ದಾಬಸ್‍ಪೇಟೆ: ತ್ಯಾಮಗೊಂಡ್ಲು ಹೋಬಳಿಯ ಐತಿಹಾಸಿಕ ಗಂಗರಸರ ರಾಜಧಾನಿ ಮಣ್ಣೆ ಗ್ರಾಮದಲ್ಲಿ ಮಣ್ಣಮ್ಮದೇವಿಯ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿಸಲಾಯಿತು.
ರಥೋತ್ಸವವನ್ನು ಶ್ರದ್ಧಾಭಕ್ತಿಯಿಂದ ಭಕ್ತರು ಜಯಘೋಷಗಳ ನಡುವೆ ರಥ ಎಳೆದರು. ತೇರು ಮುಂದೆ ಸಾಗುತ್ತಿದಂತೆ ಭಕ್ತರು ರಥೋತ್ಸವಕ್ಕೆ ಬಾಳೆಹಣ್ಣು ಎಸೆದು ಹರಕೆ ತೀರಿಸಿದ ಧನ್ಯತೆಯಿಂದ ಪೂಜೆ ಸಲ್ಲಿಸಲು ಮುಂದಾದರು.
ಬೆಳಗಿನಿಂದಲೂ ಆಗಮಿಸಿದ್ದ ಜನ ಸಮೂಹ ಸ್ಥಳೀಯ ಗ್ರಾಮಸ್ಥರೊಂದಿಗೆ ಸೇರಿ ಶ್ರೀ ಮಣ್ಣಮ್ಮದೇವಿಯ ಉತ್ಸವ ಮೂರ್ತಿಯನ್ನು ಬಣ್ಣ ಬಣ್ಣದ ಹೂಗಳಿಂದ ಅಲಂಕಾರ ಮಾಡಿದ್ದ ಎತ್ತರದ ರಥದಲ್ಲಿರಿಸಿ ವೇದ ಮಂತ್ರ ಘೋಷಗಳೊಂದಿಗೆ ಎಳೆದರು.ಬಿಸಿಲಿನಿಂದ ರಥೋತ್ಸವದ ಸಮಯ ಬದಲು: ಈ ಬಾರಿ ಬಿಸಿ ಗಾಳಿಯೊಂದಿಗೆ ಬಿಸಿಲು ಹೆಚ್ಚಾಗಿರುವ ಕಾರಣ ಪ್ರತೀತಿಯಂತೆ ಮಧ್ಯಾಹ್ನ ನಡೆಯಬೇಕಿದ್ದ ರಥೋತ್ಸವವನ್ನು ಸಂಜೆ 5.30ರ ವೇಳೆಗೆ ಸಮಯ ಬದಲು ಮಾಡಿ ಮಣ್ಣಮ್ಮ ದೇವಿಯ ಮೂರ್ತಿಯಿದ್ದ ರಥವನ್ನು ಊರಿನ ಪ್ರಮುಖ ಬೀದಿಯಲ್ಲಿ ಎಳೆದರು.
ಶ್ರೀ ಮಣ್ಣಮ್ಮದೇವಿ ಜಾತ್ರೆಯಲ್ಲಿ ಬೇಸಿಗೆಯ ಬಿಸಿಗೆ ಭಕ್ತಾದಿಗಳು ತಂಪಾಗಿರಲು ಪಾನಕ, ಮಜ್ಜಿಗೆ ಹಾಗೂ ನೆರೆದಿದ್ದ ಸಾವಿರಾರು ಭಕ್ತಾದಿಗಳಿಗೆ ಅನ್ನದಾನದ ವ್ಯವಸ್ಥೆಯನ್ನು ಹಲವು ಭಕ್ತಾದಿಗಳು ಏರ್ಪಡಿಸಿದ್ದರು.
ಪೋಟೋ 9 : ತ್ಯಾಮಗೊಂಡ್ಲು ಹೋಬಳಿಯ ಐತಿಹಾಸಿಕ ಗಂಗರಸರ ರಾಜಧಾನಿ ಮಣ್ಣೆ ಗ್ರಾಮದಲ್ಲಿ ಮಣ್ಣಮ್ಮದೇವಿಯ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿಸಲಾಯಿತು.