ಕನ್ನಡಪ್ರಭ ವಾರ್ತೆ ತಾಳಿಕೋಟೆ
ಸ್ಥಳೀಯ ಕನ್ನಡ ಶಾಲಾ ಮೈದಾನದಲ್ಲಿ ಯೋಗೋತ್ಸವ ಸಮಿತಿಯ ವತಿಯಿಂದ ಮಂಗಳವಾರ ಏರ್ಪಡಿಸಲಾದ ಸಾಮೂಹಿಕ ಭಜನೆ ಹಾಗೂ ಆಧ್ಯಾತ್ಮಿಕ ಪ್ರವಚನದ ಪ್ರಾರಂಭೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಒಂದು ವೇಳೆ ಆರೋಗ್ಯವಿಲ್ಲದ ದೇಹವಾಗಿ ಪರಿಣಮಿಸಿದರೇ ಆತ್ಮದ ಸೆರೆಮನೆಯಾಗಲಿದೆ. ಕಾರಣ ದೇಹದ ಸಂಪತ್ತಿಗಿಂತ ಯಾವ ಸಂಪತ್ತು ದೊಡ್ಡದಲ್ಲ ಎಂದರು.
ಆರೋಗ್ಯವೆಂದರೇ ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕವಾಗಿ ಸಂಪೂರ್ಣವಾಗಿ ಚೆನ್ನಾಗಿ ಇರುವುದೇ ಆಗಿದೆ. ಕೇವಲ ದೈಹಿಕ ರೋಗಿಗಳಿಂದ ಮುಕ್ತವಾಗಿರುವುದಲ್ಲ. ಯೋಗದ ದೃಷ್ಟಿಯಲ್ಲಿಯೂ ದೇಹವು ಕೆಲವು ಕೋಶಗಳನ್ನು ಒಳಗೊಂಡಿದೆ. ಕೋಶಗಳಲ್ಲಿ ಅನ್ನಮಯ ಕೋಶ, ಪ್ರಾಣಮಯ ಕೋಶ, ಮನೋಮಯ ಕೋಶ, ವಿಜ್ಞಾನಮಯ ಕೋಶ ಮತ್ತು ಆನಂದಮಯ ಕೋಶಗಳೆಂದಿ ಹೆಸರಿಸಿದ್ದಾರೆ. ಈ ಪಂಚಕೋಶಗಳ ಬಗ್ಗೆ ಉಪನಿಷತ್ತು ವಿವರವಾಗಿ ತಿಳಿಸುತ್ತದೆ ಎಂದು ತಿಳಿಸಿದರು.ಖ್ಯಾತ ವೈದ್ಯ ಡಾ.ವಿಜಯಕುಮಾರ ಕಾರ್ಚಿ ಮಾತನಾಡಿ, ತಾಳಿಕೋಟೆ ಪಟ್ಟಣದಲ್ಲಿ ಕಳೆದ ೧೫ ವರ್ಷಗಳ ಹಿಂದೆ ಶ್ರೀವಿಠ್ಠಲ ಮಂದಿರದಲ್ಲಿ ಯೋಗ ಶಿಬಿರವನ್ನು ಏರ್ಪಡಿಸಲಾಗಿತ್ತು. ಯೋಗ ಅನ್ನುವುದಕ್ಕೆ ಪ್ರಾಮುಖ್ಯತೆ ಕೊಡಬೇಕು. ಭಾರತದಲ್ಲಿ ಯೋಗ ಸಾಧನೆಗಾಗಿ ಋಷಿಮುನಿಗಳು ಇದೇ ಕಾಯಕವನ್ನಾಗಿ ರೂಪಿಸಿಕೊಂಡು ನೂರಾರು ವರ್ಷಕ್ಕಿಂತ ಹೆಚ್ಚಿಗೆ ಬಾಳಿ ಬೆಳಗಿದ್ದಾರೆ. ಇಡೀ ಭಾರತ ದೇಶದಲ್ಲಿ ಯೋಗಕ್ಕೆ ಮಹತ್ವ ನೀಡುವುದನ್ನು ಅರೀತ ವಿದೇಶಿಗರೂ ಸಹ ಯೋಗಕ್ಕೆ ಮಹತ್ವ ನೀಡುತ್ತ ಸಾಗಿದ್ದಾರೆ. ಅಂತಹ ಮಹತ್ವದ ಸಾಧನೆ ಯೋಗದಲ್ಲಿದೆ ಎಂದು ವಿವರಿಸಿದರು.
ಶಿಕ್ಷಕ ಅಶೋಕ ಹಂಚಲಿ, ಶಿಕ್ಷಕಿ ಸುರೇಖಾ ಸಾಲಂಕಿ ಸೇರಿದಂತೆ ಮಹಿಳೆಯರು, ಪುರುಷರು, ಯೋಗ ಸಮಿತಿಯ ಪದಾಧಿಕಾರಿಗಳು, ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.------------
-ಡಾ.ಪ್ರಭುಗೌಡ ಲಿಂಗದಳ್ಳಿ, ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ನ ರಜತ ಸಾಧಕರು ಪ್ರಶಸ್ತಿ ಪುರಸ್ಕೃತರು.
-ಡಾ.ವಿಜಯಕುಮಾರ ಕಾರ್ಚಿ, ಖ್ಯಾತ ವೈದ್ಯರು.