ಮನೋಸ್ಥೈರ್ಯದಂತೆ ಭವಿಷ್ಯ ಆಯ್ಕೆ ಮಾಡಿಕೊಳ್ಳಿ

KannadaprabhaNewsNetwork |  
Published : Aug 06, 2024, 12:30 AM IST
 ಫೋಟೋ: 5ಜಿಎಲ್ಡಿ2-  ಗುಳೇದಗುಡ್ಡದ ಭಂಡಾರಿ ಕಾಲೇಜಿನ  ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲಾ  ಅಪರ ಜಿಲ್ಲಾಧಿಕಾರಿ ಸಾವಿತ್ರಿ ಕಡಿ  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.   | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಸಮಯಕ್ಕೆ ಮಹತ್ವದಕೊಟ್ಟು, ಸಮಯವನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ತಮ್ಮ ಭವಿಷ್ಯವನ್ನು ಬೆಳಗಿಸಿಕೊಳ್ಳಬೇಕು. ತಮ್ಮ ಮನೋಸ್ಥೈರ್ಯಕ್ಕೆ ತಕ್ಕುದಾದ ಭವಿಷ್ಯವನ್ನು ಅಯ್ಕೆ ಮಾಡಿಕೊಂಡರೆ ಬದುಕು ಸಾರ್ಥಕವಾಗಲಿದೆ ಎಂದು ಕೊಪ್ಪಳದ ಅಪರ ಜಿಲ್ಲಾಧಿಕಾರಿ ಸಾವಿತ್ರಿ ಕಡಿ ಹೇಳಿದರು.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಸಮಯಕ್ಕೆ ಮಹತ್ವದಕೊಟ್ಟು, ಸಮಯವನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ತಮ್ಮ ಭವಿಷ್ಯವನ್ನು ಬೆಳಗಿಸಿಕೊಳ್ಳಬೇಕು. ತಮ್ಮ ಮನೋಸ್ಥೈರ್ಯಕ್ಕೆ ತಕ್ಕುದಾದ ಭವಿಷ್ಯವನ್ನು ಅಯ್ಕೆ ಮಾಡಿಕೊಂಡರೆ ಬದುಕು ಸಾರ್ಥಕವಾಗಲಿದೆ ಎಂದು ಕೊಪ್ಪಳದ ಅಪರ ಜಿಲ್ಲಾಧಿಕಾರಿ ಸಾವಿತ್ರಿ ಕಡಿ ಹೇಳಿದರು.

ಪಟ್ಟಣದ ಭಂಡಾರಿ ಮತ್ತು ರಾಠಿ ಪದವಿ ಕಾಲೇಜಿನ ಸೋಮವಾರ 2023-24 ನೇ ಸಾಲಿನ ಪಠ್ಯ ಪೂರಕ ಚಟುವಟಿಕೆಗಳ ಸಮಾರೋಪ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮ ಮನೋಸ್ಥೈರ್ಯಕೈ ತಕ್ಕಂತಹ ಭವಿಷ್ಯದ ಅಯ್ಕೆ ಮಾಡಿಕೊಳ್ಳಬೇಕು. ಅನ್ಯರ ಭವಿಷ್ಯ, ಮಾರ್ಗ ನಮಗೆ ಸಾಧುವಲ್ಲ. ನಮ್ಮ ಭವಿಷ್ಯ ನಮ್ಮ ಮನೋಸ್ಥೈರ್ಯವನ್ನು ಆಧರಿಸಿರುತ್ತದೆ. ಅದರ ಆಯ್ಕೆ ಅತ್ಯಂತ ಮಹತ್ವದ್ದಾಗಿದೆ ಎಂದು ಕಿವಿಮಾತು ಹೇಳಿದರು.

ವಿದ್ಯಾರ್ಥಿ ದೆಸೆಯಲ್ಲಿಯೇ ಕಾಲೇಜಿಗೆ ಕೀರ್ತಿ ತರುವ ವಿದ್ಯಾರ್ಥಿಗಳಾದರೆ ಗುರುವೃಂದಕ್ಕೆ ಸಂತೋಷ. ಸ್ವಾಭಿಮಾನ ಬೆಳೆಸಿಕೊಂಡು, ಅವಮಾನವನ್ನು ಸ್ವೀಕರಿಸಿ, ಸನ್ಮಾನವನ್ನು ಆನಂದಿಸುವ ಮನೋಸ್ಥಿತಿ ನಿಮ್ಮದಾಗಲಿ. ಒಟ್ಟಿನಲ್ಲಿ ನಿರಂತರವಾಗಿ ಅಧ್ಯಯನ ಹಾಗೂ ಪಠ್ಯೇತರ ಕಾರ್ಯ ಚಟುವಟಿಕೆಗಳಲ್ಲಿ ಮನಸಾ ಪೂರಕವಾಗಿ ತೊಡಗಿಸಿಕೊಂಡಾಗ ಮಾತ್ರ ಭವಿಷ್ಯವನ್ನು ಉಜ್ವಲ ಮಾಡಿಕೊಳ್ಳಲು ಸಾಧ್ಯವಾಗಲಿದೆ ಎಂದು ಸಲಹೆಗಳನ್ನು ನೀಡಿದರು.

ರಾಮನಗರ ಜಿಲ್ಲೆಯ ಸಂಗೀತ ಶಿಕ್ಷಕಿ, ರಂಗ ದಿಗ್ಗಜ ಪಿ.ಬಿ.ಧುತ್ತರಗಿ ಅವರ ಪುತ್ರಿ ಶ್ರೀದೇವಿ ಕೋಮಾರಿ ಮಾತನಾಡಿದರು.ಅಲ್ಲದೇ, ಇದೇ ವೇಳೇ ತಮ್ಮ ಸಮಧುರ ಕಂಠದಿಂದ ವಚನ ಗಾಯನ ಮತ್ತು ಕೆಲವು ಭಾವಗೀತೆಗಳನ್ನು ಹಾಡಿ ವಿದ್ಯಾರ್ಥಿಗಳಲ್ಲಿ ಸ್ಪೂರ್ಥಿ ತುಂಬಿದರು.

ಗೌರವ ಕಾರ್ಯದರ್ಶಿ ರವೀಂದ್ರ ಪಟ್ಟಣಶಟ್ಟಿ ಮಾತಾನಾಡಿ, ಜಿಲ್ಲೆಯಲ್ಲಿ ಯಾವುದೇ ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆದರೆ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡು ಬಹುಮಾನ ತರುವುದು ಸಂತೋಷ. ವಿಶ್ವವಿದ್ಯಾನಿಲಯದಲ್ಲಿ ಬ್ಲೂ ಆದ ವಿದ್ಯಾರ್ಥಿಗೆ ಪ್ರತಿ ವರ್ಷ ಐದು ಸಾವಿರ ರೂಪಾಯಿ ನಗದು ಬಹುಮಾನ ಕೊಡುವುದಾಗಿ ಘೋಷಿಸಿದರು.

ಪ್ರಾಚಾರ್ಯ ಡಾ.ಎನ್.ವೈ.ಬಡಣ್ಣವರ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಯುನಿಯನ್ ಕಾರ್ಯಾಧ್ಯಕ್ಷ ಡಾ.ಸುರೇಖಾ ಯಂಡಿಗೇರಿ ವಾರ್ಷಿಕ ವರದಿ ಓದಿದರು. ಡಾ.ಚಿದಾನಂದ ನಂದಾರ ಕ್ರೀಡಾ ವರದಿ ವಾಚನ ಮಾಡಿದರು.

ವಿಶ್ವನಾಥ್ ಅಂಗಡಿ. ಸಿದ್ದರಾಮಯ್ಯ ಪುರಾಣಿಕಮಠ, ಪ್ರೊ ಸಿದ್ದಲಿಂಗಪ್ಪ ಬರಗುಂಡಿ, ವಿಠ್ಠಲ ಕಾವಡೆ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಎನ್.ಸಿ.ಸಿ ಕ್ಯಾಪ್ಟನ್ ಅನಿಲ ಕುಮಾರ ಉಣಚಗಿ ಅವರನ್ನು ಸನ್ಮಾನಿಸಲಾಯಿತು. ಕ್ರೀಡಾ ಪಾರಿತೋಷಕ, ನಗದು ಬಹುಮಾನ, ಸ್ಕೌಟ್ಸ್ ಆಂಡ್ ಗೈಡ್ಸ್ ಬಹುಮಾನ ವಿತರಿಸಲಾಯಿತು. ಡಾ.ಎಂ.ಎಸ್.ಪಾಟೀಲ್ ಸ್ವಾಗತಿಸಿದರು. ದಾನಮ್ಮ ಕುಂದರಗಿ ಪ್ರಾರ್ಥಿಸಿದರು. ಡಾ.ಸಣ್ಣವೀರಣ್ಣ ದೊಡ್ಡಮನಿ ನಿರೂಪಿಸಿದರು. ವಿದ್ಯಾ ರಾಠೋಡ ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಸಿಬ್ಬಂದಿ ಹಾಗು ವಿದ್ಯಾರ್ಥಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!