ಪ್ರಜೆಗಳಿಂದ ಬೈಸಿಕೊಳ್ಳಲು ಮಾಡಿರುವ ಕಾರ್ಯಕ್ರಮ

KannadaprabhaNewsNetwork |  
Published : Sep 13, 2026, 01:30 AM IST
12 ಟಿವಿಕೆ 1 – ತುರುವೇಕೆರೆ ತಾಲೂಕು ದಬ್ಬೇಘಟ್ಟದಲ್ಲಿ ನಡೆದ ಪ್ರಜಾ ಸೇವೆ ಅಭಿಯಾನದಲ್ಲಿ ಸಾರ್ವಜನಿಕರು ಶಾಸಕ ಎಂ.ಟಿ.ಕೃಷ್ಣಪ್ಪನವರ ಬಳಿ ಸಮಸ್ಯೆಯನ್ನು ಹೆಳಿಕೊಳ್ಳುತ್ತಿರುವುದು. | Kannada Prabha

ಸಾರಾಂಶ

ಪ್ರಜಾ ಸೇವೆ ಅಭಿಯಾನ ಅಲ್ಲ. ಪ್ರಜೆಗಳಿಂದ ಬೈಯ್ಯಿಸಿಕೊಳ್ಳಲು ಮಾಡಿರುವ ಕಾರ್ಯಕ್ರಮ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಅಧಿಕಾರಿಗಳ ಮೇಲೆ ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ಪ್ರಜಾ ಸೇವೆ ಅಭಿಯಾನ ಅಲ್ಲ. ಪ್ರಜೆಗಳಿಂದ ಬೈಸಿಕೊಳ್ಳಲು ಮಾಡಿರುವ ಕಾರ್ಯಕ್ರಮ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಅಧಿಕಾರಿಗಳ ಮೇಲೆ ಕಿಡಿಕಾರಿದರು.

ತಾಲೂಕಿನ ದಬ್ಬೇಘಟ್ಟದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ರೈತರ ಅಹವಾಲು ಸ್ವೀಕರಿಸುವ ವೇಳೆ ಸಣ್ಣಪುಟ್ಟ ಕಾರಣಕ್ಕೆ ರೈತರ ಕೆಲಸ ಮಾಡಿಕೊಡದೆ ಇರುವುದರಿಂದ ರೈತರು ನೇರವಾಗಿ ಶಾಸಕರ ಮೇಲೆ ಹರಿಹಾಯ್ದ ವೇಳೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ಕೃಷ್ಣಪ್ಪಸರ್ಕಾರಿ ಕಚೇರಿಗಳಲ್ಲೇ ಜನರ ಸೇವೆ ಸರಿಯಾಗಿ ಮಾಡಿಕೊಟ್ಟರೆ ಈ ಸ್ಥಿತಿ ನಿರ್ಮಾಣವಾಗುತ್ತಿತ್ತೇ ಎಂದು ಶಾಸಕರನ್ನು ಮತ್ತು ತಹಸೀಲ್ದಾರರನ್ನು ಜನರು ಪ್ರಶ್ನಿಸಿದರು.

ಕಂದಾಯ ಇಲಾಖೆಯ ಸರದಿ ಬಂದಂತೆ ದೂರುಗಳ ಸರಮಾಲೆಯನ್ನು ರೈತಾಪಿಗಳು ಬಿಚ್ಚಿಟ್ಟರು. ಕಳೆದ ನಾಲ್ಕು ವರ್ಷಗಳಿಂದ ಖಾತೆ ಬದಲಾವಣೆ ಮಾಡಲು ಅರ್ಜಿ ಸಲ್ಲಿಸಲಾಗಿದೆ. ಇದುವರೆಗೂ ಮಾಡಿಕೊಟ್ಟಿಲ್ಲ. ಈ ಪ್ರಜಾಸೇವೆ ಅಭಿಯಾನದಲ್ಲಿ ನೀವು ಏನು ಸಾಧನೆ ಮಾಡುವಿರಿ ಎಂದು ಕಿಡಿಕಾರಿದರು. ಹಲವಾರು ರೈತರು ತಿದ್ದುಪಡಿ ಮಾಡುವಾಗ ಉದ್ದೇಶಪೂರ್ವಕವಾಗಿ ಬೇರೆಯವರ ಹೆಸರನ್ನು ಅಧಿಕಾರಿಗಳು ಮಾಡಿದ್ದಾರೆ. ಇದರಿಂದ ತಮಗೆ ಸಮಸ್ಯೆ ಆಗಿದೆ. ಸಮಸ್ಯೆ ಬಗೆಹರಿಸಿ ಎಂದು ಸಾಕಷ್ಟು ಬಾರಿ ಮನವಿ ನೀಡಿದರೂ ಸಹ ಪ್ರಯೋಜನವಾಗಿಲ್ಲ ಎಂದು ರೇಗಾಡಿದರು.

ಬೆಸ್ಕಾಂ ನ ಸಮಸ್ಯೆಗಳ ಆಗರ ಸಭೆಯಲ್ಲಿ ಅನಾವರಣಗೊಂಡಿತು. ಈ ಸಂಬಂಧ ಮಾತನಾಡಿದ ಶಾಸಕ ಎಂ.ಟಿ.ಕೃಷ್ಣಪ್ಪ, ರೈತರಿಗೆ ಹೆಂಡತಿ ಮಕ್ಕಳಿಲ್ವಾ?. ನೀವು ಮಾತ್ರ ರಾತ್ರಿ ಹೊತ್ತು ಮನೆಯಲ್ಲಿ ಮಲಗಬೇಕು, ರೈತರು ಮಲಗಬಾರದಾ? ಎಂದು ಬೆಸ್ಕಾಂ ಎಇಇ ರಾಜಶೇಖರ್ ಗೆ ಪ್ರಶ್ನಿಸಿದರು. ಇಂದು ತಪ್ಪಿದರೆ ನಾಳೆ ಸಮಸ್ಯೆ ಬಗೆಹರಿಸುವ ಭರವಸೆಯನ್ನು ಎಇಇ ರಾಜಶೇಖರ್ ಸಭೆಗೆ ತಿಳಿಸಿದರು.

ಈ ವೇಳೆ ದಬ್ಬೇಘಟ್ಟ ಹೋಬಳಿಯ ಕೆಲವು ಸಮಸ್ಯೆಗಳ ಬಗ್ಗೆ ಅವರು ಸಭೆಯಲ್ಲಿ ವಿವರಿಸುತ್ತಿದ್ದ ವೇಳೆ ಶಾಸಕರಿಗೂ ಉಗ್ರೇಗೌಡರಿಗೂ ಕೆಲಕಾಲ ಮಾತಿನ ಚಕಮಕಿ ನಡೆಯಿತು. ವೇದಿಕೆಯಲ್ಲಿ ತಹಸೀಲ್ದಾರ್ ಎನ್.ಎ.ಕುಂಇ ಅಹಮದ್, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ತ್ಯಾಗರಾಜು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎ.ಬಿ.ಜಗದೀಶ್, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಗೋಣಿತುಮಕೂರು ಲಕ್ಷ್ಮೀಕಾಂತ್, ಇಓ ಅನಂತರಾಜ್, ಕೃಷಿ ಇಲಾಖಾ ಸಹಾಯಕ ನಿರ್ದೇಶಕಿ ಪೂಜಾ, ತೋಟಗಾರಿಕಾ ಇಲಾಖಾ ಸಹಾಯಕ ನಿರ್ದೇಶಕ ಸುರೇಶ್, ಮೀನುಗಾರಿಕಾ ಇಲಾಖಾ ಸಹಾಯಕ ನಿರ್ದೇಶಕ ಮೋಹನ್ ಕುಮಾರ್, ದಬ್ಬೇಘಟ್ಟದ ಉಪ ತಹಸೀಲ್ದಾರ್ ಶಿವಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಜಾಪ್ರಭುತ್ವದಲ್ಲಿ ಯುವ ಮತದಾರರ ಪಾತ್ರ ಮಹತ್ವದ್ದು: ಡಾ.ಕುಮಾರ
ಹಿರೇಮಠ ಸಂಸ್ಥಾನ ಆಧ್ಯಾತ್ಮ ಸಂಸ್ಕಾರದ ನೆಲೆಗಟ್ಟು: ಹಾವಗಿ ಲಿಂಗೇಶ್ವರಶ್ರೀ