ಕೆರೆಯಲ್ಲಿ ಮುಳುಗಿದ ವ್ಯಕ್ತಿ : ನೀರು ಖಾಲಿ ಮಾಡಿ ಶೋಧಕಾರ್ಯ

KannadaprabhaNewsNetwork |  
Published : Aug 06, 2024, 12:30 AM IST
ಸುರಪುರ ತಾಲೂಕಿನ ಕೆಂಭಾವಿ ಸಮೀಪದ ಮಲ್ಲಾ.ಬಿ ಕೆರೆಯಲ್ಲಿ ಮುಳಗಿದ ವ್ಯಕ್ತಿಯ ಮೃತದೇಹಕ್ಕಾಗಿ ಶೋಧಕ್ಕಾಗಿ ಕೆರೆಯ ನೀರನ್ನು ಮೋಟಾರ್‌ಗಳ ಮೂಲಕ ಖಾಲಿ ಮಾಡುತ್ತಿರುವುದು.  | Kannada Prabha

ಸಾರಾಂಶ

ಶ್ರಾವಣ ಹಬ್ಬದ ನಿಮಿತ್ತ ಬಟ್ಟೆಯನ್ನು ತೊಳೆಯಲು ಹೋಗಿದ್ದ ವ್ಯಕ್ತಿಯೊಬ್ಬ ಕೆರೆಯಲ್ಲಿ ಭಾನುವಾರ ಮುಳುಗಿರುವ ಘಟನೆ ಮಲ್ಲಾ (ಬಿ) ಗ್ರಾಮದಲ್ಲಿ ಸಂಭವಿಸಿದ್ದು, ಮೃತದೇಹಕ್ಕಾಗಿ ಸೋಮವಾರ ಶೋಧ ಕಾರ್ಯ ಮುಂದುವರಿದಿದೆ.

ಕನ್ನಡಪ್ರಭ ವಾರ್ತೆ ಸುರಪುರ

ಶ್ರಾವಣ ಹಬ್ಬದ ನಿಮಿತ್ತ ಬಟ್ಟೆಯನ್ನು ತೊಳೆಯಲು ಹೋಗಿದ್ದ ವ್ಯಕ್ತಿಯೊಬ್ಬ ಕೆರೆಯಲ್ಲಿ ಭಾನುವಾರ ಮುಳುಗಿರುವ ಘಟನೆ ಮಲ್ಲಾ (ಬಿ) ಗ್ರಾಮದಲ್ಲಿ ಸಂಭವಿಸಿದ್ದು, ಮೃತದೇಹಕ್ಕಾಗಿ ಸೋಮವಾರ ಶೋಧ ಕಾರ್ಯ ಮುಂದುವರಿದಿದೆ. ಮಲ್ಲಾ (ಬಿ) ಗ್ರಾಮದ ದತ್ತಪ್ಪ (40) ನೀರಿನಲ್ಲಿ ಮುಳುಗಿ ಮೃತಪಟ್ಟವರೆಂದು ಗುರುತಿಸಲಾಗಿದೆ. ಭಾನುವಾರ ಆರಂಭವಾದ ಮೃತದೇಹದ ಶೋಧ ಕಾರ್ಯ ಸೋಮವಾರವೂ ಮುಂದುವರೆದಿದ್ದು ಶವ ದೊರೆತಿಲ್ಲ. ಇದರಿಂದ ಭಯಭೀತಗೊಂಡ ಗ್ರಾಮಸ್ಥರು ಮತ್ತು ಅಧಿಕಾರಿಗಳು ಕೆರೆಯ ನೀರನ್ನು ಐದು ನೀರೆತ್ತುವ ಮೋಟಾರ್‌ಗಳನ್ನು ಇಟ್ಟು ಖಾಲಿ ಮಾಡುತ್ತಿದ್ದಾರೆ. ಕೆರೆ ನೀರು ಖಾಲಿ ಮಾಡಿ ಗ್ರಾಮಸ್ಥರು ಮತ್ತು ಈಜು ತಜ್ಞರು ಮೃತದೇಹ ಹುಡುಕಾಟ ನಡೆಸಿದರೂ ದೊರೆತಿಲ್ಲ. ಈ ಕುರಿತು ಮಾಹಿತಿ ನೀಡಿದರೂ ಅಧಿಕಾರಿಗಳು ಬಾರದಿರುವ ಬಗ್ಗೆ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಸೋಮವಾರ ತಹಸೀಲ್ದಾರ್ ಕೆ. ವಿಜಯಕುಮಾರ ಭೇಟಿ ನೀಡಿ ಪರಿಶೀಲಿಸಿದ್ದಾರೆ. "ಕನ್ನಡಪ್ರಭ "ದೊಂದಿಗೆ ಮಾತನಾಡಿದ ತಹಸೀಲ್ದಾರ್ ಕೆ. ವಿಜಯಕುಮಾರ, ಸಾಲಬಾಧೆ, ಮಾನಸಿಕ ಒತ್ತಡದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಮೃತದೇಹ ದೊರೆಯದಿದ್ದ ಪಕ್ಷದಲ್ಲಿ ಮಂಗಳವಾರವೂ ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ ಕಾರ್ಯ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಸಿಲಿನ ಹೊಡೆತಕ್ಕೆ ಸಾವಿರಾರು ಮೀನುಗಳ ಮಾರಣಹೋಮ
ನಿರಾಶ್ರಿತರ ಕಣ್ಣೀರು ಒರೆಸುವ ಕೆಲಸ