ಕನ್ನಡಪ್ರಭ ವಾರ್ತೆ ಬೀದರ್
ಅವರು ಬ್ರೈಮ್ಸ್ ಭೇಟಿಯ ಸಂರ್ಭರ ಅಧಿಕಾರಿಗಳ ಸಭೆಯಲ್ಲಿ ಹಣದ ವಹಿವಾಟು, ಬಿಲ್ ಪಾವತಿ ಮತ್ತಿತರ ವಿಷಯಗಳಲ್ಲಿ ಕಳೆದ 5 ವರ್ಷಗಳಲ್ಲಿ ಭಾರಿ ಅಕ್ರಮ ಆಗಿದೆ ಎಂಬ ದೂರುಗಳಿದ್ದು ಅವುಗಳ ಬಗ್ಗೆ ತನಿಖೆ ನಡೆಸುವಂತೆ ವೈದ್ಯಕೀಯ ಶಿಕ್ಷಣ ಇಲಾಖೆಯ ಕರ್ಯಿರ್ಶಿಆ ಮಹಮ್ಮದ್ ಮೊಹಸಿನ್ ಅವರಿಗೆ ಸೂಚಿಸಿದರು.
ವಿದ್ಯಾರ್ಥಿಗಳ ಪ್ರವೇಶಾತಿಗೆ ತಕ್ಕಂತೆ ಬೋಧಕರ ನೇಮಕಾತಿ, ಹೊರಗುತ್ತಿಗೆ ವೈದ್ಯರ ಹಾಗೂ ಸಿಬ್ಬಂದಿಗಳ ವೇತನ ಪಾವತಿ, ಕಟ್ಟಡ ದುರಸ್ತಿ, ಸುರಕ್ಷತೆ ಹಾಗೂ ಭದ್ರತೆ ಸೇರಿದಂತೆ ಇನ್ನೀತರ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳುವುದಾಗಿ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ದಿ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ ಇಂದಿಲ್ಲಿ ಭರವಸೆ ನೀಡಿದರು.ಮಹಾರಾಷ್ಟ್ರ ಹಾಗೂ ತೆಲಂಗಾಣ ಗಡಿಭಾಗ ಸೇರಿದಂತೆ ಬೀದರ ಜಿಲ್ಲೆಯ ಎಲ್ಲ ರೋಗಿಗಳಿಗೆ ಅನುಕೂಲವಾಗಿರುವ ಬ್ರಿಮ್ಸ್ನ ಸಮಗ್ರ ಅಭಿವೃದ್ಧಿಗೆ ಹಾಗೂ ಪ್ರಚಲಿತ ಸಮಸ್ಯೆಗಳಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಕಳೆದ ಹಲವಾರು ತಿಂಗಳುಗಳಿಂದ ಬಾಕಿಯಿರುವ ಹೊರಗುತ್ತಿಗೆ ವೈದ್ಯರ ಹಾಗೂ ಇತೆ ಸಿಬ್ಬಂದಿಗಳ ವೇತನ ಪಾವತಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಸಭೆಯಲ್ಲಿ ಸಚಿವ ಈಶ್ವರ ಖಂಡ್ರೆ, ರಹೀಂ ಖಾನ್ ಮತ್ತಿತರರು ಇದ್ದರು.ಉತ್ತಮ ಆರೋಗ್ಯಸೇವೆ ನೀಡುವಲ್ಲಿ ವೈದ್ಯರ ಜವಾಬ್ದಾರಿ ಹೆಚ್ಚು: ಖಂಡ್ರೆ
ಬ್ರಿಮ್ಸನಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಸಾಮಾಜಿಕ ಸಹಭಾಗಿತ್ವ ಜವಾಬ್ದಾರಿ (ಸಿಎಸ್‌ಆರ್) ಹಾಗೂ ಕೆಕೆಆರ್‌ಡಿಬಿ ಅನುದಾನದಡಿ ಬ್ರಿಮ್ಸ್ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಆಸ್ಪತ್ರೆಯಲ್ಲಿ ಸ್ವಚ್ಚತೆ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ಸಚಿವರು ಪ್ರತಿದಿನ ಸ್ವಚ್ಛತೆ ಕಾಪಾಡುವಂತೆ ಸೂಚಿಸದರು.ಕಟ್ಟಡವು ಅಲ್ಲಲ್ಲಿ ಸೋರುತ್ತಿರುವ ಬಗ್ಗೆ ಗಮನಿಸಿದ ಸಚಿವರು ಲೋಕೋಪಯೋಗಿ ಇಲಾಖೆಯಿಂದ ತಕ್ಷಣವೇ ದುರಸ್ತಿ ಮಾಡುವಂತೆ ಇಇ ಶಿವಶಂಕರ ಅವರಿಗೆ ಸೂಚಿಸಿದರು. ಶೌಚಾಲಯ ನವೀಕರಣಗೊಳ್ಳುವಂತೆ ಹಾಗೂ ಆಧುನಿಕ ಪೈಪಲೈನ ಅಳವಡಿಸುವಂತೆ ತಿಳಿಸಿದರು. ಬ್ರಿಮ್ಸ್ನಲ್ಲಿ ಎಲ್ಲಾ ದಾಖಲೆಗಳನ್ನು ಸರಿಯಾಗಿ ಇಡುವಂತೆ ತಿಳಿಸಲಾಯಿತು. ಅಗತ್ಯ ಉಪಕರಣಗಳನ್ನು ಕೆಕೆಆರ್‌ಡಿಬಿ ಅನುದಾನದಡಿ ತರಿಸಲು ಕ್ರಮಕೈಗೊಳ್ಳಲಾಗುವುದು ಎಂದರು. ಆವರಣದಲ್ಲಿ ಭದ್ರತೆ ಹೆಚ್ಚಿಸುವಂತೆ ಹಾಗೂ ಸುರಕ್ಷತೆಗಾಗಿ ಮಹಿಳಾ ಕಾನ್ಸಟೇಬಲ್ ನೇಮಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.ಸಭೆಯಲ್ಲಿ ಪೌರಾಡಳಿತ ಹಾಗೂ ಹಜ್ ಸಚಿವರಾದ ರಹೀಂ ಖಾನ್, ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ, ನಗರಸಭೆ ಅಧ್ಯಕ್ಷ ಎಂ.ಡಿ.ಗೌಸ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ, ತಜ್ಞವೈದ್ಯರು ಸೇರಿದಂತೆ ಇತರರು ಉಪಸ್ಥಿತರಿದ್ದರು.ಬ್ರಿಮ್ಸ್ ದುರವಸ್ಥೆ: ತಿಂಗಳ ಬಳಿಕ ಸಚಿವರ ಭೇಟಿ
ಆಸ್ಪತ್ರೆಯ ದುರಾವಸ್ಥೆಯ ಬಗ್ಗೆ ಇದೀಗ ಎಚ್ಚೆತ್ತುಕೊಂಡ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ್ ಅವರು ಬ್ರಿಮ್ಸ್‌ಗೆ ಭೇಟಿ ನೀಡಿ ಪರಿಸ್ಥಿತಿಯ ದುರಾವಸ್ಥೆ ಅವಲೋಕಿಸಿ ಕಿಡಿಕಿಡಿಯಾದರು. ಇದಕ್ಕೆಲ್ಲ ಕಟ್ಟಡ ಕಾಮಗಾರಿ ಕಳಪೆಯಾಗಿದೆ ಎಂದು ದಶಕದ ಹಿಂದಿನ ಕಾಮಗಾರಿಯನ್ನು ದೂಷಿಸಿದರು.ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹಾಗೂ ಪೌರಾಡಳಿತ ಸಚಿವ ರಹೀಮ್ ಖಾನ್ ಅವರೊಂದಿಗೆ ಕಟ್ಟಡದ ನೆಲ ಮಹಡಿ ಪರಿಶೀಲಿಸಿದರು. ಆಗಲೂ ನೆಲಮಹಡಿಯಲ್ಲಿ ನೀರಿನ ಬುಗ್ಗೆ ಹೊರಬರುತ್ತಿರುವುದು ಕಣ್ಣಿಗೆ ಬಿತ್ತು. ಕಟ್ಟಡದ ಕಳಪೆ ಕಾಮಗಾರಿ ಕಂಡು ಸಂಬಂಧಪಟ್ಟವರ ವಿರುದ್ದ ಕಿಡಿ ಕಾರಿದರಲ್ಲದೇ ಶೀಘ್ರವೇ ತಜ್ಞರ ಮೂಲಕ ಕಾಮಗಾರಿ ಸರಿಯಾಗಿ ಮಾಡಿಸಿ ಎಂದು ಸೂಚಿಸಿದರು.
ನಂತರ ಆಸ್ಪತ್ರೆಯ ಹಳೆ ಕಟ್ಟಡದಲ್ಲಿ ನಿರ್ಮಾಣಗೊಳ್ಳುತ್ತಿರುವ ಕ್ಯಾಥಲಾಬ್ ಘಟಕಕ್ಕೆ ಸಚಿವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಟ್ಟಡದಲ್ಲಿ ಇನ್ನು ವರೆಗೆ ಯಾವುದೇ ಯಂತ್ರ ಇಲ್ಲ. ಅಲ್ಲಿ ಕೇವಲ ಕಟ್ಟಡದ ಕೆಲಸಗಳು ಮಾತ್ರ ನಡೆಯುತ್ತಿದ್ದವು.ಸಚಿವರಾದ ಈಶ್ವರ ಖಂಡ್ರೆ, ರಹೀಮ್ ಖಾನ್, ನಗರಸಭೆ ಅಧ್ಯಕ್ಷ ಮಹ್ಮದ್ ಗೌಸ್, ಜಿಲ್ಲಾ ಗ್ಯಾರಂಟಿ ಯೋಜನೆಯ ಅಧ್ಯಕ್ಷರಾದ ಅಮೃತರಾವ್ ಚಿಮಕೋಡೆ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗಿರೀಶ ಬದೋಲೆ, ಆಸ್ಪತ್ರೆಯ ಮುಖ್ಯಸ್ಥರು ಮತ್ತಿತರರು ಇದ್ದರು.