ಭ್ರಷ್ಟಾಚಾರ, ತುಷ್ಠೀಕರಣ ರಾಜಕಾರಣಕ್ಕೆ ತಕ್ಕ ಪಾಠ

KannadaprabhaNewsNetwork |  
Published : May 05, 2026, 01:15 AM IST
 | Kannada Prabha

ಸಾರಾಂಶ

ಪಶ್ಚಿಮ ಬಂಗಾಳ ಸೇರಿದಂತೆ ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದಕ್ಕೆ ಜಿಲ್ಲಾ ಬಿಜೆಪಿ ಸೋಮವಾರ ನಗರದಲ್ಲಿ ವಿಜಯೋತ್ಸವ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ತುಮಕೂರು

ಪಶ್ಚಿಮ ಬಂಗಾಳ ಸೇರಿದಂತೆ ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದಕ್ಕೆ ಜಿಲ್ಲಾ ಬಿಜೆಪಿ ಸೋಮವಾರ ನಗರದಲ್ಲಿ ವಿಜಯೋತ್ಸವ ಆಚರಿಸಲಾಯಿತು.

ಈ ವೇಳೆ ಮಾತನಾಡಿದ ಶಾಸಕ ಬಿ. ಸುರೇಶ್‌ಗೌಡರು, ಭ್ರಷ್ಟಾಚಾರ, ತುಷ್ಠೀಕರಣ ರಾಜಕಾರಣಕ್ಕೆ ಆಯಾ ರಾಜ್ಯದ ಜನ ತಕ್ಕ ಪಾಠ ಕಲಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಗೆಲುವು ಎಂದೂ ಸಾಧ್ಯವಿಲ್ಲ ಎಂಬ ಪ್ರತೀತಿಯನ್ನು ಈ ಸಾರಿ ಅಲ್ಲಿನ ಜನರು ಸುಳ್ಳು ಮಾಡಿದ್ದು ಅಲ್ಲಿ ಬಿಜೆಪಿ ಜಯಭೇರಿ ಬಾರಿಸಿರುವುದು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಮತ್ತು ಅಭಿವೃದ್ಧಿ ಪರ ರಾಜಕಾರಣಕ್ಕೆ ಸಂದ ದೊಡ್ಡ ಗೆಲುವಾಗಿದೆ. ಬಾಂಗ್ಲಾದಲ್ಲಿ ಜನಿಸಿದ ಜನಸಂಘ ಸ್ಥಾಪಕ ಶಾಮ್ ಪ್ರಕಾಶ್ ಮುಖರ್ಜಿಯವರಿಗೆ ಈ ಚುನಾವಣೆ ಗೆಲುವನ್ನು ಅರ್ಪಿಸುತ್ತೇವೆ ಎಂದು ಹೇಳಿದರು.ಕಳೆದ 15 ವರ್ಷಗಳಿಂದ ಅಧಿಕಾರದಲ್ಲಿ ಇದ್ದ ಅವರು ಶತಾಯ ಗತಾಯ ಮತ್ತೆ ಅಧಿಕಾರಕ್ಕೆ ಬರಲು ಎಲ್ಲ ಪ್ರಯತ್ನ ಮಾಡುತ್ತಿದ್ದರು. ಆದರೆ, ಜನರು ಅವರ ವಿರುದ್ಧ ತೀವ್ರವಾಗಿ ಬಂಡೆದ್ದುದಕ್ಕೆ ಈಗ ಬಂದಿರುವ ಫಲಿತಾಂಶವೇ ನಿದರ್ಶನ. ಬಾಂಗ್ಲಾದಿಂದ ಬಂದ ನುಸುಳುಕೋರರನ್ನು ಓಲೈಸಿಕೊಂಡು ಅವರು ಇದುವರೆಗೆ ಚುನಾವಣೆ ಗೆಲ್ಲುತ್ತಿದ್ದರು. ಅದು ಭಾರತದಲ್ಲಿಯೇ ವಾಸವಾಗಿದ್ದ ಹಿಂದೂಗಳನ್ನು ಕಡೆಗಣಿಸಿದ್ದರ ಪರಿಣಾಮವೇ ಈ ಫಲಿತಾಂಶ ಎಂದರು.

ರಾಜ್ಯದಲ್ಲಿಯೂ ಸಿಎಂ ಸಿದ್ದರಾಮಯ್ಯ ಕೂಡ ಮುಸ್ಲಿಂ ತುಷ್ಟಿಕರಣದ ರಾಜಕಾರಣದಲ್ಲಿ ತೊಡಗಿದ್ದಾರೆ. ಪಶ್ಚಿಮ ಬಂಗಾಲದ ಚುನಾವಣೆ ಫಲಿತಾಂಶ ಅವರಿಗೂ ಒಂದು ಎಚ್ಚರಿಕೆಯ ಗಂಟೆ. ತಮಿಳುನಾಡಿನ ಸಿಎಂ ಸ್ಟಾಲಿನ್ ಮತ್ತು ಅವರ ಪುತ್ರ ಉದಯನಿಧಿ ಮಾರನ್ ಹಿಂದೂ ಅಸ್ಮಿತೆಯ ವಿರುದ್ಧ ಇದ್ದರು. ಸನಾತನ ಧರ್ಮದ ವಿರುದ್ಧ ಅವರು ಮಾಡಿದ ದುರುದ್ದೇಶದ ಟೀಕೆಗಳನ್ನು ಜನರು ಮರೆತಿಲ್ಲ. ಅದಕ್ಕಾಗಿಯೇ ಅಲ್ಲಿ ಡಿಎಂಕೆ ಪಕ್ಷವನ್ನು ಜನರು ಮನೆಗೆ ಕಳಿಸಿದ್ದಾರೆ ಎಂದು ಸುರೇಶ್‌ಗೌಡ ಹೇಳಿದರು.ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ, ಬಿಜೆಪಿ ಸಂಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿಯವರು ಜನಿಸಿದ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯವರ ದುಷ್ಟ ಸರ್ಕಾರದ ವಿರುದ್ಧ ಅಲ್ಲಿನ ಜನ ಸೆಟೆದುನಿಂತು ಆ ಸರ್ಕಾರವನ್ನು ಕೊನೆಗಾಣಿಸಿದ್ದಾರೆ. ದೇಶ ವಿರೋಧಿಗಳಿಗೆ ಆಧಾರ್ ಕಾರ್ಡ್, ಎಲೆಕ್ಷನ್ ಐಡಿ ಕೊಟ್ಟು ಪೋಷಿಸಿ ದೇಶದ ಭದ್ರತೆಯ ಸಮಸ್ಯೆಗೆ ಕಾರಣವಾಗಿದ್ದ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಅವರು ತೆಗದುಕೊಂಡು ದಿಟ್ಟ ಕ್ರಮವನ್ನು ಅಲ್ಲಿನ ಜನ ಬೆಂಬಲಿಸಿದ್ದಾರೆ ಎಂದು ಹೇಳಿದರು.

ಬಾಂಗ್ಲಾದ ದುರಾಡಳಿತದ ವಿರುದ್ಧ ರೊಚ್ಚಿಗೆದ್ದ ಅಲ್ಲಿನ ಮತದಾರರು ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಿದ್ದಾರೆ. ಅಲ್ಲಿನ ಮತದಾರರು, ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರಿಗೆ ಈ ವಿಜಯವನ್ನು ಮುಡುಪಾಗಿಡಬೇಕು. ನಮ್ಮ ರಾಜ್ಯದಲ್ಲಿಯೂ ಮುಂದಿನ ದಿನಗಳಲ್ಲಿ ಇದೇ ಫಲಿತಾಂಶ ನಿರೀಕ್ಷಿಸಬಹುದಾಗಿದೆ ಎಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್. ರವಿಶಂಕರ್ ಹೆಬ್ಬಾಕ ಮಾತನಾಡಿ, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಪುದಚೇರಿ ರಾಜ್ಯದಲ್ಲಿ ಬಿಜೆಪಿ ನೇತೃತ್ವಕ್ಕೆ ಭರ್ಜರಿ ಗೆಲುವು ಸಿಕ್ಕಿದೆ. ಓಲೈಕೆ ರಾಜಕಾರಣಕ್ಕೆ ಬೆಲೆ ಇಲ್ಲ, ಅಭಿವೃದ್ಧಿಗೆ ಮಾತ್ರ ಬೆಲೆ ಎಂಬುದು ಈ ಚುನಾವಣೆಯಿಂದ ಸಾಬೀತಾಗಿದೆ. ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಚುನಾವಣೆ ಮೂರು ತಿಂಗಳ ಮೊದಲೇ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಿದ್ದರು. ಅವರ ಪಕ್ಷವನ್ನು ಆಲ್ಲಿನ ಮತದಾರರು ಆಮಿಷದ ಸರ್ಕಾರವನ್ನು ನಂಬಿಲ್ಲ. ಇದೇ ನೀತಿ ಅನುಸರಿಸಿಕೊಂಡು ಬರುತ್ತಿರುವ ಇಲ್ಲಿನ ಕಾಂಗ್ರೆಸ್ ಸರ್ಕಾರವನ್ನೂ ಜನ ಮನೆಗೆ ಕಳಿಸುತ್ತಾರೆ ಎಂದರು.

ಮುಖಂಡ ಎಸ್.ಪಿ. ಚಿದಾನಂದ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಟಿ.ಎಚ್. ಹನುಮಂತರಾಜು, ಮುಖಂಡರಾದ ಎಚ್.ಎಂ. ರವೀಶಯ್ಯ, ಬಾವಿಕಟ್ಟೆ ನಾಗಣ್ಣ, ಮಲ್ಲಿಕಾರ್ಜುನ್, ಸತ್ಯಮಂಗಲ ಜಗದೀಶ್, ವಿರೂಪಾಕ್ಷಪ್ಪ, ಜ್ಯೋತಿ ತಿಪ್ಪೇಸ್ವಾಮಿ, ವಸಂತಮ್ಮ, ಗಣೇಶ್‌ಪ್ರಸಾದ್, ಹನುಮಂತರಾಜು, ಪ್ರೀತಂ ಜೈನ್, ಗಂಗಾಧರ್, ಕೊಪ್ಪಲ್ ನಾಗರಾಜು ಮತ್ತಿತರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಿಡಿಒಗಳಿಗೆ ಸೂಕ್ತ ಸೇವಾ ಭದ್ರತೆ ಒದಗಿಸಿ
ಸಂಸತ್ ನ ಕ್ಷೇತ್ರಗಳ ಪುನರ್ ವಿಂಗಡಣೆಗೆ ಹೂಡಿದ ತಂತ್ರ