಗುರಣ್ಣ ಪಾಟೀಲ ಕುಲಕರ್ಣಿ ಇದ್ದರು. | Kannada Prabha

ಸಾರಾಂಶ

ಪಟ್ಟಣದ ಸೋಮೇಶ್ವರ ತೇರಿನ ಮನೆಯ ಹತ್ತಿರ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿ ವಿಸರ್ಜನಾ ಕಾರ್ಯಕ್ರಮ ಸೋಮವಾರ ಸಾಂಸ್ಕೃತಿಕ ಮೇಳದೊಂದಿಗೆ ಮೆರವಣಿಗೆಯ ಮೂಲಕ ಶ್ರದ್ಧಾ, ಭಕ್ತಿಯಿಂದ ನಡೆಯಿತು.

ಲಕ್ಷ್ಮೇಶ್ವರ: ಪಟ್ಟಣದ ಸೋಮೇಶ್ವರ ತೇರಿನ ಮನೆಯ ಹತ್ತಿರ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿ ವಿಸರ್ಜನಾ ಕಾರ್ಯಕ್ರಮ ಸೋಮವಾರ ಸಾಂಸ್ಕೃತಿಕ ಮೇಳದೊಂದಿಗೆ ಮೆರವಣಿಗೆಯ ಮೂಲಕ ಶ್ರದ್ಧಾ, ಭಕ್ತಿಯಿಂದ ನಡೆಯಿತು.ಸೋಮವಾರ ಮಧ್ಯಾಹ್ನ ಮೆರವಣಿಗೆಯನ್ನು ತೇರಿನ ಮನೆಯಿಂದ ಪ್ರಾರಂಭಿಸಲಾಯಿತು. ಮೆರವಣಿಗೆಗೆ ಸಿಪಿಐ ನಾಗರಾಜ ಮಾಡಳ್ಳಿ, ಪಿಎಸ್‌ಐ ನಾಗರಾಜ ಗಡಾದ, ಪುರಸಭೆ ಸದಸ್ಯೆ ಅಶ್ವಿನಿ ಅಂಕಲಕೋಟಿ ಚಾಲನೆ ನೀಡಿದರು. ಪಟ್ಟಣದ ಬಹುತೇಕ ಜನರ ಮೆಚ್ಚುಗೆಗೆ ಪಾತ್ರರಾದರು. ಎಲ್ಲೆಡೆ ಸಾವಿರಾರು ಜನರು ಕಟ್ಟಡಗಳ ಮೇಲೆ ನಿಂತು ಕಲಾವಿದರ ಕಲೆಯನ್ನು ಕಂಡು ಸಂತಸ ವ್ಯಕ್ತಪಡಿಸಿದರು. ಇದರ ಜೊತೆ ಬೃಹತ್ ಗೊಂಬೆಗಳು ಆಕರ್ಷಣೆಯಾಗಿದ್ದವು. ಈ ವೇಳೆ ಸಿಪಿಐ ನಾಗರಾಜ ಮಾಡಳ್ಳಿ ಮಾತನಾಡಿ, ವಿಘ್ನನಿವಾರಕ ಗಣೇಶನ ಹಬ್ಬವನ್ನು ಪಟ್ಟಣದಲ್ಲಿ ಎಲ್ಲೆಡೆ ಶಾಂತಿ ಮತ್ತು ಅದ್ಧೂರಿಯಾಗಿ ಆಚರಿಸುತ್ತಿರುವುದು ಮೆಚ್ಚುಗೆಯ ಸಂಗತಿಯಾಗಿದ್ದು, ಭಾವೈಕ್ಯತೆಯ ಕೇಂದ್ರವಾಗಿರುವ ಲಕ್ಷ್ಮೇಶ್ವರಕ್ಕೆ ಗಣೇಶೋತ್ಸವದ ಆಚರಣೆ ಮತ್ತಷ್ಟು ಮೆರುಗು ತಂದಿದೆ. ಇಲಾಖೆಯೊಂದಿಗೆ ಎಲ್ಲ ಮಂಡಳಿಯವರು ನೀಡುತ್ತಿರುವ ಸಹಕಾರದಿಂದ ಹಬ್ಬಗಳು ಯಶಸ್ವಿಯಾಗಿವೆ ಎಂದರು.ಹಾವೇರಿ ಜಿಲ್ಲೆಯ ಜಾಂಜ್ ಮೇಳದ ಯುವ ತಂಡದ ಕಲಾವಿದರ ಕೈ ಚಳಕ ಎಲ್ಲರನ್ನು ಬೆರಗುಗೊಳಿಸಿತ್ತು. ಅದರ ಜೊತೆ ಲಕ್ಷ್ಮೇಶ್ವರದ ಕುದುರೆಕಾರರ ಕುಣಿತ, ನಂದಿಕೋಲ ಕುಣಿತದ ತಂಡಗಳು ಮೆರವಣಿಗೆಯ ವೈಭವಕ್ಕೆ ಸಾಕ್ಷಿಯಾದವು. ಜೊತೆ ದೊಡ್ಡ ಮತ್ತು ಸಣ್ಣ ಗೊಂಬೆಗಳ ವೇಷಧಾರಿಗಳು ಕುಣಿದು ಪ್ರೇಕ್ಷಕರಿಗೆ ಮುದ ನೀಡುವ ಕಾರ್ಯ ಮಾಡಿ ಮೆರವಣಿಗೆಯಲ್ಲಿ ಆಕರ್ಷಣೆಯಾಗಿದ್ದರು.ಈ ಸಂದರ್ಭದಲ್ಲಿ ಪಿಎಸ್‌ಐ ನಾಗರಾಜ ಗಡಾದ, ಪುರಸಭೆ ಸದಸ್ಯೆ ಅಶ್ವಿನಿ ಅಂಕಲಕೋಟಿ, ಕವಿತಾ ಶರಸೂರಿ, ಶೋಭಾ ಮೆಣಸಿನಕಾಯಿ, ವಾಣಿ ಹತ್ತಿ, ಮಂಜುಳಾ ಗುಂಜಳ, ಮಹಾದೇವಪ್ಪ ಅಣ್ಣಿಗೇರಿ, ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿ ಅಧ್ಯಕ್ಷ ಗುರಣ್ಣ ಪಾಟೀಲ ಕುಲಕರ್ಣಿ, ಚಂಬಣ್ಣ ಬಾಳಿಕಾಯಿ, ಸಿದ್ದನಗೌಡ ಬಳ್ಳೊಳ್ಳಿ, ಶಿವಯೋಗಿ ಅಂಕಲಕೋಟಿ, ಪೂರ್ಣಾಜಿ ಖರಾಟೆ, ಪ್ರಕಾಶ ಮುಳಗುಂದ, ಸುರೇಶ ಚೌಕನವರ, ಗಂಗಾಧರ ಉಮಚಗಿ, ಬಸವರಾಜ ಮೆಣಸಿನಕಾಯಿ, ಗಂಗಾಧರ ಶಿಗ್ಲಿಮಠ, ಬಸವಣ್ಣೆಪ್ಪ ನಂದೆಣ್ಣವರ, ಮಯೂರಗೌಡ ಪಾಟೀಲ, ಸಂತೋಷ ಜಾವೂರ, ಶಿವು ಹೊಟ್ಟಿ, ರಾಜಶೇಖರ ಶಿಗ್ಲಿಮಠ, ಚಂದ್ರು ಹುರಕಡ್ಲಿ, ನೀಲಪ್ಪ ಯತ್ನಳ್ಳಿ, ಭರಮಪ್ಪ ಕೊಡ್ಲಿ, ಈರಣ್ಣ ಆದಿ, ರಾಮಣ್ಣ ಗೌರಿ ಸೇರಿದಂತೆ ಸಮಿತಿ ಸದಸ್ಯರು ಹಾಗೂ ಸಾರ್ವಜನಿಕರು ಇದ್ದರು.

PREV

Recommended Stories

ವಾಲ್ಮೀಕಿಗೆ ದೇವರ ಪಟ್ಟ ಕೊಡದಿರುವುದು ದುರಂತ: ಡಾ.ಗೋಪಾಲ
ಚರ್ಚ್‌ನಲ್ಲಿ ನಡೆದಿರುವುದು ಆತ್ಮಹತ್ಯೆಯಲ್ಲ, ಕೊಲೆ: ಆರೋಪ