11ರಂದು ಶಿಕಾರಿಪುರದಲ್ಲಿ ಬೃಹತ್‌ ಮಹಿಳಾ ಸಮಾವೇಶ

KannadaprabhaNewsNetwork |  
Published : Feb 04, 2024, 01:36 AM IST
3ಎಚ್ಎಸ್ಎನ್4 : ಶಿಕಾರಿಪುರದಲ್ಲಿ ನಡೆಯುವ ಪುಷ್ಪಗಿರಿ ಸಂಘದ ಸಮಾವೇಶದ ಬಗ್ಗೆ  ತಾಲ್ಲೂಕಿನ ಹುಲ್ಲೇನಹಳ್ಳಿ ಮಹಿಳಾ ಸದಸ್ಯರನ್ನು ಆಹ್ವಾನಿಸಲಾಯಿತು. | Kannada Prabha

ಸಾರಾಂಶ

ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಮಹಿಳಾ ಸ್ವ ಸಹಾಯ ಸಂಘದಿಂದ ಇದೇ ಫೆ.೧೧ರಂದು ಪುಷ್ಪಗಿರಿ ಮಹಾಸಂಸ್ಥಾನದ ಪರಮಪೂಜ್ಯ ಜಗದ್ಗುರು ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಶಿಕಾರಿಪುರದಲ್ಲಿ ನಡೆಯುವ ಬೃಹತ್ ಮಹಿಳಾ ಸಮಾವೇಶಕ್ಕೆ ತಾಲೂಕಿನ ಹುಲ್ಲೇನಹಳ್ಳಿ ಗ್ರಾಮದ ಪುಷ್ಪಗಿರಿ ಮಹಿಳಾ ಸ್ವ ಸಹಾಯ ಸಂಘದ ಸದಸ್ಯರನ್ನು ಆಹ್ವಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಬೇಲೂರು

ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಮಹಿಳಾ ಸ್ವ ಸಹಾಯ ಸಂಘದಿಂದ ಇದೇ ಫೆ.೧೧ರಂದು ಪುಷ್ಪಗಿರಿ ಮಹಾಸಂಸ್ಥಾನದ ಪರಮಪೂಜ್ಯ ಜಗದ್ಗುರು ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಶಿಕಾರಿಪುರದಲ್ಲಿ ನಡೆಯುವ ಬೃಹತ್ ಮಹಿಳಾ ಸಮಾವೇಶಕ್ಕೆ ತಾಲೂಕಿನ ಹುಲ್ಲೇನಹಳ್ಳಿ ಗ್ರಾಮದ ಪುಷ್ಪಗಿರಿ ಮಹಿಳಾ ಸ್ವ ಸಹಾಯ ಸಂಘದ ಸದಸ್ಯರನ್ನು ಆಹ್ವಾನಿಸಲಾಯಿತು. ಈ ವೇಳೆ ಮಾತನಾಡಿದ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲಾ ಯೋಜನಾಧಿಕಾರಿ ವಿನುತ ಧನಂಜಯ, ಪುಷ್ಪಗಿರಿ ಜಗದ್ಗುರುಗಳು ಕಳೆದ ೧೬ ವರ್ಷದ ತಮ್ಮ ಅಧಿಕಾರ ಅವಧಿಯಲ್ಲಿ ಶ್ರೀ ಮಠದ ಸರ್ವಾಂಗೀಣ ಅಭಿವೃದ್ಧಿಗೆ ತಮ್ಮದೆಯಾದ ಕಾಣಿಕೆ ನೀಡಿದ ಹಿನ್ನೆಲೆಯಲ್ಲಿ ಪುಷ್ಪಗಿರಿ ಮಹಾಸಂಸ್ಥಾನ ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ರಾಜ್ಯದ ಹಲವು ಜಿಲ್ಲೆಯಲ್ಲಿ ಸಾವಿರಾರು ಮಹಿಳಾ ಸ್ವಸಹಾಯ ಸಂಘ ಸ್ಥಾಪನೆ ಮಾಡಲಾಗಿದೆ. ಇದೇ ಫೆ.೧೧ರಂದು ಸಹ್ಯಾದ್ರಿ ಮಡಿಲು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಬೃಹತ್ ಸಮಾವೇಶವನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ಸರ್ಕಾರದ ಜನಪ್ರತಿನಿಧಿಗಳು‌, ಚಿಂತಕರು, ಚಲನಚಿತ್ರ ನಟರು ಹಾಗೂ ಹಲವರು ಭಾಗವಹಿಸುವ ಕಾರ್ಯಕ್ರಮದಲ್ಲಿ ತಾವುಗಳು ಎಲ್ಲರೂ ಆಗಮಿಸಿ ಸಮಾವೇಶದ ಯಶಸ್ವಿಗೆ ಸಹಕಾರ ನೀಡಬೇಕು ಎಂದರು.

ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಹಿಳಾ ಸ್ವ ಸಹಾಯ ಸಂಘಗಳು ಅತ್ಯಂತ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಅರೇಹಳ್ಳಿ ಮಹಿಳಾ ಸಂಘ ಕಾಫಿ ಪುಡಿ. ಯಸಳೂರು ಸಂಘ ಸಿಹಿ‌ ತಿಂಡಿಗಳು ಸೇರಿದಂತೆ ವಿವಿಧ ಸಂಘಗಳು ಗೃಹ ಉತ್ಪನ್ನಗಳ ತಯಾರಿಕೆಯಲ್ಲಿ ಮುಂದಾಗಿವೆ. ಅಗತ್ಯವಿರುವ ಸಂಘಗಳಿಗೆ ಸಂಸ್ಥೆಯಿಂದ ಸಾಲ ಸೌಲಭ್ಯ ‌ನೀಡಲಾಗಿದೆ. ಇಂದು ತಾಲೂಕಿನ ಹುಲ್ಲೇನಹಳ್ಳಿ ಗ್ರಾಮದ ಮಹಿಳಾ ಸಂಘ ಶಿಕಾರಿಪುರದ ಕಾರ್ಯಕ್ರಮಕ್ಕೆ ಪೂರ್ಣವಾಗಿ ಸ್ಪಂದಿಸಿದ್ದಾರೆ ಎಂದರು. ಈ ವೇಳೆ ಸುಶೀಲಮ್ಮ, ಲಾವಣ್ಯ, ಯಶೋಧ, ಜಯಮ್ಮ, ಲತಾ, ಸರೋಜಮ್ಮ, ರತ್ನಮ್ಮ, ಸವಿತಾ, ತುಳಸಿ, ಗಂಗಮ್ಮ, ಕಾಳಮ್ಮ, ಮಂಜುಳಾ, ಪಾಲಾಕ್ಷಿ, ರಾಣಿ, ಸುಶೀಲಮ್ಮ, ಎಂ. ಗೀತಾ, ರಾಧಾ, ಗಂಗಮ್ಮ, ಜಯಮ್ಮ, ಲತಾ, ಮೀನಾಕ್ಷಮ್ಮ, ಕಾಂತಮಣಿ, ನಂದಿನಿ, ನಾಗರತ್ನ, ದ್ಯಾವಮ್ಮ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಬುದ್ಧ ಭಾರತ ನಿರ್ಮಾಣ ಕನಸು ಕಂಡವರು ಅಂಬೇಡ್ಕರ್‌: ಪ್ರೊ. ವಿಶ್ವನಾಥ
ಅಕ್ಷಯ ಪಾತ್ರೆಗೆ ಆಧುನಿಕ ತಂತ್ರಜ್ಞಾನದ ಯಂತ್ರ