ಚಿತ್ತಾಪುರ: ಮೂಲ ಸೌಕರ್ಯಕ್ಕಾಗಿ ಜನಧ್ವನಿ ಒತ್ತಾಯ

KannadaprabhaNewsNetwork |  
Published : Feb 04, 2024, 01:36 AM IST
ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಮೂತ್ರಾಲಯಗಳನ್ನು ಹಾಗೂ ಸುಲಭ ಶೌಚಾಲಯಗಳನ್ನು ನಿರ್ಮಿಸಬೇಕು ಎಂದು ಆಗ್ರಹಿಸಿ ಜನಧ್ವನಿ ಜಾಗೃತ ಸಮಿತಿ ಕಾರ್ಯಕರ್ತರು ಸಹಾಯಕ ಆಯುಕ್ತರಿಗೆ ಬರೆದ ಮನವಿ ಪತ್ರವನ್ನು ಗ್ರೇಡ್-೨ ತಹಶೀಲ್ದಾರ ರಾಜಕುಮಾರ ಮರತೂರಕರ ಅವರಿಗೆ ಸಲ್ಲಿಸಿದರು. ಜನಧ್ವನಿ ಅಧ್ಯಕ್ಷ ವೀರಭದ್ರಪ್ಪ ಆರ್.ಕೆ, ಸಿದ್ಧಯ್ಯಶಾಸ್ತಿçà ನಂದೂರಮಠ ಇದ್ದರು.   | Kannada Prabha

ಸಾರಾಂಶ

ವಾಡಿ ಪಟ್ಟಣದ ವಿವಿಧೆಡೆ ಮೂತ್ರಾಲಯಗಳು ಮತ್ತು ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಬೇಕು ಎಂದು ಜನಧ್ವನಿ ಜಾಗೃತ ಸಮಿತಿಯ ಮುಖಂಡರು ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಚಿತ್ತಾಪುರ

ತಾಲೂಕಿನ ವಾಡಿ ಪಟ್ಟಣದ ವಿವಿಧೆಡೆ ಮೂತ್ರಾಲಯಗಳು ಮತ್ತು ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಬೇಕು ಎಂದು ಜನಧ್ವನಿ ಜಾಗೃತ ಸಮಿತಿಯ ಮುಖಂಡರು ಆಗ್ರಹಿಸಿದ್ದಾರೆ.

ವಾಡಿ ಪಟ್ಟಣಕ್ಕೆ ಭೇಟಿ ನೀಡಿದ್ದ ಚಿತ್ತಾಪುರ ಗ್ರೇಡ್-೨ ತಹಶೀಲ್ದಾರ ರಾಜಕುಮಾರ ಮರತೂರಕರ ಅವರ ಮೂಲಕ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದ ಜನಧ್ವನಿ ಕಾರ್ಯಕರ್ತರು, ನಗರದ ಜನತೆಗೆ ನಾಗರಿಕ ಸೌಲಭ್ಯಗಳನ್ನು ಒದಗಿಸದೆ ಸ್ಥಳೀಯ ಪುರಸಭೆ ಆಡಳಿತ ವಂಚಿಸಿದೆ ಎಂದು ಆರೋಪಿಸಿದರು.

೨೩ ವಾರ್ಡ್‌ಗಳನ್ನು ಹೊಂದಿರುವ ಪಟ್ಟಣದಲ್ಲಿ ಸುಮಾರು ಐವತ್ತು ಸಾವಿರ ಜನಸಂಖ್ಯೆಯಿದೆ. ಬೃಹತ್ ಸಿಮೆಂಟ್ ಕೈಗಾರಿಕೆ, ಜಂಕ್ಷನ್ ರೈಲು ನಿಲ್ದಾಣ, ಹತ್ತಾರು ಖಾಸಗಿ ಆಸ್ಪತ್ರೆಗಳು, ೩೦ಕ್ಕೂ ಹೆಚ್ಚು ಶಾಲೆಗಳಿದ್ದು, ಸುತ್ತಲ ಮೂವತ್ತು ಗ್ರಾಮಗಳ ಜನರು ವಾಡಿ ಮಾರುಕಟ್ಟೆಯನ್ನೇ ಅವಲಂಬಿಸಿದ್ದಾರೆ. ವ್ಯಾಪಾರ ವಹಿವಾಟಿಗಾಗಿ ಬರುವ ಜನರಿಗೆ ಕನಿಷ್ಠ ಮೂತ್ರಾಲಯಗಳ ವ್ಯವಸ್ಥೆಯಿಲ್ಲ. ಸುಲಭ ಶೌಚಾಲಯಗಳ ಸೌಲಭ್ಯವೂ ಇಲ್ಲ. ಪರಿಣಾಮ ಮಹಿಳೆಯರು ಪರದಾಡುವಂತಾಗಿದೆ. ಪುರಷರ ಪಾಲಿಗೆ ರಸ್ತೆ ಬದಿಯ ಗೋಡೆಗಳೇ ಮೂತ್ರಾಲಯಗಳಾಗಿ ಬಳಕೆಯಾಗುತ್ತಿವೆ. ಅಲ್ಲದೆ ವಿವಿಧ ಬಡಾವಣೆಗಳಿಗೆ ಕಲುಷಿತ ನೀರು ಪೂರೈಕೆಯಾಗುತ್ತಿದೆ. ನೀರು ಶುದ್ಧೀಕರಣ ಘಟಕವಿದ್ದರೂ ಪ್ರಯೋಜನವಿಲ್ಲ ಎಂದು ದೂರಿದ್ದಾರೆ. ಮೂಲ ಸೌರ್ಕಗಳಿಲ್ಲದೆ ನಗರ ಎಂಬುದು ನರಕವಾಗಿದೆ. ಪುರಸಭೆ ಆಡಳಿತ ಜನರಿಗೆ ಸೌಲಭ್ಯಗಳನ್ನು ಒದಗಿಸುವಲ್ಲಿ ಗಂಭೀರ ಚಿಂತನೆ ಮಾಡಿಲ್ಲ. ಕೂಡಲೇ ಬೇಡಿಕೆಗಳನ್ನು ಈಡೇರಿಸದಿದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.

ಜನಧ್ವನಿ ಜಾಗೃತ ಸಮಿತಿಯ ಅಧ್ಯಕ್ಷ ವೀರಭದ್ರಪ್ಪ ಆರ್.ಕೆ, ಉಪಾಧ್ಯಕ್ಷ ಸಿದ್ಧಯ್ಯಶಾಸ್ತ್ರೀ ನಂದೂರಮಠ, ಮುಖಂಡರಾದ ಮಹ್ಮದ್ ಯುಸೂಫ್‌ಸಾಬ ಕಮರವಾಡಿ, ಸಹ ಕಾರ್ಯದರ್ಶಿ ಶೇಖ ಅಲ್ಲಾಭಕ್ಷ, ಶರಣುಕುಮಾರ ದೋಶೆಟ್ಟಿ ನಿಯೋಗದಲ್ಲಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿ.23ಕ್ಕೆ ರೈತರ ದಿನಾಚರಣೆ, ರಾಜ್ಯಮಟ್ಟದ ಸಮಾವೇಶ
ಪ್ರಜಾಸೌಧ ನಿರ್ಮಾಣ ಜಾಗ ಬದಲಾವಣೆಗೆ ಆಗ್ರಹ