ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬೆನಕಟ್ಟಿಯ ಹೇಮ ವೇಮನ ಸದ್ಬೋಧನ ಪೀಠ ವಿದ್ಯಾಗಿರಿಯ ಹೇಮರಡ್ಡಿ ಮಲ್ಲಮ್ಮ ಸೇವಾ ಸಮಿತಿ ಆಶ್ರಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಮನೆ ಮನದಲ್ಲಿ ವೇಮನರ ತತ್ವ ಚಿಂತನದ 187ನೆಯ ಮಾಸಿಕ ಕಾರ್ಯಕ್ರಮದಲ್ಲಿ ಮಹಾಯೋಗಿ ವೇಮನರ ಪ್ರಣವನರಿಯದನಕ ಭಕ್ತನಾಗಲಾರ ವಚನ ಕುರಿತು ಅವರು ಸದ್ಬೋಧನೆ ನೀಡಿದರು.
ಮನುಷ್ಯ ಭೌತಿಕ ದೇಹ ಬಳಸಿಕೊಳ್ಳುವುದರ ಜತೆಗೆ ಅಂತರಂಗದಲ್ಲಿರುವ ಪ್ರಣವ ಶಕ್ತಿ ತಿಳಿದುಕೊಳ್ಳಬೇಕು. ಅದಕ್ಕಾಗಿ ಮಂತ್ರ ಯೋಗ, ಲಯ ಯೋಗ, ಹಠ ಯೋಗ, ರಾಜಯೋಗ ಹಾಗೂ ಶಿವಯೋಗದ ಮೂಲಕ ತಾನೇ ಶಿವಯೋಗಿ ಆಗುವ ಸಾಧನೆ ಮಾಡಿ ಮಾನವ ಜನ್ಮ ಸಾರ್ಥಕ ಮಾಡಿಕೊಳ್ಳಬೇಕು ಎಂದು ಗುರೂಜಿ ಹೇಳಿದರು.ಮುಖ್ಯ ಅತಿಥಿ ನಿವೃತ್ತ ಶಿಕ್ಷಕ ಡಿ.ಪಿ. ಅಮಲಝರಿ ಮಾತನಾಡಿ, ಮಹಾಯೋಗಿ ವೇಮನರ ತತ್ವ ಆದರ್ಶಗಳನ್ನು ಮನೆ ಮನಗಳಿಗೆ ಮುಟ್ಟಿಸುವ ಕಾರ್ಯ ಮಾಡುತ್ತಿರುವ ಸದ್ಬೋಧನ ಪೀಠಕ್ಕೆ ರಡ್ಡಿ ಸಮಾಜ ಶಕ್ತಿಯಾಗಿ ನಿಲ್ಲಬೇಕಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಹೇಮರಡ್ಡಿ ಮಲ್ಲಮ್ಮ ಸೇವಾ ಸಮಿತಿ ಅಧ್ಯಕ್ಷ ಮಹೇಶ ಕಕರಡ್ಡಿ, ಸಮಾಜದ ಯುವ ಪೀಳಿಗೆ ವೇಮನರ ತತ್ವ ಚಿಂತನೆಗಳನ್ನು ಅರಿತು ಸೇವಾಭಾವನೆ, ಪರೋಪಕಾರದ ಗುಣಗಳನ್ನು ಬೆಳೆಸಿಕೊಂಡು ಸಮಾಜದ ಒಳಿತಿಗೆ ದುಡಿಯಬೇಕು ಎಂದು ಹೇಳಿದರು.
ಬೆನಕಟ್ಟಿಯ ಹೇಮರಡ್ಡಿ ಭಜನಾ ಮಂಡಳಿಯವರು ವೇಮನ ವಚನ ಪಠಿಸಿದರು. ಮಹೇಶ ವಾಸನದ ಸ್ವಾಗತಿಸಿದರು. ಎಚ್.ಜಿ. ಹುದ್ದಾರ ನಿರೂಪಿಸಿದರು.