ಅತಿಥಿ ಶಿಕ್ಷಕನನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರ ಕೊಲೆ

KannadaprabhaNewsNetwork | Published : Feb 11, 2024 1:46 AM

ಸಾರಾಂಶ

ತಾಲೂಕಿನ ಕುಳ್ಳಿನಂಜಯ್ಯನ ಪಾಳ್ಯದ ಮರಿಯಪ್ಪ (47) ಕೊಲೆಯಾದ ಅತಿಥಿ ಶಿಕ್ಷಕ. ರಾತ್ರಿ ಮನೆಗೆ ಬರುವಾಗ ದುಷ್ಕರ್ಮಿಗಳು ಮಾರ್ಗ ಮಧ್ಯೆ ಮಾರಕಾಸ್ತ್ರಗಳಿಂದ ಆತನನ್ನು ಬರ್ಭರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಕುಣಿಗಲ್

ತಾಲೂಕಿನ ಕುಳ್ಳಿನಂಜಯ್ಯನ ಪಾಳ್ಯದ ಮರಿಯಪ್ಪ (47) ಕೊಲೆಯಾದ ಅತಿಥಿ ಶಿಕ್ಷಕ.

ರಾತ್ರಿ ಮನೆಗೆ ಬರುವಾಗ ದುಷ್ಕರ್ಮಿಗಳು ಮಾರ್ಗ ಮಧ್ಯೆ ಮಾರಕಾಸ್ತ್ರಗಳಿಂದ ಆತನನ್ನು ಬರ್ಭರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ.

ಮೋದೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅತಿಥಿ ಶಿಕ್ಷಕನಾಗಿ ಕೆಲಸ ನಿರ್ವಹಿಸುತ್ತಿದ್ದ ಈತ ಮನೆಯಲ್ಲಿ ದೇವಿಯನ್ನು ಪೂಜಿಸುತ್ತಿದ್ದು ಯಂತ್ರ ಮಂತ್ರ ತಂತ್ರ ಹೀಗೆ ಹಲವಾರು ವಿದ್ಯೆಗಳನ್ನು ಮಾಡುತ್ತಿದ್ದ ಎಂದು ಕುಟುಂಬದ ಸದಸ್ಯರು ತಿಳಿಸಿದ್ದು, ಅಮಾವಾಸ್ಯೆ ಹಿನ್ನೆಲೆಯಲ್ಲಿ ಮನೆಯಲ್ಲಿ ಕೋಳಿ ಬಲಿ ನೀಡಿ ಬೇರೆಲ್ಲೋ ಅಮಾವಾಸ್ಯೆ ಪೂಜೆಗೆ ಹೋಗಿ ಬರುತ್ತೇನೆ ಎಂದು ಹೋಗಿದ್ದ ಆತನ ಬಳಿ ಇದ್ದ ಬ್ಯಾಗ್‌ನಲ್ಲಿ ಹಲವಾರು ವಾಮಾಚಾರಕ್ಕೆ ಬಳಸುವ ವಸ್ತುಗಳು ಮತ್ತು ಪೂಜಾ ಸಾಮಗ್ರಿಗಳು ಇದ್ದವು ಎಂದು ತಿಳಿದುಬಂದಿದೆ.

ಬೆಳಗಿನ ಜಾವ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೈ ಕತ್ತರಿಸಿ, ತಲೆಭಾಗಕ್ಕೆ ಬಲವಾಗಿ ಹೊಡೆದು ಭೀಕರ ಕೊಲೆ ಮಾಡಿರುವುದಾಗಿ ದಾರಿ ಕೋರರು ತಿಳಿಸಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಪೊಲೀಸರು ಮತ್ತು ಶ್ವಾನದಳ ಬೆರಳಚ್ಚು ದಳ ಸೇರಿದಂತೆ ವಿಶೇಷ ತಜ್ಞರು ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.

ಸ್ಥಳಕ್ಕೆ ಎಎಸ್ ಪಿ ಮರಿಯಪ್ಪ, ಕುಣಿಗಲ್ ಡಿವೈಎಸ್ ಪಿ ಓಂಪ್ರಕಾಶ್ ಹಾಗೂ ಇನ್ಸ್‌ಪೆಕ್ಟರ್‌ ನವೀನ್ ಗೌಡ ಭೇಟಿ ಪರಿಶೀಲನೆ ನಡೆಸಿದ್ದು ಕೆಲವು ವ್ಯಕ್ತಿಗಳನ್ನು ವಿಚಾರಣೆ ನಡೆಸಿದ್ದಾರೆ.

ಘಟನೆ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಶವವನ್ನು ತುಮಕೂರಿನಲ್ಲಿ ಶವ ಪರೀಕ್ಷೆ ಮಾಡಿಸಲಾಗಿದೆ. ಕೊಲೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ವೃತ್ತ ವ್ಯಕ್ತಿಯ ನಾಲ್ಕು ಹೆಣ್ಣು ಮಕ್ಕಳು ತಾಯಿ ಪತ್ನಿ ಸೇರಿದಂತೆ ಹಲವಾರು ಕುಟುಂಬದವರ ರೋಧನಾ ಮುಗಿಲು ಮುಟ್ಟಿತ್ತು.ಪೋಟೋ

ಮೃತ ವ್ಯಕ್ತಿ ಅತಿಥಿ ಶಿಕ್ಷಕ

Share this article