ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ತಾಲೂಕಿನ ಕೋಟೆಕೆರೆ ಗ್ರಾಮದ ಜನ್ನೂರು ನಾಯಕ (೬೫) ಮೃತ ರೈತ. ಅರಿಶಿಣ ಬೆಳೆ ಜಮೀನಿಗೆ ತೆರಳಿದ್ದಾಗ ದಾಳಿ ನಡೆಸಿದ ಕಾಡಾನೆ ಒದ್ದು ಎಸೆದು ಹೋಗಿದೆ. ನೆರೆ ಜಮೀನಿನ ರೈತ ಬಂದು ಜನ್ನೂರು ನಾಯಕನ ನೋಡಿದಾಗ ಜೀವವಿತ್ತು. ತಕ್ಷಣವೇ ಖಾಸಗಿ ಆ್ಯಂಬುಲೆನ್ಸ್‌ನಲ್ಲಿ ಮೈಸೂರು ಜೆಎಸ್‌ಎಸ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗ ಮಧ್ಯವೇ ಮೃತಪಟ್ಟರೆಂದು ತಿಳಿದು ಬಂದಿದೆ.
ಕಾಡಾನೆ ದಾಳಿ ಸುದ್ದಿ ತಿಳಿಯುತ್ತಿದ್ದಂತೆಯೇ ಕೋಟೆಕೆರೆ ಸುತ್ತ ಮುತ್ತಲಿನ ರೈತರು ಹಾಗೂ ರೈತಸಂಘಟನೆಗಳ ಕಾರ್ಯಕರ್ತರು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ವಲಯ ಕಚೇರಿಗೆ ಧಾವಿಸಿದರು. ಈ ಸಮಯದಲ್ಲಿ ಬೇಗೂರು ಪೊಲೀಸರು ಓಂಕಾರ ವಲಯ ಅರಣ್ಯ ಕಚೇರಿ ಹೆಬ್ಬಾಗಿಲ ಮುಂದೆ ಸರ್ಪಗಾವಲು ಹಾಕಿ ತಡೆಯೊಡ್ಡಿದರು. ನಂತರ ರೈತಸಂಘಟನೆಗಳ ಮುಖಂಡರು, ಕುರುಬರಹುಂಡಿ, ಹಂಚೀಪುರ, ಕೊತ್ತನಹಳ್ಳಿ ಗ್ರಾಮದ ರೈತರು ಹಾಗೂ ಮೃತನ ಕುಟುಂಬಸ್ಥರು ಜಮಾಯಿಸಿದಾಗ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಯಿತು.ರೈತಸಂಘದ ಮುಖಂಡರು ಕೆಲ ಕಾಲ ಓಂಕಾರ ವಲಯ ಕಚೇರಿ ಆವರಣದೊಳಗೆ ಧರಣಿ ನಡೆಸಿ ಅರಣ್ಯ ಇಲಾಖೆ ಹಾಗೂ ಸ್ಥಳೀಯ ಶಾಸಕ ಮತ್ತು ಅರಣ್ಯ ಸಚಿವರ ವಿರುದ್ಧ ದಿಕ್ಕಾರ ಕೂಗಿದರು. ಇದೇ ವೇಳೆ ಸ್ಥಳಕ್ಕಾಗಮಿಸಿದ ಬಂಡೀಪುರ ಪ್ರಭಾರ ಡಿಸಿಎಫ್ ಶುಭಂಗ ಸಿಂಗ್ ತನ್ವರ್ ಕಂಡು ರೈತರು ಆಕ್ರೋಶ ಹೊರ ಹಾಕಿ ಧಿಕ್ಕಾರ ಮೊಳಗಿಸಿದರು.
ಶಾಸಕ ಎಚ್.ಎಂ. ಗಣೇಶ್ ಪ್ರಸಾದ್ ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರು ಹಾಗೂ ಮೃತ ಕುಟುಂಬಸ್ಥರೊಂದಿಗೆ ಮಾತನಾಡಿದರು. ಈ ಸಮಯದಲ್ಲಿ ಶಾಸಕರು ಹಾಗೂ ಪ್ರತಿಭಟನಕಾರರ ನಡುವೆಯೂ ಮಾತಿನ ಚಕಮಕಿ ನಡೆಯಿತು. ಮೃತನ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ ೨೦ ಲಕ್ಷ ಪರಿಹಾರ ಸಿಗಲಿದೆ. ಮೃತರ ಕುಟುಂಬಕ್ಕೆ ಅರಣ್ಯ ಇಲಾಖೆಯಲ್ಲಿ ಓದಿಗೆ ತಕ್ಕ ಕೆಲಸ ಕೊಡಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು. ರೈತರಿಗೆ ಹಾಗೂ ಬೆಳೆ ನಾಶಕ್ಕೆ ಕಾರಣವಾದ ಕಾಡಾನೆ ಸೆರೆ ಹಿಡಿಯಿರಿ ಹಾಗೂ ಆನೆ ಕಂದಕ ಮುಚ್ಚಿರುವ ಕಡೆ ಕಂದಕ ಮಣ್ಣು ತೆಗೆಸಿ ಎಂದು ಡಿಸಿಎಫ್‌ಗೆ ಸೂಚನೆ ನೀಡಿದರು. ಮೃತನ ಕುಟುಂಬಕ್ಕೆ ₹೨೦ ಲಕ್ಷ ಪರಿಹಾರ ನೀಡಿದ ಅರಣ್ಯ ಇಲಾಖೆ