ಅಮೃತ ಮಹೋತ್ಸವ । ಬಸವೇಶ್ವರ ಜಾತ್ರಾ ಉತ್ಸವ । ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ
ಕನ್ನಡಪ್ರಭ ವಾರ್ತೆ ಬಸವಕಲ್ಯಾಣಶ್ರಮಕ್ಕೆ, ಬೆವರಿಗೆ ಆದ್ಯತೆ ನೀಡಿದರೆ ಮಾತ್ರ ಆರೋಗ್ಯವಂತ ಜೀವನ ಸಾಧ್ಯವಾಗುತ್ತದೆ ಎಂದು ಬಾಲಗಾಂವ್‌ನ ಗುರುದೇವಾಶ್ರಮದ ಅಮೃತಾನಂದ ಸ್ವಾಮೀಜಿ ಹೇಳಿದರು.
ನಗರದ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಮತ್ತು ವಿಶ್ವಸ್ಥ ಸಮಿತಿ ವತಿಯಿಂದ ಬಸವೇಶ್ವರ ಜಾತ್ರಾ ಮಹೋತ್ಸವ, ಅಮೃತ ಮಹೋತ್ಸವ ಪ್ರಯುಕ್ತ ನಗರದ ಅಕ್ಕಮಹಾದೇವಿ ಕಾಲೇಜು ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಆರೋಗ್ಯ ತಪಾಸಣೆ, ರಕ್ತ ಮತ್ತು ಅಂಗದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ನಮ್ಮ ದೇಶದಲ್ಲಿ ಪ್ರಾಚೀನ ಕಾಲದಿಂದ ಇಂದಿನವರೆಗೂ ಶ್ರೇಷ್ಠವಾದ ವೈದ್ಯ ಪದ್ಧತಿಯಿದೆ ಎಂದರು.ಬೀದರ್ ಬ್ರಿಮ್ಸ್‌ನ ಅಂಗರಚನಾಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಸಂದೀಪ ದೇಶಮುಖ ಮಾತನಾಡಿ, ಅಂಗಾಂಗ ದಾನ ಮಾಡಿ ಹಲವರ ಜೀವನ ಉಳಿಸಲು ಸಾಧ್ಯವಾಗುತ್ತದೆ. ಅಂಗಾಂಗ ಅಧ್ಯಯನಕ್ಕಾಗಿ ಅಂಗ ರಚನಾ ಶಾಸ್ತ್ರದ ವಿದ್ಯಾರ್ಥಿಗಳ ಕಲಿಕೆಯಲ್ಲಿ ಇದು ಅನುಕೂಲ ಎಂದರು.
ಬ್ರೀಮ್ಸ್‌ನ ಡಾ.ಜ್ಯೋತಿ ಮಾತನಾಡಿ, ಶರೀರದ ಪ್ರತಿಯೊಂದು ಅಂಗಗಳು ಮುಖ್ಯ. ಸಾವಿನ ನಂತರ ಅದರ ದಾನದಿಂದ ಅವರ ಅಂಗಾಂಗ ಬೇರೆಯವರ ಕಷ್ಟಕ್ಕೆ ಸಹಾಯಕವಾಗುತ್ತದೆ ಎಂದರು.ಬಿಡಿವಿಸಿ ಉಪಾಧ್ಯಕ್ಷ ಡಾ.ಜಿಎಸ್ ಭುರಾಳೆ ಮಾತನಾಡಿ, ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಮತ್ತು ವಿಶ್ವಸ್ಥ ಸಮಿತಿಯಿಂದ ಕಳೆದ ಹತ್ತು ವರ್ಷಗಳಿಂದ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ನಡೆಸಿಕೊಂಡು ಬರುಲಾಗುತ್ತಿದೆ. ಈ ಸಲ ಅಂಗಾಂಗ ದಾನ ಮತ್ತು ದೇಹದಾನ ಹಾಗೂ ಆಯುಷ್ಮಾನ್ ಭಾರತ ಕಾರ್ಡ್ ಹಾಗೂ ಆರೋಗ್ಯ ವಿಮೆ ಮಾಡಿಸುವ ಹೊಸ ಯೋಜನೆ ಹಮ್ಮಿಕೊಂಡಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ಮರಣದ ನಂತರದಲ್ಲಿ ಅಂಗಾಂಗ ದಾನ ಮಾಡುವ ನೋಂದಣಿ ಮಾಡಿಸಿದವರನ್ನು ಸನ್ಮಾನಿಸಲಾಯಿತು. 80 ಜನರ ಹೃದಯ ತಪಾಸಣೆ, 75 ಜನ ರಕ್ತದಾನ, 6 ದೇಹದಾನ, 4 ಜನ ಅಂಗಾಂಗ ದಾನಕ್ಕೆ ಒಪ್ಪಿಗೆ ಸೂಚಿಸಿದರು. ಆರ್ಯ ಕಂಪ್ಯೂಟರ್ ಸಹಯೋಗದಲ್ಲಿ 190 ಆಯುಷ್ಮಾನ್ ಕಾರ್ಡ್ ನೋಂದಣಿ ಮಾಡಿಸಲಾಯಿತು.ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೋರಕೆ ಅಧ್ಯಕ್ಷತೆ ವಹಿಸಿದ್ದರು. ಅಮೋಘ ಸಿದ್ಧ ಸ್ವಾಮೀಜಿ, ಬಿಡಿವಿಸಿ ಅಧ್ಯಕ್ಷ ಶಶಿಕಾಂತ ದುರ್ಗೆ, ಬ್ರಿಮ್ಸ್ ಡಾ.ವಿಜಯಕುಮಾರ್ ಅಂತಪ್ಪ, ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಸಿ.ಬಿ.ಪರತಾಪುರೆ, ತಜ್ಞ ವೈದ್ಯ ಡಾ.ಶರದ ಮಸೂದಿ, ಡಾ.ಗುರುಬಸವ ಲಕಮಾಜಿ, ಬಿಡಿಪಿಸಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಚಿರಡೆ, ಕೋಶಾಧ್ಯಕ್ಷ ರಾಜಕುಮಾರ ಹೊಳಕುಂದೆ, ಕಾರ್ಯದರ್ಶಿ ಶ್ರೀಕಾಂತ ಬಡದಾಳೆ, ಸಹ ಕಾರ್ಯದರ್ಶಿ ವಿವೇಕಾನಂದ ಹೊದಲೂರೆ, ನಿರ್ದೇಶಕರಾದ ಸುಭಾಷ ಹೊಳಕುಂದೆ, ಅಶೋಕ ನಾಗರಾಳೆ, ಕಾಶಪ್ಪಾ ಸಕ್ಕರಭಾವಿ, ಜಗನ್ನಾಥ ಖೂಬಾ, ಭದ್ರಿನಾಥ ಪಾಟೀಲ್, ಅನಿಲಕುಮಾರ ರಗಟೆ ರೇವಣಪ್ಪಾ ರಾಯವಾಡೆ ಬಿಡಿವಿಸಿ ನಾಗಯ್ಯ ಸ್ವಾಮಿ ಇದ್ದರು. ಜ್ಯೋತಿ ತುಗಾಂವೆ ನಿರೂಪಿಸಿ ವಂದಿಸಿದರು.