ಶಿಸ್ತು, ಶ್ರಮ, ಏಕಾಗ್ರತೆಯಿಂದ ಯಶಸ್ಸು: ಪ್ರಭುಲಿಂಗ ಕೊಡದ

KannadaprabhaNewsNetwork |  
Published : Sep 09, 2025, 01:01 AM IST
ರಾಣಿಬೆನ್ನೂರಿನ ಎಸ್‌ಟಿಜೆಐಟಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಸಂಜೀವಿನಿ ಪಪೂ ಕಾಲೇಜಿನ ಪ್ರಾ. ಪ್ರಭುಲಿಂಗ ಕೊಡದ ಉದ್ಘಾಟಿಸಿದರು. | Kannada Prabha

ಸಾರಾಂಶ

ವಿದ್ಯೆಗೆ ವಿನಯವೇ ಭೂಷಣವಾಗಿದ್ದು, ಶೈಕ್ಷಣಿಕ ಜೀವನದ ಜತೆಗೆ ಸಂಸ್ಕಾರಕ್ಕೆ ಆದ್ಯತೆಯನ್ನು ನೀಡಿ ಉತ್ತಮ ವಿದ್ಯಾರ್ಥಿಗಳಾಗಿ ತಂದೆ- ತಾಯಿಗಳಿಗೆ, ಸಮಾಜಕ್ಕೆ ಒಳ್ಳೆಯ ಹೆಸರು ಬರುವಂಥ ಸಾಧನೆ ಮಾಡಿ.

ರಾಣಿಬೆನ್ನೂರು: ವ್ಯಾಸಂಗದ ಅವಧಿಯಲ್ಲಿ ಪಠ್ಯಪುಸ್ತಕಗಳ ಕೈ ಹಿಡಿದಲ್ಲಿ ಭವಿಷ್ಯದಲ್ಲಿ ಅವರಿವರ ಕಾಲು ಹಿಡಿಯುವುದು ತಪ್ಪುತ್ತದೆ ಎಂದು ನಗರದ ಸಂಜೀವಿನಿ ಪಪೂ ಕಾಲೇಜಿನ ಪ್ರಾ. ಪ್ರಭುಲಿಂಗ ಕೊಡದ ತಿಳಿಸಿದರು.ನಗರದ ಎಸ್‌ಟಿಜೆಐಟಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ವಿದ್ಯೆಗೆ ವಿನಯವೇ ಭೂಷಣವಾಗಿದ್ದು, ಶೈಕ್ಷಣಿಕ ಜೀವನದ ಜತೆಗೆ ಸಂಸ್ಕಾರಕ್ಕೆ ಆದ್ಯತೆಯನ್ನು ನೀಡಿ ಉತ್ತಮ ವಿದ್ಯಾರ್ಥಿಗಳಾಗಿ ತಂದೆ- ತಾಯಿಗಳಿಗೆ, ಸಮಾಜಕ್ಕೆ ಒಳ್ಳೆಯ ಹೆಸರು ಬರುವಂಥ ಸಾಧನೆ ಮಾಡಿ. ಯಶಸ್ಸು ಗಳಿಸಿದರೆ ಜೀವನದಲ್ಲಿ ಎಲ್ಲವೂ ನಿಮ್ಮನ್ನು ಹಿಂಬಾಲಿಸಿ ಬರುತ್ತದೆ. ಆದರೆ ಸಂತೋಷ, ವೈಭೋಗದ ಹಿಂದೆ ಓಡಿದರೆ ಯಶಸ್ಸು ಖಂಡಿತ ನಿಮ್ಮದಾಗುವುದು ಅಸಾಧ್ಯ. ಶಿಸ್ತು, ಕಠಿಣ ಪರಿಶ್ರಮ, ದೃಢಸಂಕಲ್ಪ, ಸಾಧಿಸುವ ಛಲ, ಏಕಾಗ್ರತೆ ಈ ಎಲ್ಲವನ್ನು ನಿಮ್ಮಲ್ಲಿ ಬೆಳೆಸಿಕೊಂಡಾಗ ಯಶಸ್ಸು ತಾನಾಗಿಯೇ ಒಲಿದು ಬರುತ್ತದೆ ಎಂದರು. ಪ್ರಾ. ಡಾ. ಎಸ್.ಜಿ. ಮಾಕನೂರು ಅಧ್ಯಕ್ಷತೆ ವಹಿಸಿದ್ದರು. ಡೀನ್ ಅಕಾಡೆಮಿಕ್ಸ್ ಡಾ. ಎಸ್.ಎಫ್. ಕೊಡದ, ಡಾ. ಎಂ.ಈ. ಶಿವಕುಮಾರ ಹೊನ್ನಾಳಿ, ವಿವಿಧ ವಿಭಾಗದ ಮುಖ್ಯಸ್ಥರಾದ ಪ್ರೊ. ಸಿ.ಎಂ. ಪರಮೇಶ್ವರಪ್ಪ, ಡಾ. ಬಿ. ಮಹೇಶ್ವರಪ್ಪ, ಡಾ. ಮುಜಿಬುಲ್ಲಾ ಖಾನ್ ಗುತ್ತಲ, ಪ್ರೊ. ದಿನೇಶ್ ಮಾಗನೂರ, ಡಾ. ಡಿ.ಎಸ್. ವಿಶ್ವನಾಥ, ಪ್ರೊ. ಪುಷ್ಪ ತೆಂಬದ, ಪ್ರೊ. ಸಿ.ಎಂ. ಶ್ವೇತಾ, ಪ್ರೊ. ಭಾವನಾ ಪಾಟೀಲ ಉಪಸ್ಥಿತರಿದ್ದರು.10ರಂದು ಸಮೀಕ್ಷೆ ತಾರತಮ್ಯ ನೀತಿ ಖಂಡಿಸಿ ಪ್ರತಿಭಟನೆ

ರಾಣಿಬೆನ್ನೂರು: ಜಿಲ್ಲಾಡಳಿತ ಬೆಳೆಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸುವ ವಿಚಾರದಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಸೆ. 10ರಂದು ರೈತ ಸಂಘದಿಂದ ತಾಲೂಕಿನ ಹೆಡಿಯಾಲ ಗ್ರಾಮದ ಬಳಿ ಹರಿಹರ- ಸಮಸ್ಸಗಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಯಲಿದೆ.ತಾಲೂಕಿನಲ್ಲಿ ಬೆಳೆಹಾನಿ ಸಮೀಕ್ಷೆ ಮಾಡದೆ ಮಲತಾಯಿ ಧೋರಣೆ ಅನುಸರಿಸಿರುವುದನ್ನು ಖಂಡಿಸಿ ಕೂಡಲೇ ಬೆಳೆಹಾನಿ ಸಮೀಕ್ಷೆ ಮಾಡಿ ವೈಜ್ಞಾನಿಕ ಮಾದರಿಯಲ್ಲಿ ಪರಿಹಾರ ನೀಡುವಂತೆ ಒತ್ತಾಯಿಸಿ ಬುಧವಾರ ಬೆಳಗ್ಗೆ 10ಕ್ಕೆ ಎಂದು ಕರ್ನಾಟಕ ರಾಜ್ಯ ರೈತ ಸಂಘಟನೆ ರವೀಂದ್ರಗೌಡ ಪಾಟೀಲ, ಈರಣ್ಣ ಹಲಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV

Recommended Stories

ಧರ್ಮಸ್ಥಳ: ಬಂಗ್ಲೆಗುಡ್ಡದಲ್ಲಿ ಮತ್ತೆರಡು ತಲೆಬುರುಡೆ ಪತ್ತೆ
ದಸರಾ : ಬೆಂಗಳೂರು ನಗರದಿಂದ ವಿವಿಧೆಡೆ ವಿಶೇಷ ರೈಲು