ಮಹದೇಶ್ವರ ಬೆಟ್ಟದಲ್ಲಿ ವಿಜೃಂಭಣೆಯ ಕೊಂಡೋತ್ಸವ

KannadaprabhaNewsNetwork |  
Published : Feb 20, 2026, 02:00 AM IST
ಮಲೆಯ ಮಹದೇಶ್ವರ ಬೆಟ್ಟದಲ್ಲಿ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ವಿಜೃಂಭಣೆಯ ಕೊಂಡೋತ್ಸವ | Kannada Prabha

ಸಾರಾಂಶ

ಮಹಾಶಿವರಾತ್ರಿ ಮಾದಪ್ಪನ ಸನ್ನಿಧಿಯಲ್ಲಿ ಕೊಂಡೋತ್ಸವದೊಂದಿಗೆ ಶಿವರಾತ್ರಿ ಜಾತ್ರೆಗೆ ತೆರೆಬಿದ್ದಿತು. ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ರಾಜಗೋಪುರದ ಮುಂಭಾಗದ ಸ್ಥಳದಲ್ಲಿ ಪ್ರತಿ ವರ್ಷದಂತೆ ಬೇಡಗಂಪಣ ಸಮುದಾಯ ಅರ್ಚಕರಿಂದ ಮಹಾಶಿವರಾತ್ರಿ ಕೊಂಡೋತ್ಸವಕ್ಕೆ ಸಾಲೂರು ಬೃಹನ್ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಸಾನಿಧ್ಯದಲ್ಲಿ 12 ಬುಡಕಟ್ಟು ಸಮುದಾಯದ ಬೇಡಗಂಪಣ ಅರ್ಚಕರ ತಂಡ ಪೂಜೆ ಸಲ್ಲಿಸಿದರು.

- ಸಾಲೂರು ಬೃಹನ್‌ ಮಠದ ಶ್ರೀಗಳ ದಿವ್ಯಸಾನಿಧ್ಯದಲ್ಲಿ ಬೇಡಗಂಪಣ ಅರ್ಚಕರಿಂದ ಧಾರ್ಮಿಕ ವಿಧಿವಿಧಾನ

---

ಕನ್ನಡಪ್ರಭ ವಾರ್ತೆ ಹನೂರು

ಕೊಂಡೋತ್ಸವ ವಿಶೇಷ:ಬೇಡಗಂಪಣ ಸಮುದಾಯದ ಅರ್ಚಕರು ಸಂಪ್ರದಾಯದಂತೆ ಮಡಿವಂತಿಕೆಯಿಂದ ಬೆಳಿಗ್ಗೆಯಿಂದ ಉಪವಾಸವಿದ್ದು ರಾಜಗೋಪುರದ ಮುಂಭಾಗ 5 ಟನ್ ಸೌದೆ ಕೊಂಡೋತ್ಸವದಲ್ಲಿ ಹಾಕಿ ವಿಧಿವಿಧಾನಗಳೊಂದಿಗೆ ಪೂಜೆ ಸಲ್ಲಿಸಿದರು. ಸಂಜೆ 4ರಿಂದ 6 ಗಂಟೆವರೆಗೆ ಉರಿದ ಸೌದೆ ಕೆಂಡವಾದ ನಂತರ ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ನಡೆಯುವ ಪೂಜಾ ಕಾರ್ಯಕ್ರಮವು ಮಹಾಶಿವರಾತ್ರಿಯ ಹಬ್ಬದ ಅಂಗವಾಗಿ ಬುಧವಾರ ರಾತ್ರಿ 9ರ ಬಳಿಕ ಭಕ್ತರ ಸಮ್ಮುಖದಲ್ಲಿ ನಡೆದ ವಿಜೃಂಭಣೆಯಿಂದ ಕೊಂಡೋತ್ಸವ ನಡೆಯಿತು.

ನೋಡಲು ಮುಗಿಬಿದ್ದ ಭಕ್ತರು:

ಮಹಾಶಿವರಾತ್ರಿಯ ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ್ದ ಭಕ್ತರು ಕೊಂಡೋತ್ಸವ ನಡೆಯುವ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ನೋಡಲು ಮುಗಿಬಿದ್ದು ಕೊಂಡೋತ್ಸವವನ್ನು ಕಣ್ತುಂಬಿಕೊಂಡರು.

ಇದೇ ಸಂದರ್ಭದಲ್ಲಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಇ ರಘು, ಉಪ ಕಾರ್ಯದರ್ಶಿ ಚಂದ್ರಶೇಖರ್‌, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಶಿಧರ್, ಉಪ ವಿಭಾಗ ಡಿವೈಎಸ್ಪಿ ಧರ್ಮೇಂದರ್‌, ಜನಪದ ಪರಿಷತ್ತು ಸದಸ್ಯ ರಾಜ್ಯಾಧ್ಯಕ್ಷ ಮಹೇಶ್ ಚಿಕ್ಕಲೂರು, ಇನ್ಸ್‌ಪೆಕ್ಟರ್‌ ಜಗದೀಶ್, ಹಿರಿಯ ಅರ್ಚಕ ಕೆ.ವಿ. ಮಾದೇಶ್, ಮುಖಂಡ ಮುರುಗ, ಪಾರು ಪತ್ತೆದಾರರಾದ ಮಹದೇವಸ್ವಾಮಿ, ದ್ವಿತೀಯ ದರ್ಜೆ ಸಹಾಯಕ ಸರಗೂರು ಮಹಾದೇವಸ್ವಾಮಿ, ಅರ್ಚಕರು, ಸಿಬ್ಬಂದಿ ವರ್ಗ ಪೊಲೀಸ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

---

19ಸಿಎಚ್‌ಎನ್17

ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಕೊಂಡೋತ್ಸವ ಸಾಲೂರು ಬೃಹನ್ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ಸಾನಿಧ್ಯದಲ್ಲಿ ನಡೆಯಿತು.

---

19ಸಿಎಚ್ಎನ್‌ 16

ಹನೂರು ತಾಲೂಕಿನ ಮಹದೇಶ್ವರ ಬೆಟ್ಟದಲ್ಲಿ ಮಹಾಶಿವರಾತ್ರಿ ಹಬ್ಬದ ನಡೆದ ಕೊಂಡೋತ್ಸವದಲ್ಲಿ ಬೇಡಗಂಪಣ ಅರ್ಚಕರ ತಂಡದವರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಸಿಲಿನಿಂದ ಪಾರಾಗಲು ಪೌರಕಾರ್ಮಿಕರಿಗೆ ಕೂಲಿಂಗ್ ಕಿಟ್
ಕುಡಿದು ಟೆಸ್ಟ್‌ ಡ್ರೈವ್‌ ಕಾರು ಚಲಾಯಿಸಿ ವಾಹನಗಳಿಗೆ ಗುದ್ದಿಸಿದ್ದವನಿಗೆ ಗೂಸಾ