ಸೇವಾ ನಿವೃತ್ತಿ ಹೊಂದಿದ ವೀರ ಯೋಧನಿಗೆ ಅದ್ಧೂರಿ ಸ್ವಾಗತ

KannadaprabhaNewsNetwork | Published : May 4, 2024 12:30 AM

ಸಾರಾಂಶ

21 ವರ್ಷಗಳ ಕಾಲ ಟಿಬೇಟಿಯನ್ ಕ್ಯಾಂಪ್‌ನ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ವೀರ ಯೋಧ ಅಶೋಕ ದ್ಯಾವಕ್ಕಳವರ ಅವರನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅದ್ಧೂರಿಯಾಗಿ ಮೆರವಣಿಗೆ ಮಾಡುವ ಮೂಲಕ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ರಟ್ಟೀಹಳ್ಳಿ: 21 ವರ್ಷಗಳ ಕಾಲ ಟಿಬೇಟಿಯನ್ ಕ್ಯಾಂಪ್‌ನ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ವೀರ ಯೋಧ ಅಶೋಕ ದ್ಯಾವಕ್ಕಳವರ ಅವರನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅದ್ಧೂರಿಯಾಗಿ ಮೆರವಣಿಗೆ ಮಾಡುವ ಮೂಲಕ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಪಟ್ಟಣದ ಮಹಾಲಕ್ಷ್ಮೀ ದೇವಸ್ಥಾನದಿಂದ ಅವರನ್ನು ತೆರೆದ ವಾಹನದಲ್ಲಿ ಸಂಗೋಳ್ಳಿ ರಾಯಣ್ಣ ವೃತ್ತ ಹಳೇ ಬಸ್ಟ್ಯಾಂಡ್ ಸರ್ಕಲ್, ಶಿವಾಜಿ ವೃತ್ತ, ಭಗತ್‌ಸಿಂಗ ಮೂಲಕ ಅವರ ನಿವಾಸದವರೆಗೆ ಮೆರವಣಿಗೆ ಮಾಡುವ ಮೂಲಕ ನೂರಾರು ದೇಶಾಭಿಮಾನಿಗಳು, ಸ್ನೇಹಿತರು, ವಿವಿಧ ಸಂಘ ಸಂಸ್ಥೆಯ ನೂರಾರು ಕಾರ್ಯಕರ್ತರು ನಿವೃತ್ತಿ ಹೊಂದಿದ ವೀರ ಯೋಧನಿಗೆ ಜೈಕಾರ ಹಾಕುವ ಮೂಲಕ, ಪುಷ್ಪ ವೃಷ್ಟಿ ಗೈದರು. ಅವರ ದೇಶ ಸೇವೆಯನ್ನು ಸ್ಮರಿಸಿ ಅದ್ಧೂರಿಯಾಗಿ ಸ್ವಾಗತಿಸಿ ದೇಶಾಭಿಮಾನ ಮೆರೆದರು.

ಪಟ್ಟಣದ ಭಗತ್‌ಸಿಂಗ ವೃತ್ತದಲ್ಲಿ ವಿವಿಧ ಸಂಘ ಸಂಸ್ಥೆ ಕಾರ್ಯಕರ್ತರು ನಿವೃತ್ತಿ ಹೊಂದಿದ ಅಶೋಕ ದ್ಯಾವಕ್ಕಳವರ ಅವರನ್ನು ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು 21 ವರ್ಷಗಳ ದೇಶ ಸೇವೆ ನನಗೆ ತೃಪ್ತಿ ತಂದಿದೆ. ಪಟ್ಟಣದ ಜನತೆ, ಸ್ನೇಹಿತರು, ಕುಟುಂಬ ವರ್ಗ ನನ್ನನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದು ನನ್ನ ಜನ್ಮ ಸಾರ್ಥಕವಾಯಿತು ಎಂದು ಹರ್ಷ ವ್ಯಕ್ತಪಡಿಸಿದರು. ನಿವೃತ್ತಿ ನಂತರ ಸಮಾಜಕ್ಕೆ ನನ್ನ ಕೈಲಾದ ಸೇವೆ ಸಲ್ಲಿಸಿ ನನ್ನ ಮಕ್ಕಳನ್ನು ದೇಶ ಸೇವೆಗೆ ಸೈನ್ಯಕ್ಕೆ ಸೇರಿಸುತ್ತೇನೆ ಎಂದು ವಾಗ್ದಾನ ಮಾಡಿದರು.

ಇದೇ ಸಂದರ್ಭದಲ್ಲಿ ರಾಜು ವೆರ್ಣೆಕರ್, ಬಸವರಾಜ ದ್ಯಾವಕ್ಕಳವರ, ಮುತ್ತು ಬೆಣ್ಣಿ, ರವಿ ಶಿಗ್ಗಾಂವಕರ್, ರಾಜು ಉರಣಕರ್, ರಾಜು ಸರಶೆಟ್ಟರ, ವೀರೇಶ ಕಾಯಕದ, ರಾಜು ಹರವಿಶೆಟ್ಟರ್, ಚನ್ನವೀರ ಚಕ್ರಸಾಲಿ, ನವೀನ ಅಂಗರಗಟ್ಟಿ, ಶ್ರೀನಿವಾಸ ಬೈರೋಜಿಯವರ, ರಾಜು ವೆರ್ಣೇಕರ್, ಕುಮಾರ ಚಕ್ರಸಾಲಿ, ರಾಜು ನಾಯಕ, ಮಾಲತೇಶ ಬೆಣ್ಣಿ, ಸುರೇಶ ಬೆಣ್ಣಿ, ನಾರಾಯಣರಾವ್ ಪವಾರ, ಕಲ್ಪವೃಕ್ಷ ಸ್ನೇಹ ಬಳಗ, ಕಂಪು ಸಹಪಾಠಿ, ನಮ್ಮೂರ ನಮ್ಮವರ ಬಳಗ, ಕುಮಾರೇಶ್ವರ ಸ್ನೇಹ ಬಳಗದ ನೂರಾರು ದೇಶಾಭಿಮಾನಿಗಳು ಇದ್ದರು.

Share this article