ಹರಪನಹಳ್ಳಿ: ಬೇಸಿಗೆ ರಜೆ ಮುಗಿಸಿ ಶಾಲೆಗೆ ಮರಳಿದ ಚಿಣ್ಣರಿಗೆ ತಾಲೂಕಿನಾದ್ಯಂತಹ ಜೂ.1ರಂದು ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿಯವರು, ಶಿಕ್ಷಣ ಇಲಾಖೆಯ ಅಧಿಕಾರಿಗಳು ವಿವಿಧ ರೀತಿಯಿಂದ ಅತ್ಯಂತ ವೈಭವದಿಂದ ಸ್ವಾಗತಿಸಿ ಕೊಂಡರು.ಹುಲ್ಲಿಕಟ್ಟಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಲೇಪಾಕ್ಷಪ್ಪನವರು ಹೂವು, ಚಾಕೋಲೇಟ್ ನೀಡುವ ಮೂಲಕ ಮಕ್ಕಳಿಗೆ ಸ್ವಾಗತ ಕೋರಿದರು.
ನಗರದ ಕುರುಬರಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರು, ಶಿಕ್ಷಕರು, ಮಕ್ಕಳಿಗೆ ಗುಲಾಬಿ ಹೂವು ನೀಡಿ, ಚಾಕೊಲೆಟ್ ವಿತರಿಸುವುದರ ಜೊತೆಗೆ ಒಂದನೇ ತರಗತಿಗೆ ದಾಖಲಾದ ಮಕ್ಕಳಿಗೆ ದಾನಿಗಳಿಂದ ಪಡೆದ ಉಚಿತ ಬ್ಯಾಗ್, ಪೆನ್ಸಿಲ್, ರಬ್ಬರ್ ನೀಡಿ ಬರಮಾಡಿಕೊಂಡರು.
ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆ, ಮೇನ್ ಶಾಲೆ, ಪೊಲೀಸ್ ಲೈನ್, ಉಪ್ಪಾರಗೇರಿ, 9ನೇ ವಾರ್ಡ್ ಶಾಲೆ, ಹರಿಹರ ಆಶ್ರಯ ಬಡಾವಣೆ ಶಾಲೆಗಳಲ್ಲೂ ಮಕ್ಕಳನ್ನು ವಿಶೇಷವಾಗಿ ಬರಮಾಡಿಕೊಳ್ಳಲಾಯಿತು.ಯಲ್ಲಾಪುರ, ಹಂಪಾಪುರ, ಅರಸನಾಳು, ಇಟ್ಟಿಗುಡಿ, ನೀಲಗುಂದ ಮುಂತಾದ ಶಾಲೆಗಳಿಗೆ ಬಿಇಒ ಲೇಪಾಕ್ಷಪ್ಪ ಭೇಟಿ ನೀಡಿ ಶಿಕ್ಷಕರಿಗೆ ಬೋಧನೆ ಕುರಿತು ಮಾರ್ಗದರ್ಶನ ಮಾಡಿದರು.
ಮಗ್ಗಿ ಸುಗ್ಗಿ ವಿನೂತನ ಕಾರ್ಯಕ್ರಮ:
ಮಿಂಚಿನ ಸಂಚಾರ:
ಜೂ.1ರಂದು ಹರಪನಹಳ್ಳಿ ತಾಲೂಕಿನಲ್ಲಿ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸಿಹಿ ನೀಡಿ, ಹೂವು ಮಳೆಗೈದು, ಆಕರ್ಷಣೀಯವಾಗಿ ಬರಮಾಡಿಕೊಳ್ಳಲಾಗಿದೆ. ಸರ್ಕಾರದ ಸೌಲಭ್ಯ ಕೊಟ್ಟು ಗುಣ ಮಟ್ಟದ ಶಿಕ್ಷಣ ನೀಡಲು ಕ್ರಮ ಕೈಗೊಳ್ಳಲಾಗಿದೆ ಎನ್ನುತ್ತಾರೆ ಹರಪನಹಳ್ಳಿ ಬಿಇಒ ಎಚ್.ಲೇಪಾಕ್ಷಪ್ಪ.