ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ನೇತೃತ್ವದಲ್ಲಿ ತಿರುಪತಿ ಶ್ರೀನಿವಾಸ ದೇವರ ಕಲ್ಯಾಣ ಮಹೋತ್ಸವವು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಎದುರಿನ ದೇವರಮಾರು ಗದ್ದೆಯಲ್ಲಿ ನಿರ್ಮಿಸಲಾದ ಮಂಟಪದಲ್ಲಿ ಭಾನುವಾರ ಸಂಜೆಯ ಸುಮುಹೂರ್ತದಲ್ಲಿ ಅದ್ದೂರಿಯಿಂದ ನಡೆಯಿತು. ಶ್ರೀನಿವಾಸ-ಪದ್ಮಾವತಿಯರ ಕಲ್ಯಾಣ ಮಹೋತ್ಸವದ ಮರುಸೃಷ್ಟಿಯು ಸಹಸ್ರಾರು ಭಕ್ತರನ್ನು ಸಾಕ್ಷೀಕರಿಸಿಕೊಂಡು ನಡೆಸಲಾಯಿತು. ಶನಿವಾರ ಸಂಜೆ ಪುರಪ್ರವೇಶ ಮಾಡಿದ್ದ ಶ್ರೀನಿವಾಸ ದೇವರು, ೨೪ ಗಂಟೆಗಳ ಕಾಲ ವಿವಿಧ ಪೂಜಾರ್ಚನೆ ಸ್ವೀಕರಿಸಿದ ಬಳಿಕ ಭಾನುವಾರ ಸಂಜೆ ಕಲ್ಯಾಣೋತ್ಸವದ ಅಮೃತ ಘಳಿಗೆಯಲ್ಲಿ ಜತೆಯಾದರು.ಶ್ರೀನಿವಾಸ - ಪದ್ಮಾವತಿ ಕಡೆಯವರ ದಿಬ್ಬಣ, ಕಾಶೀ ಯಾತ್ರೆ ವಿಧಿ, ವಧೂ ವರರ ಎದುರುಗೊಳ್ಳುವಿಕೆ, ಮಂಗಳ ವಾದ್ಯಗಳ ಸಮ್ಮಿಲನ, ಗಣಪತಿ ಪ್ರಾರ್ಥನೆ, ಲಕ್ಷ್ಮೀ - ಪದ್ಮಾವತಿ ಪೂಜೆ, ಶ್ರಿ ವೆಂಕಟರಮಣ ಪೂಜೆ, ಸಂಕೀರ್ತನೆ ಸೇವೆ, ರಾಜೋಪಚಾರ ಪೂಜೆ, ಕಲ್ಯಾಣ ಕಥಾ ಶ್ರವಣ, ಪನ್ನೀರ ಸಿಂಚನ, ಸುಮಂಗಲಿಯರ ಕಲಶ ನಿವೇದನ, ಹೋಮಾದಿ ಪವಿತ್ರ ಕಾರ್ಯಗಳ ಮೂಲಕ ಮಂಟಪದಲ್ಲಿ ಧಾರ್ಮಿಕ ಕಾರ್ಯಗಳು ವಿಧಿವತ್ತಾಗಿ ನಡೆಯಿತು.
ವಿಶೇಷ ವಿಧಿ ವಿಧಾನಗಳು: ರಾಜಾ ಹೋಮ, ಕಾಶಿಯಾತ್ರೆ ವಿಧಿ, ದಿಬ್ಬಣ ಆಗಮನ, ದಿಬ್ಬಣ ಸ್ವಾಗತ, ಗಣಪತಿ ಪೂಜೆ, ಲಕ್ಷ್ಮೀ ಪದ್ಮಾವತಿ ಪೂಜೆ, ಶ್ರೀ ವೆಂಕಟರಮಣ ಪೂಜೆ, ಕಲ್ಯಾಣ ಶ್ರವಣ, ಸಂಕೀರ್ತನ ಸೇವೆ, ವಧು ನಿರೀಕ್ಷಣ, ಕನ್ಯಾದಾನ, ಕಂಕಣ ಧಾರಣೆ, ಹಾರಾರ್ಪಣೆ, ಮಾಂಗಲ್ಯ ಪೂಜೆ, ಮಾಂಗಲ್ಯ ಧಾರಣೆ, ಅಕ್ಷತಾರೋಣ ಸೇವೆ, ನಾದೋಪಾಸನಾ ಸೇವೆ, ಮಾಲಾಧಾರಣ ಸೇವೆ ಉಡುಗೊರೆ ಸೇವೆ, ಅಷ್ಟಾವಧಾನ ಸೇವೆ, ಲೀಲಾ ವಿನೋದ ಸೇವೆ ನಡೆಯಿತು.
.................ಶ್ರೀನಿವಾಸ ಕಲ್ಯಾಣೋತ್ಸವದ ಸಂದರ್ಭದಲ್ಲಿ ಮಾಂಗಲ್ಯ ಧಾರಣರ ಬಳಿಕ ಪುರೋಹಿತರು ಸಂಕೀರ್ತನೆಯ ಜೊತೆಗೆ ಮೂರು ವರ್ಷ ಶ್ರೀನಿವಾಸ ಕಲ್ಯಾಣೋತ್ಸವ ಪೂರ್ಣಗೊಂಡಿದೆ. ಮುಂದಿನ ವರ್ಷ ಶಿವನ ಕ್ಷೇತ್ರದಲ್ಲಿ ಗಿರಿಜಾ ಕಲ್ಯಾಣ ಮಾಡುವ ಸಂಕಲ್ಪಕ್ಕೆ ಭಿನ್ನವಿಸಿಕೊಂಡರು. ಎಲ್ಲವೂ ಮಹಾಲಿಂಗೇಶ್ವರನ ಇಚ್ಚೆಯಾಗಿದ್ದು. ಈ ಕುರಿತು ಮಹಾಲಿಂಗೇಶ್ವರ ದೇವರಲ್ಲಿ ಪ್ರಾರ್ಥನೆ ಯೊಂದಿಗೆ ಕೇಳಿಕೊಳ್ಳಲಾಗುವುದು. ಅವರ ಒಪ್ಪಿಗೆ ಇದ್ದರೆ ದೇವರ ಇಚ್ಛೆಯಂತೆ ಗಿರಿಜಾ ಕಲ್ಯಾಣವೂ ಆಗಲಿದೆ.
-ಅರುಣ್ ಕುಮಾರ್ ಪುತ್ತಿಲ, ಅಧ್ಯಕ್ಷರು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ.