ಹುಬ್ಬಳ್ಳಿ: ಧಾರವಾಡ ಕೃಷಿಮೇಳದಲ್ಲಿ ನೀರು ಕಾಯಿಸುವ ಸ್ವದೇಶಿ ಬಾಯ್ಲರ್ ಗ್ರಾಹಕರ ಗಮನ ಸೆಳೆಯುತ್ತಿದೆ. ಬರಿ ಏಳೇ ನಿಮಿಷದಲ್ಲಿ ಬಿಸಿನೀರು ನೀಡುವ ಈ ಬಾಯ್ಲರ್ ಖರೀದಿಗೆ ಜನತೆ ಮುಗಿಬಿದ್ದಿದ್ದಾರೆ.
ವಿದ್ಯುತ್ ದರ ಹೆಚ್ಚಳ, ಉರುವಲು ಕೊರತೆಯಿಂದ ಮನೆಗಳಲ್ಲಿ ನೀರು ಕಾಯಿಸುವುದು ಇಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದಕ್ಕೆ ಮುಕ್ತಿ ನೀಡುವುದಕ್ಕಾಗಿಯೇ "ಗೊಮ್ಮಟೇಶ್ ಬಾಯ್ಲರ್ ಆ್ಯಂಡ್ ಸೋಲಾರ್ ಸಂಸ್ಥೆ "ಯು ಸ್ಟೀನ್‌ಲೆಸ್ ಸ್ಟೀಲ್ ಕಾಯಿಸುವ ಟಾಕಿ (ಬಾಯ್ಲರ್) ಪರಿಹಾರದ ರೂಪದಲ್ಲಿ ನೀಡಿದೆ.
ಐದು ಬಗೆಯ ಬಾಯ್ಲರ್: ಮೇಳದಲ್ಲಿ ಐದು ಬಗೆಯ ಟಾಕಿಗಳನ್ನು ಪ್ರದರ್ಶನಕ್ಕಿಟ್ಟು ಮಾರಾಟ ಮಾಡುತ್ತಿದೆ. ಇದರಲ್ಲಿ ಎರಡು ಬಗೆಯಲ್ಲಿ ಕಟ್ಟಿಗೆ, ಇಲೆಕ್ಟ್ರಿಕ್, ಗ್ಯಾಸ್, ಡಿಸೇಲ್ ಬಳಕೆ ಮಾಡಿ ನೀರು ಕಾಯಿಸುವ ಬಾಯ್ಲರ್ ದೊರೆಯುತ್ತಿವೆ. ರಾಷ್ಟ್ರೀಯ ಮಾನ್ಯತೆ ಪಡೆದ ಎಂಜಿನಿಯರ್‌ಗಳು ಮೊಟ್ಟಮೊದಲ ಬಾರಿಗೆ ರೂಪಿಸಿದ್ದಾರೆ. ದೀರ್ಘಕಾಲ ಬಾಳಿಕೆ ಬರುವ ಬಾಯ್ಲರ್ ಇದಾಗಿದ್ದು, ಕೇವಲ 7 ನಿಮಿಷದಲ್ಲಿ ಬಿಸಿ ನೀರು ದೊರೆಯುತ್ತದೆ.ಒಮ್ಮೆ ನೀರು ಕಾಯಿಸಿದರೆ 18 ಗಂಟೆಗಳ ಕಾಲ ಬಿಸಿಯಾಗಿರುತ್ತದೆ. 20 ಲೀಟರ್‌ನಿಂದ ಹಿಡಿದು 1000 ಲೀಟರ್ ಸಾಮರ್ಥ್ಯ ಹೊಂದಿರುವ ಬಾಯ್ಲರ್‌ಗಳು ಮಾರಾಟಕ್ಕೆ ಲಭ್ಯವಿವೆ. 35 ರಿಂದ 40 ವರ್ಷಗಳ ವರೆಗೆ ಬಾಳಿಕೆ ಬರಲಿವೆ. ಕೃಷಿಮೇಳದಲ್ಲಿ ಬುಕ್ ಮಾಡಿದರೆ ಸೂಕ್ತ ರಿಯಾಯಿತಿ ಜತೆಗೆ ಉಚಿತವಾಗಿ ಹೋಂ ಡೆಲಿವರಿ ವ್ಯವಸ್ಥೆ ಕಲ್ಪಿಸಿರುವುದು ವಿಶೇಷ.
ಇಲ್ಲಿಗೆ ಸಂಪರ್ಕಿಸಿ: ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಅಳಗವಾಡಿಯಲ್ಲಿರುವ ಗೊಮ್ಮಟೇಶ ಬಾಯ್ಲರ್ ಆ್ಯಂಡ್ ಸೋಲಾರ್ ಸಂಸ್ಥೆ. ಮೊ: 9972284678, 9686704678, 9353100008 ಸಂಖ್ಯೆಗಳಿಗೆ ಸಂಪರ್ಕಿಸಬಹುದಾಗಿದೆ.