ಕನ್ನಡಪ್ರಭ ವಾರ್ತೆ ಹಿರಿಯೂರು
ಸಾಹಿತ್ಯಕವಾದ ಕಾರ್ಯಕ್ರಮಗಳು ನಗರ ಕೇಂದ್ರದಿಂದ ಬಿಡುಗಡೆ ಪಡೆದು ಇಂದು ಗ್ರಾಮೀಣ ಪ್ರದೇಶಗಳ ಕಡೆ ಮುಖ ಮಾಡಿವೆ. ನಗರಗಳು ವ್ಯಾಪಾರೀಕರಣದ ಕೇಂದ್ರಗಳಾಗಿವೆ. ಇಂತಹ ಸಮಯದಲ್ಲಿ ಇಂದು ಹಳ್ಳಿಗಳು ನಗರಕ್ಕೆ ನಾಗರಿಕತೆಯ ಪಾಠ ಹೇಳಿಕೊಡುವ ಮಟ್ಟಿಗೆ ಬೆಳೆದಿವೆ.
ವಿಶ್ವದ ಬಹುತೇಕ ಸಾಹಿತಿಗಳು, ತನ್ನ ಊರು ಕೇರಿಯ ಕಥನಗಳನ್ನು ಆಯ್ದು ಕೃತಿಗಳನ್ನು ಬರೆದಿದ್ದಾರೆ. ಕನ್ನಡದ ಕವಿಗಳು ಇದಕ್ಕೆ ಹೊರತಾಗದೆ ನಾಡಿನ ಪ್ರಕೃತಿ, ತಾಯಿ ಮಮತೆ, ಮಾನವೀಯ ಸಂಬಂಧಗಳ ಕುರಿತು ಬರೆದಿದ್ದಾರೆ. ಈ ನಿಟ್ಟಿನಲ್ಲಿ ಸಕ್ಕರ ನಾಗರಾಜ್ ಅವರು ಬುದ್ಧ ಕರುಣೆಯ ಹೊತ್ತು ಕವನ ಸಂಕಲನದಲ್ಲಿ ತಮ್ಮ ಬದುಕಿನ ಚಿಂತನೆ ಅವಲೋಕಿಸಿದ ಘಟನೆಗಳ ಕುರಿತು ಬರೆದಿದ್ದಾರೆ ಎಂದರು.ಬುದ್ಧ ಕರುಣೆಯ ಹೊತ್ತು ಕವನ ಸಂಕಲನ ಕುರಿತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸದಸ್ಯ ಡಾ.ಜೆ.ಕರಿಯಪ್ಪ ಮಾಳಿಗೆ ಮಾತನಾಡಿ, ವೈಯಕ್ತಿಕ ಬದುಕು ಕವಿತೆಯ ಬರವಣಿಗೆಗೆ ಸ್ಫೂರ್ತಿಯಾಗುತ್ತದೆ. ಬುದ್ಧನ ಪ್ರಜ್ಞೆ ಮತ್ತು ಅಂಬೇಡ್ಕರ್ ಅವರ ಜಾಗೃತಿ ನಮ್ಮೊಳಗೆ ಸ್ವಾಭಿಮಾನವನ್ನು ತಂದುಕೊಡುತ್ತವೆ.
ಕರುಣೆಯನ್ನು ತುಂಬಿಕೊಂಡ ಕವನ ಸಂಕಲನದ ಶೀರ್ಷಿಕೆ ಅರ್ಥಪೂರ್ಣವಾಗಿದೆ.
ಪ್ರಾಚಾರ್ಯ ಡಾ.ವಿ.ವೀರಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು, ಈ ಸಂದರ್ಭದಲ್ಲಿ ಧರ್ಮಪುರ ಹೋಬಳಿ ಕಸಾಪ ಘಟಕದ ಅಧ್ಯಕ್ಷ ಎಚ್.ಅಶೋಕ್, ಮಕ್ಕಳ ಸಾಹಿತ್ಯ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಜಿ.ರಂಗಸ್ವಾಮಿ ಸಕ್ಕರ, ತಾಲೂಕು ವೈದ್ಯಾಧಿಕಾರಿ ಡಾ. ಕೆ.ಜಿ.ತಿಮ್ಮರಾಜು, ಕವಿ ಆರ್.ಶಿವಶಂಕರ ಸೀಗೆಹಟ್ಟಿ, ಕೃತಿಯ ಲೇಖಕ ಸಕ್ಕರ ನಾಗರಾಜು, ಪಂಚಲಿಂಗೇಶ್ವರ ಪ್ರೌಢಶಾಲೆ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಜಿ.ಆರ್. ರಘುನಾಥ್, ಮುಖ್ಯ ಶಿಕ್ಷಕ ಜೆ.ಮಂಜುನಾಥ್, ಓ.ರಂಗನಾಥ, ಯುವ ವಕೀಲ ಎಸ್.ಡಿ. ಹನುಮಂತರಾಯ. ಸ್ವಾಭಿಮಾನ ವಿದ್ಯಾ ಸಂಸ್ಥೆಯ ಆಡಳಿತ ಅಧಿಕಾರಿ ರಂಗಸ್ವಾಮಿ,ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಚಮನ್ ಷರೀಫ್, ಎಂ.ರಮೇಶ್, ಪುಟ್ಟರಾಜನಾಯಕ, ಗಡಾರಿ ಕೃಷ್ಣಪ್ಪ ಲಕ್ಷ್ಮಣ್, ಆರ್.ಎ.ಸ್ವಪ್ನ ಮುಂತಾದವರು ಹಾಜರಿದ್ದರು.