ದಾಸೋಹದಿಂದ ಸಾರ್ಥಕ ಜೀವನ ಸಾಧ್ಯ: ಓಂಕಾರ ಶಿವಾಚಾರ್ಯ ಶ್ರೀ

KannadaprabhaNewsNetwork |  
Published : Dec 30, 2025, 02:15 AM IST
ಕ್ಯಾಪ್ಷನ29ಕೆಡಿವಿಜಿ31 ದಾವಣಗೆರೆಯ ಅನ್ನದಾನೀಶ್ವರ ಮಠದಲ್ಲಿ ನಡೆದ ಶಿವಾನುಭವ ಸಂಪದ ಕಾರ್ಯಕ್ರಮದಲ್ಲಿ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. | Kannada Prabha

ಸಾರಾಂಶ

ಕಾಯಕ ಸಹಿತವಾದ ಕಾಯವೇ ಸಾರ್ಥಕ. ಕಾಯಕವಿಲ್ಲದ ಕಾಯ ನಿರರ್ಥಕ ಎಂದು ಆವರಗೊಳ್ಳ ಪುರವರ್ಗ ಹಿರೇಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಕಾಯಕ ಸಹಿತವಾದ ಕಾಯವೇ ಸಾರ್ಥಕ. ಕಾಯಕವಿಲ್ಲದ ಕಾಯ ನಿರರ್ಥಕ ಎಂದು ಆವರಗೊಳ್ಳ ಪುರವರ್ಗ ಹಿರೇಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ಇಲ್ಲಿನ ದೇವರಾಜ ಅರಸು ಬಡಾವಣೆಯಲ್ಲಿರುವ ಶ್ರೀಹಾಲಕೆರೆ ಅನ್ನದಾನೀಶ್ವರ ಶಾಖಾಮಠದಲ್ಲಿ ಭಾನುವಾರ ಸಂಜೆ ಏರ್ಪಡಿಸಿದ್ದ 287ನೇ ಶಿವಾನುಭವ ಸಂಪದ ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.

ಶರಣರು ಹಾಗೂ ದಾರ್ಶನಿಕರು ಕಾಯಕದ ಮೂಲಕ ಅನುಭವಮಂಟಪದ ತತ್ವವನ್ನು ನಂಬಿ, ಕಾಯಕ ಮತ್ತು ದಾಸೋಹದ ಮಹತ್ವವನ್ನು ಸಮಾಜಕ್ಕೆ ಪ್ರತಿಪಾದಿಸಿದರು. ಈ ದಿಸೆಯಲ್ಲಿ ಮನುಷ್ಯನ ಜೀವನ ರೂಪುಗೊಳ್ಳಬೇಕಾದರೆ, ಕಾಯಕ ಮತ್ತು ದಾಸೋಹವನ್ನು ಅಳವಡಿಸಿಕೊಂಡು ಸಾರ್ಥಕ ಬದುಕು ನಡೆಸುವುದು ಅಗತ್ಯವಿದೆ ಎಂದು ಅವರು ತಿಳಿಸಿದರು.

ಶರಣರು ಕಾಯಕದ ಮೂಲಕ ಸ್ವಾನುಭವವನ್ನು ಪಡೆದು, ಯಾವುದೇ ಅಪೇಕ್ಷೆ ಇಲ್ಲದೆ ಕಾಯಕ-ದಾಸೋಹದ ಚಿಂತನೆಯನ್ನು ನಡೆಸಿದರು. ಕಾಯಕದ ಸಾರವನ್ನು ಜಗತ್ತಿಗೆ ತೋರಿಸಿದ ಮಹಾನ್ಪರಂಪರೆ ಶರಣರದ್ದು ಎಂದು ಹೇಳಿದರು.

ದಾಸೋಹವೆಂದರೆ ಕೇವಲ ಅನ್ನದಾಸೋಹ ಮಾತ್ರವಲ್ಲ. ಪ್ರೀತಿ ದಾಸೋಹ, ಭಕ್ತಿ ದಾಸೋಹ, ಸ್ನೇಹ ದಾಸೋಹ, ಸೌಹಾರ್ದ ದಾಸೋಹ ಎಲ್ಲರನ್ನೂ ನಮ್ಮವರಂತೆ ಭಾವಿಸುವ ಉದಾತ್ತ ಪರಿಕಲ್ಪನೆಯನ್ನು ಬೆಳೆಸಿದವರು ಶರಣರು ಎಂದು ಶ್ರೀಗಳು ನುಡಿದರು.

ಎಚ್.ಎಂ.ಗುರುಬಸಯ್ಯ ಕಾಯಕ ಮತ್ತು ದಾಸೋಹ ಕುರಿತು ಉಪನ್ಯಾಸ ನೀಡಿದರು.

ಅಮರಯ್ಯ ಗುರುವಿನ ಮಠ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಎಂ.ಅಡಿವೆಪ್ಪ, ನಾಗರಾಜ ಯರಗಲ್, ಕಲ್ಲೇಶ, ಎನ್.ಎ.ಗುರುರಾಜ, ವಿವೇಕ, ರಾಜು ಭಾವಿ, ಪತ್ರಕರ್ತ ಅನಿಲ್ ಕುಮಾರ ಭಾವಿ ಇತರರು ಇದ್ದರು.

ಎಂ.ಜಿ.ಅಮರೇಶ ಮತ್ತು ಮಕ್ಕಳು ಭಕ್ತಿ ಸೇವೆ ಸಲ್ಲಿಸಿದರು.

ಸುನಂದಾ ಪ್ರಾರ್ಥಿಸಿದರೆ, ಮಹಾರುದ್ರಪ್ಪ ಮೆಣಸಿನ ಕಾಯಿ ಸ್ವಾಗತಿಸಿದರು. ಶಿಕ್ಷಕಿ ವಿ.ಬಿ.ತನುಜಾ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ಭೂಮಿ ಒತ್ತುವರಿಗೆ ಅವಕಾಶ ನೀಡಲ್ಲ: ಡಿಸಿಎಂ
ಏಕಾದಶಿ ಪ್ರಯುಕ್ತ ಶರವಣ ಟ್ರಸ್ಟ್‌ನಿಂದ ಲಕ್ಷ ಲಡ್ಡು ಹಂಚಿಕೆ