ಆರ್ಥಿಕ ಭದ್ರತೆ ಕಸಿದುಕೊಂಡ ಹೊಸ ಪೆನ್ಷನ್‌ ಯೋಜನೆ: ಅರುಣ್‌

KannadaprabhaNewsNetwork |  
Published : Jun 15, 2026, 02:30 AM IST
14ಎಚ್.ಎಲ್.ಐ1.ಕರ್ನಾಟಕ ಸರ್ಕಾರಿ ನೌಕರರ ಸಂಘದವತಿಯಿಂದ ಶನಿವಾರ ರಾತ್ರಿ ಸಂಘದ ಸಭಾಂಗಣದಲ್ಲಿ ವಯೋನಿವೃತ್ತಿಯಾದ ಸರ್ಕಾರಿ ನೌಕರರನ್ನು ಸಂಘದವತಿಯಿಂದ ಸನ್ಮಾನಿಸಿ, ಬೀಳ್ಕಕೋಡಲಾಯಿತು .   | Kannada Prabha

ಸಾರಾಂಶ

ಪ್ರಸಕ್ತ ದಿನಗಳಲ್ಲಿ ಸರ್ಕಾರಿ ಇಲಾಖೆಗಳಲ್ಲಿ ನೌಕರಿ ಲಭಿಸಿ ಕೆಲಸ ಮಾಡುವುದೇ ಪುಣ್ಯದ ಫಲ ಎನ್ನುವಂತಾಗಿದೆ. ಆದರೆ ಸರ್ಕಾರ ಜಾರಿಗೆ ತಂದಿರುವ ಎನ್.ಪಿ.ಎಸ್. ಹೊಸ ಪೆನ್ಷನ್ ಯೋಜನೆಯಿಂದಾಗಿ ನಿಜಕ್ಕೂ ನಿವೃತ್ತ ನೌಕರರ ಸಂಧ್ಯಾಕಾಲದ ಜೀವನಕ್ಕೆ ಆರ್ಥಿಕ ಭದ್ರತೆ ಇಲ್ಲದಂತಾಗಿದೆ ಎಂದು ಸರ್ಕಾರ ನೌಕರರ ಸಂಘದ ತಾಲೂಕು ಅಧ್ಯಕ್ಷ ಕೆ.ಅರುಣ್ ವಿಷಾದಿಸಿದ್ದಾರೆ.

- ಸರ್ಕಾರಿ ನೌಕರರ ಸಂಘದಿಂದ ನಿವೃತ್ತರಿಗೆ ಸನ್ಮಾನ, ಬೀಳ್ಕೊಡುಗೆ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಪ್ರಸಕ್ತ ದಿನಗಳಲ್ಲಿ ಸರ್ಕಾರಿ ಇಲಾಖೆಗಳಲ್ಲಿ ನೌಕರಿ ಲಭಿಸಿ ಕೆಲಸ ಮಾಡುವುದೇ ಪುಣ್ಯದ ಫಲ ಎನ್ನುವಂತಾಗಿದೆ. ಆದರೆ ಸರ್ಕಾರ ಜಾರಿಗೆ ತಂದಿರುವ ಎನ್.ಪಿ.ಎಸ್. ಹೊಸ ಪೆನ್ಷನ್ ಯೋಜನೆಯಿಂದಾಗಿ ನಿಜಕ್ಕೂ ನಿವೃತ್ತ ನೌಕರರ ಸಂಧ್ಯಾಕಾಲದ ಜೀವನಕ್ಕೆ ಆರ್ಥಿಕ ಭದ್ರತೆ ಇಲ್ಲದಂತಾಗಿದೆ ಎಂದು ಸರ್ಕಾರ ನೌಕರರ ಸಂಘದ ತಾಲೂಕು ಅಧ್ಯಕ್ಷ ಕೆ.ಅರುಣ್ ವಿಷಾದಿಸಿದರು.

ಸರ್ಕಾರಿ ನೌಕರರ ಸಂಘದ ವತಿಯಿಂದ ಶನಿವಾರ ರಾತ್ರಿ ಸಂಘದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದವರಿಗೆ ಸನ್ಮಾನ ಮತ್ತು ಬೀಳ್ಕೋಡುಗೆ ಸಮಾರಂಭದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಗ್ರಾಮ ಪಂಚಾಯಿತಿ ಕಾರ್ಯದರ್ಶಿಯಾಗಿ ಹಲವು ದಶಕಗಳ ಸೇವೆ ಸಲ್ಲಿಸಿ ಸೇವೆಯಲ್ಲಿರುವಾಗ ಲಕ್ಷ ರು. ವೇತನ ಪಡೆಯುತ್ತಿದ್ದು, ಇದೀಗ ನಿವೃತ್ತಿಯಾದಾಗ ಎನ್.ಪಿ.ಎಸ್. ಅಡಿಯಲ್ಲಿ ಅವರಿಗೆ ಕೇವಲ ₹2200 ಮಾತ್ರ ಪೆನ್ಷನ್ ನಿಗದಿಯಾಗಿದೆ. ಇಷ್ಟು ಅಲ್ಪ ಮೊತ್ತದ ಹಣದಿಂದ ಅವರ ಕುಟುಂಬ ನಿರ್ವಹಣೆ ಹೇಗೆ ಸಾಧ್ಯ ಎಂದರು.

ಇವರ ಜೊತೆಯಲ್ಲಿಯೇ ನೌಕರಿ ಮಾಡಿದ ಒಪಿಎಸ್ ಯೋಜನೆಯಡಿಯ ನೌಕರರಿಗೆ ₹30 ಸಾವಿರಕ್ಕಿಂತ ಹೆಚ್ಚಿನ ಮೊತ್ತದ ನಿವೃತ್ತಿ ವೇತನ ಪಡೆಯುವ ನೌಕರರೂ ಇದ್ದಾರೆ. ಆದರೆ, ಎನ್.ಪಿ.ಎಸ್. ಯೋಜನೆಯಡಿ ನಿವೃತ್ತಿಯಾದವರು. ನಿವೃತ್ತಿಯ ನಂತರ ಅವರ ಜೀವನದ ಪರಿಸ್ಥಿತಿ ಕಲ್ಪನೆ ಮಾಡಿಕೊಳ್ಳಲು ಅಸಾಧ್ಯವಾಗಿದ್ದು, ಸರ್ಕಾರ ಆದಷ್ಟು ಬೇಗ ಈ ಎನ್.ಪಿ.ಎಸ್. ಯೋಜನೆ ರದ್ದು ಮಾಡಿ ಹಿಂದಿನಂತೆ ಒ.ಪಿ.ಎಸ್. ಯೋಜನೆ ಜಾರಿಗೆ ಮಾಡಿದರೆ ಲಕ್ಷಾಂತರ ನೌಕರರ ಕುಟುಂಬಗಳು ಸಂಧ್ಯಾಲದ ಜೀವನ ಸಂಕಷ್ಟದಿಂದ ಪಾರಾಗಬಹುದು ಎಂದ ಅವರು, ಪ್ರಸ್ತುತ ಸರ್ಕಾರಿ ನೌಕರರ ಸಂಘ ಅ‍ವರಣದಲ್ಲಿ ಮುಂದಿನ ದಿನಗಳಲ್ಲಿ 5 ವಾಣಿಜ್ಯ ಮಳಿಗೆಗಳನ್ನು ನಿರ್ಮಿಸುವ ಯೋಜನೆ ಕೂಡ ಹೊಂದಲಾಗಿದೆ ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಸ್.ಜಿ, ಉಮಾಪತಿ, ತಾಲೂಕು ಅಧ್ಯಕ್ಷ ಜಿಎಸ್. ತಿಮ್ಮಪ್ಪ, ನೌಕರರ ಸಂಘದ ಗೌರವಾಧ್ಯಕ್ಷ ಎಚ್.ಕೆ., ಚಂದ್ರಶೇಖರ, ನಿವೃತ್ತ ನೌಕರರ ಪರವಾಗಿ ಶಿಕ್ಷಕ ದೇವರಾಜ್, ಶೇಖರಪ್ಪ, ಮೆಹರುನ್ನಿಸಾ ಮಾತನಾಡಿದರು.

ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ನೌಕರರು ಮತ್ತು ಶಿಕ್ಷಕರಾದ ಎ.ಶೇಖರಪ್ಪ, ಇಬ್ರಾಹಿಂ ಎಚ್.ಎಣ್ಣೇರ, ಎಂ.ಬಿ.ವಿನೋದ, ಶಾಂತವೀರಯ್ಯ, ಎ.ಆರ್.ರಾಜಪ್ಪ, ಎಂ.ಆರ್.ಗಣೇಶ್, ಎಸ್.ದೇವರಾಜ, ಕೆ.ಮೆಹರುನ್ನಿಸಾ, ಎಸ್.ಗುಂಡಪ್ಪ, ಎಸ್.ಎಂ.ಸುಶಿಲಮ್ಮ, ಕೆ.ಗೌರಮ್ಮ, ಟಿ.ಮಂಜಪ್ಪ. ಹನುಮಂತಪ್ಪ, ಟಿ.ಎಚ್. ನಾಗರಾಜ ಅವರನ್ನು ನೆನಪಿನ ಕಾರಣಿಕೆ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಕಾಶ್ ನಾಯ್ಕ, ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಕುಮಾರ್, ಹಾಲಿ ಉಪಾಧ್ಯಕ್ಷ ಜಯರಾಂ, ಪ್ರಧಾನ ಕಾರ್ಯದರ್ಶಿ ಬಸವರಾಜ ಸೇರಿದಂತೆ ಶಿಕ್ಷಕರ ಮತ್ತು ನೌಕರರ ಸಂಘಗಳ ಪದಾಧಿಕಾರಿಗಳು ಇದ್ದರು. ರಾಜ್ ಕುಮಾರ್ ಸ್ವಾಗತಿಸಿದರು. ಕುಮಾರ ಬಾರ್ಕಿ ಕಾರ್ಯಕ್ರಮ ನಿರೂಪಿಸಿದರು.

- - -

-14ಎಚ್.ಎಲ್.ಐ1:

ಸೇವೆಯಿಂದ ನಿವೃತ್ತರಾದ ನೌಕರರಿಗೆ ಹೊನ್ನಾಳಿಯಲ್ಲಿ ಸರ್ಕಾರಿ ನೌಕರರ ಸಂಘದಿಂದ ಶನಿವಾರ ರಾತ್ರಿ ಸನ್ಮಾನಿಸಿ ಬೀಳ್ಕಕೋಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರಿಯಾಗಿ ಕಾಲೇಜು ಆಯ್ಕೆ ಮಾಡಿದರೆ ಉತ್ತಮ ಭವಿಷ್ಯ
ಕೇಂದ್ರದ ಬಿಜೆಪಿ ಅಧಿಕಾರದಿಂದ ಯಾರಿಗೂ ನೆಮ್ಮದಿ ಇಲ್ಲ: ಟಿ.ಡಿ.ರಾಜೇಗೌಡ ಟೀಕೆ