ಬಿಜೆಪಿ ಜನತೆಯ ಕ್ಷಮೆ ಯಾಚಿಸಲಿ: ವೀಣಾ ಅಚ್ಚಯ್ಯ ಆಗ್ರಹ

KannadaprabhaNewsNetwork |  
Published : Jun 23, 2024, 02:02 AM IST
ಸುದ್ದಿಗೋಷ್ಠಿ | Kannada Prabha

ಸಾರಾಂಶ

ಬಿಜೆಪಿ ಜಿಲ್ಲೆಯ ಜನತೆಯ ಕ್ಷಮಾಪಣೆ ಕೋರಬೇಕು ಎಂದು ಮಾಜಿ ವಿಧಾನ ಪರಿಷತ್‌ ಸದಸ್ಯೆ ಆಗ್ರಹಿಸಿದರು. ಪ್ರತಿಭಟನೆ ಸಂದರ್ಭ ಬಿಜೆಪಿ ಪ್ರಮುಖರು ಪ್ರತಿಕೃತಿ ದಹಿಸಿರುವುದನ್ನು ಖಂಡಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗಿನ ವಿಶಿಷ್ಟ ಸಂಸ್ಕೃತಿ ಪರಂಪರೆಗಳನ್ನು ಮರೆತು, ವಿರಾಜಪೇಟೆ ಶಾಸಕ, ಕೊಡವ ಸಮೂಹದ ಎ.ಎಸ್.ಪೊನ್ನಣ್ಣ ಅವರ ಪ್ರತಿಕೃತಿಯನ್ನು ಪ್ರತಿಭಟನೆಯ ಸಂದರ್ಭ ಬಿಜೆಪಿ ಪ್ರಮುಖರು ದಹಿಸಿರುವುದನ್ನು ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ತೀವ್ರವಾಗಿ ಖಂಡಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ಬಿಜೆಪಿ ಜಿಲ್ಲೆಯ ಜನತೆಯ ಕ್ಷಮಾಪಣೆ ಕೋರಬೇಕೆಂದು ಆಗ್ರಹಿಸಿದ್ದಾರೆ.

ತಾನೊಬ್ಬ ಕೊಡವತಿಯಾಗಿ ಮಾತನಾಡುತ್ತಿದ್ದೇನೆಯೇ ಹೊರತು ರಾಜಕಾರಣಿಯಾಗಿ ಅಲ್ಲವೆಂದು ಸ್ಪಷ್ಟಪಡಿಸಿದ ಅವರು, ಇಂಧನ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ವಿರಾಜಪೇಟೆಯಲ್ಲಿ ಬಿಜೆಪಿ ನಡೆಸಿದ ಪ್ರತಿಭಟನೆಯಲ್ಲಿ ಶಾಸಕ ಎ.ಎಸ್. ಪೊನ್ನಣ್ಣ ಪ್ರತಿಕೃತಿ ದಹಿಸಲಾಗಿದ್ದು, ಅದರಲ್ಲಿ ಸ್ಥಳೀಯ ಸಂಸ್ಕೃತಿಯ ಬಗ್ಗೆ ಅರಿವಿರುವ ಕೊಡವ ಮಹಿಳೆಯರು ಪಾಲ್ಗೊಂಡಿರುವ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದರು. ಬಿಜೆಪಿಯ ಇಂತಹ ನಡೆಗಳು ಆ ಪಕ್ಷದ ಅವನತಿಗೆ ಹಾದಿಯಾಗಿದೆಯೆಂದು ಕಟುವಾಗಿ ನುಡಿದರು.

ಕೊಡವರಿಗೆ ಹುಟ್ಟು ಸಾವಿನ ಸಂದರ್ಭ ಅವರದ್ದೇ ಆದ ಆಚರಣೆಗಳು, ಪದ್ಧತಿ ಪರಂಪರೆಗಳಿವೆ. ಬೀದಿ ನಡುವೆ ಕೊಡವ ಸಮೂಹಕ್ಕೆ ಸೇರಿದ ಜನಪ್ರತಿನಿಧಿಯ ಪ್ರತಿಕೃತಿ ದಹಿಸಲಾಗಿದೆ. ಈ ಸಂದರ್ಭ ಬಿಜೆಪಿಯಲ್ಲಿನ ಕೆಲ ಕೊಡವ ಸಮೂಹಕ್ಕೆ ಸೇರಿದ ಮಹಿಳಾ ಪ್ರಮುಖರು ಪಾಲ್ಗೊಂಡಿರುವುದು ಆಶ್ಚರ್ಯವನ್ನು ಉಂಟುಮಾಡಿದೆ. ಕೊಡವ ಸಮೂಹದಲ್ಲಿ ಅಂತ್ಯ ಸಂಸ್ಕಾರದ ಸಂದರ್ಭ ಬಿಳಿ ಉಡುಪು ಧರಿಸುವುದು ಸಂಪ್ರದಾಯ. ಅದರಂತೆ ಪ್ರತಿಕೃತಿ ದಹನದ ಸಂದರ್ಭ ಅದರಲ್ಲಿ ಪಾಲ್ಗೊಂಡವರು ಬಿಳಿ ಉಡುಪು ಧರಿಸಬೇಕಿತ್ತೆಂದು ಮಾರ್ಮಿಕವಾಗಿ ನುಡಿದರು.

ಪ್ರಸ್ತುತ ಬಿಜೆಪಿಯವರಿಂದ ಪ್ರತಿಕೃತಿ ದಹನದಿಂದ ವಿರಾಜಪೇಟೆ ಕ್ಷೇತ್ರಕ್ಕೆ ಎ.ಎಸ್. ಪೊನ್ನಣ್ಣ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡಿದ ಜನರಿಗೆ ಅತೀವ ನೋವನ್ನುಂಟುಮಾಡಿದೆಯೆಂದರು.

ಈ ಹಿಂದೆ ವಿಧಾನ ಸಭೆಯ ಸಭಾಧ್ಯಕ್ಷರಾಗಿದ್ದ ಕೆ.ಜಿ. ಬೋಪಯ್ಯ ಅವರು ಅಪ್ಪಚ್ಚು ರಂಜನ್ ಅವರು ಶಾಸಕರಾಗಿದ್ದ ಸಂದರ್ಭ ಸಾಕಷ್ಟು ಬಾರಿ ಬೆಲೆ ಹೆಚ್ಚಳವಾಗಿದ್ದರು, ಅಂದು ಕಾಂಗ್ರೆಸ್ ಹಾದಿಯಾಗಿ ಬೀದಿಯಲ್ಲಿ ಬಿಜೆಪಿಯಂತೆ ಪ್ರತಿಕೃತಿ ದಹನಕ್ಕೆ ಮುಂದಾಗಿರಲಿಲ್ಲವೆಂದು ನೆನಪಿಸಿದರು.

PREV

Recommended Stories

ದ.ಕ.ದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆಗೆ ಚಾಲನೆ
ಕದ್ರಿ ದೇವಸ್ಥಾನ ಪ್ರಾಂಗಣದಲ್ಲಿ ‘ಮುದ್ದು ಕೃಷ್ಣ’ ವೇಷ ಸ್ಪರ್ಧೆ