ಸಾರಿಗೆ ಸಂಸ್ಥೆಯ ಬಸ್ಸಿನ ಸೀಟಿನಲ್ಲಿ ಕೂತು ಪ್ರಯಾಣಿಕರೊಂದಿಗೆ ಕೋತಿಯೊಂದು ಪ್ರಯಾಣಿಸಿದ ಘಟನೆ ಇಲ್ಲಿ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.
ಕನ್ನಡಪ್ರಭ ವಾರ್ತೆ ಹಾವೇರಿ ಸಾರಿಗೆ ಸಂಸ್ಥೆಯ ಬಸ್ಸಿನ ಸೀಟಿನಲ್ಲಿ ಕೂತು ಪ್ರಯಾಣಿಕರೊಂದಿಗೆ ಕೋತಿಯೊಂದು ಪ್ರಯಾಣಿಸಿದ ಘಟನೆ ಇಲ್ಲಿ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ. ಹಾವೇರಿಯಿಂದ ಹಿರೇಕೆರೂರಿಗೆ ಗುರುವಾರ ಬೆಳಗ್ಗೆ ಹೊರಟಿದ್ದ ಬಸ್ಸಿನೊಳಗೆ ಕೋತಿಯೊಂದು ಒಳಹೊಕ್ಕಿ ಪ್ರಯಾಣಿಕರು ಕೂರುವ ಸೀಟನ್ನು ಆಕ್ರಮಿಸಿಕೊಂಡು ಕೂತಿದೆ. ಬಸ್ಸಿನಲ್ಲಿ ಪ್ರಯಾಣಿಕರು ತುಂಬಿ ತುಳುಕುತ್ತಿದ್ದರೂ ಕೋತಿ ಯಾವುದಕ್ಕೂ ಅಂಜದೇ ಸುಮಾರು 30 ಕಿಲೋ ಮೀಟರ್‌ವರೆಗೂ ಪ್ರಯಾಣಿಸಿದೆ. ಆದರೆ ಯಾವುದೇ ಪ್ರಯಾಣಿಕರಿಗೆ ತೊಂದರೆ ನೀಡಲಿಲ್ಲ, ಬಸ್ಸಿನಲ್ಲಿದ್ದ ಪ್ರಯಾಣಿಕರು ಇಡೀ ಸೀಟನ್ನು ಕೋತಿಗೆ ಬಿಟ್ಟುಕೊಟ್ಟು ಮೋಜು ಅನುಭವಿಸಿದರು. ಮನುಷ್ಯರಂತೆಯೇ ಸೀಟಿನಲ್ಲಿ ಆರಾಮವಾಗಿ ಕೂತು, ಆಗಾಗ ಕಿಟಕಿಯಲ್ಲಿ ಇಣುಕಿ ನೋಡುತ್ತಿದ್ದ ಕೋತಿಯನ್ನು ನೋಡಿ ಪ್ರಯಾಣಿಕರು ಸಂತಸ ಪಟ್ಟರು. ಅಲ್ಲಿದ್ದ ಕೆಲವರು ಕೋತಿಗೆ ಬಾಳೆಹಣ್ಣು, ಬಿಸ್ಕತ್ ನೀಡಿದರೂ ಅದು ಯಾವುದನ್ನೂ ಸ್ವೀಕರಿಸದೇ ಗಾಂಭೀರ್ಯದಿಂದ ಕೂತು ಪ್ರಯಾಣಿಸಿತು. ಬಸ್ಸಿನಲ್ಲಿ ಕೋತಿ ಪ್ರಯಾಣಿಸುತ್ತಿದ್ದ ದೃಶ್ಯವನ್ನು ಪ್ರಯಾಣಿಕರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಬೆಳಗ್ಗೆಯಿಂದಲೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.