ಹಾವೇರಿ: ನಗರದ ವಿಶ್ವಗುರು ವಿದ್ಯಾವರ್ಧಕ ಸೇವಾ ಸಂಸ್ಥೆಯಲ್ಲಿ ಲೇಖಕಿ ಕಮಲಾ ಹಂಪನಾ ನಿಧನ ಹಿನ್ನೆಲೆಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಈ ವೇಳೆ ಮಾತನಾಡಿದ ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿ, ಕಮಲಾ ಹಂಪನಾ ಅವರು ಹಾವೇರಿ ಜಿಲ್ಲೆಯ ಜೊತೆಗೆ ಅನ್ಯೋನ್ಯ ಸಂಬಂಧವಿಟ್ಟುಕೊಂಡಿದ್ದರು.
ಅಂತರ್ಜಾತಿ ವಿವಾಹ ಆಗಿದ್ದ ಅವರು ನೈಜ ದಾಂಪತ್ಯ ಜೀವನಕ್ಕೆ ಮಾದರಿ ಆಗಿದ್ದರು. ಮಹಿಳಾ ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆ ಅನನ್ಯ ಎಂದರು.ಕಸಾಪ ತಾಲೂಕಾಧ್ಯಕ್ಷ ವೈ.ಬಿ. ಆಲದಕಟ್ಟಿ, ಎಸ್.ಆರ್.ಹಿರೇಮಠ, ಲೇಖಕಿ ಅನಿತಾ ಮಂಜುನಾಥ ಮಾತನಾಡಿದರು, ಈರಣ್ಣ ಬೆಳವಡಿ, ಸಾವಿತ್ರೆಮ್ಮ ಬಾರ್ಕಿ, ಡಾ.ಗೀತಾ ಸುತ್ತಕೋಟಿ, ಜಿ.ಎಂ. ಓಂಕಾರಣ್ಣನವರ, ರಾಜೇಂದ್ರ ಹೆಗಡೆ, ಎಚ್.ಆರ್. ಹೊಸಮನಿ, ಪೃಥ್ವಿರಾಜ ಬೆಟಗೇರಿ, ನೇತ್ರಾವತಿ ಅಂಗಡಿ, ನಾಗರಾಜ ಹುಡೇದ, ಅಲ್ಲಾಭಕ್ಷಿ, ಗೂಳಪ್ಪ ಅರಳಿಕಟ್ಟಿ, ಸಿದ್ದೇಶ್ವರ ಹುಣಶಿಕಟ್ಟಿಮಠ ಉಪಸ್ಥಿತರಿದ್ದರು.
ಬ್ಯಾಡಗಿಯಲ್ಲೂ ಕಂಬನಿ: ಹಿರಿಯ ಮಹಿಳಾ ಸಾಹಿತಿ, ನಾಡೋಜ ಡಾ. ಕಮಲಾ ಹಂಪನಾ ನಿಧನಕ್ಕೆ ಮಹಿಳಾ ಸಾಹಿತಿ ಹಾಗೂ ಬರಹಗಾರ್ತಿ ಸಂಕಮ್ಮ ಸಂಕಣ್ಣನವರ ಸೇರಿದಂತೆ ಕಸಾಪ ಬ್ಯಾಡಗಿ ತಾಲೂಕು ಮತ್ತು ಜಿಲ್ಲಾ ಘಟಕದ ಅಧ್ಯಕ್ಷರು ಹಾಗೂ ಸದಸ್ಯರು ಕಂಬನಿ ಮಿಡಿದಿದ್ದಾರೆ.ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ಕಮಲಾ ಹಂಪನಾ ನಿಧನದಿಂದ ಕನ್ನಡ ಸಾಹಿತ್ಯದ ಕಳಸವೊಂದು ಕಳಚಿದಂತಾಗಿದೆ.
ಭಾರತೀಯ ಅತ್ಯುತ್ತಮ ಬರಹಗಾರರಲ್ಲಿ ಒಬ್ಬರಾಗಿದ್ದ ಅವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದಾರಲ್ಲದೇ ಪ್ರಾಚೀನ ಪುರಾತನ ಕೃತಿಗಳ ಅನುಯಾಯಿಯಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದವರಾಗಿದ್ದಾಗಿ ತಿಳಿಸಿದರು.ಅಧ್ಯಯನ ಪ್ರಬಂಧಕ್ಕಾಗಿ ಕಮಲಾ ಹಂಪನಾ ಅವರಿಗೆ ಡಾಕ್ಟರೇಟ್ ದೊರೆತಿದ್ದು, ಜೈನಧರ್ಮ ನೈಸರ್ಗಿಕ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ, ಮೈಸೂರು ವಿವಿ ಅಧ್ಯಕ್ಷರಾಗಿ ಮತ್ತು ಹಂಪಿ ವಿವಿ ಅಧ್ಯಕ್ಷರಾಗಿ, ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಸ್ತ್ರೀ ಸಂವೇದನೆ ಕುರಿತ ಸಂಶೋಧನೆ ಅವರಿಗೆ ಅಪಾರ ಖ್ಯಾತಿಯನ್ನು ತಂದುಕೊಟ್ಟದ್ದು, ಪ್ರಾಚೀನ ಕನ್ನಡ ಸಾಹಿತ್ಯ, ಜೈನಶಾಸ್ತ್ರ ಮತ್ತು ಜೈನ ಕೃತಿಗಳ ಆಳವಾದ ಒಳನೋಟ ಸಿಗಲಿದೆ ಎಂದರು.
ಈ ಸಂದರ್ಭದಲ್ಲಿ ಕಸಾಪ ತಾಲೂಕಾಧ್ಯಕ್ಷ ಬಿ.ಎಂ. ಜಗಾಪೂರ, ಡಾ. ಪ್ರೇಮಾನಂದ ಲಕ್ಕಣ್ಣನವರ, ಜೀವರಾಜ ಛತ್ರದ, ಮಹಾದೇವ ಕರಿಯಣ್ಣನವರ, ಬಿ. ಸುಭಾಸ್, ಮಾಲತೇಶ ಚಳಗೇರಿ, ಎಂ.ಎಫ್. ಕರಿಯಣ್ಣನವರ, ಶಕುಂತಲ ದಾಳೇರ, ವೈ.ಟಿ.ಹೆಬ್ಬಳ್ಳಿ, ಎಸ್.ಬಿ.ಇಮ್ಮಡಿ, ರಾಜಣ್ಣ ಹೊಸಳ್ಳಿ, ಹರೀಶ್ ಮಾಳಾಪುರ, ಜಮೀರ್ ರಿತ್ತಿ ಸೇರಿದಂತೆ ಕಸಾಪದ ಇನ್ನಿತರ ಸದಸ್ಯರು ಉಪಸ್ಥಿತರಿದ್ದರು.