ಕನ್ನಡಪ್ರಭ ವಾರ್ತೆ ಮಳವಳ್ಳಿ
ಭಾವೈಕ್ಯತಾ ರಥಯಾತ್ರೆ ಹಿನ್ನೆಲೆಯಲ್ಲಿ ಬೀದಿ ಬೀದಿಗಳಲ್ಲಿ ಮಾವಿನ ಎಲೆ-ಬಾಳೆ ಕಂದುಗಳನ್ನು ಕಟ್ಟಿ, ರಸ್ತೆ ಉದ್ದಕ್ಕೂ ರಂಗೋಲಿ ಬಿಟ್ಟು ನಡೆದಾಡುವ ದೇವರನ್ನು ಮಂಗಳವಾದ್ಯದೊಂದಿಗೆ ಬರಮಾಡಿಕೊಂಡು ಶ್ರೀಗಳಿಗೆ ಭಕ್ತಿ ಸಮರ್ಪಿಸಿದರು.
ಅಶೋಕ ನಗರದ ಇತಿಹಸ ಪ್ರಸಿದ್ಧ ಸಿದ್ದಪ್ಪಾಜಿ ದೇವಸ್ಥಾನ ಹಾಗೂ ಶ್ರೀರಾಮಮಂದಿರಕ್ಕೆ ಶ್ರೀಗಳು ತೆರಳಿ ಪೂಜೆ ಸಲ್ಲಿಸಿದರು. ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಶ್ರೀಗಳ ಅಶೀರ್ವಾದ ಪಡೆದರು.ಸುತ್ತೂರಿನ ಶ್ರೀಶಿವರಾತ್ರಿದೇಶಿಕೇಂದ್ರ ಶ್ರೀಗಳು ಅರ್ಶೀವಚನ ನೀಡಿ, ಮಕ್ಕಳನ್ನು ವಿದ್ಯಾವಂತರನ್ನಾಗಿಸುವ ಜೊತೆಗೆ ಸಂಸ್ಕಾರವುಳ್ಳ ಪ್ರಜೆಯಾನ್ನಾಗಿ ರೂಪಿಸುವಂತೆ ರೂಪಿಸಬೇಕೆಂದು ತಿಳಿವಳಿಕೆ ನೀಡಿದರು.
ಪಟ್ಟಣದಲ್ಲಿ ನಡೆದ 7 ದಿನಗಳ ಜಯಂತಿ ಮಹೋತ್ಸವದ ಯಶಸ್ವಿಗೆ ಎಲ್ಲರ ಸಹಕಾರವೂ ಮುಖ್ಯವಾಗಿದೆ. ತಾಲೂಕಿನ ಎಲ್ಲಾ ಸಮುದಾಯದವರು ಕೂಡ ಒಂದೊಂದು ಸೇವೆ ಸಮರ್ಪಸಿದ್ದಾರೆ. ಇಡೀ ಜಯಂತಿಯಲ್ಲಿ ಮಾವಿನ ಎಲೆ-ಬಾಳೆ ಕಂದು ಕಟ್ಟಿ ಜಯಂತಿ ಯಶಸ್ವಿಗೆ ಶುಭಕೋರಿದವರೆಂದರೆ ಅದು ನೀವುಗಳಾಗಿದ್ದಿರಿ ಎಂದರು.ಮುಖಂಡ ರಮೇಶ್ ಮಾತನಾಡಿ, ಪರಮಪೂಜ್ಯ ಶ್ರೀಗಳು ಅಶೋಕ ಬಡಾವಣೆಗೆ ಕಾಲ್ನಡಿಗೆಯಲ್ಲಿ ಅಗಮಿಸಿ ಎಲ್ಲರನ್ನು ಅಶೀರ್ವಾದ ಮಾಡಿರುವುದು ಇದು ಯಾವುದೋ ಜನ್ಮದ ಪುಣ್ಯ. ನಮ್ಮ ಜೀವನ ಸಾರ್ಥಕವಾಗಿದೆ. ಪೂಜ್ಯರ ಪಾದಾರ್ಪಣೆಯಿಂದ ನಾವು ಪಾವನರಾಗಿದ್ದೇವೆ ಎಂದು ಭಕ್ತಿಯ ಸಂತಸ ವ್ಯಕ್ತಪಡಿಸಿದರು.
ಭಾವೈಕ್ಯತಾ ಯಾತ್ರೆಯಲ್ಲಿ ಸುತ್ತೂರಿನ ಕಿರಿಯ ಶ್ರೀಗಳು, ತಾಲೂಕಿನ ಹರಗುರು ಚರಮೂರ್ತಿಗಳು, ಅಶೊಕನಗರದ ಎಲ್ಲಾ ಮುಖಂಡರು, ಮಹಿಳೆಯರು, ಜಯಂತಿ ಮಹೋತ್ಸವದ ಪದಾಧಿಕಾರಿಗಳು ಉಪಸ್ಥಿತರಿದ್ದರು.