ಹಣ್ಣೇಮಠಕ್ಕೆ ಬಂತು ಹೆಬ್ಬಾವು

KannadaprabhaNewsNetwork |  
Published : Sep 30, 2024, 01:24 AM IST
ಫೋಟೋ : ೨೯ಕೆಎಂಟಿ_ಎಸ್‌ಇಪಿ_ಕೆಪಿ೧ : ಹಣ್ಣೇಮಠದಲ್ಲಿ ಕಂಡುಬಂದ ಹೆಬ್ಬಾವನ್ನು ಪವನ ನಾಯ್ಕ ಹಿಡಿದರು.  | Kannada Prabha

ಸಾರಾಂಶ

ಸುಮಾರು ೧೨ ಅಡಿ ಉದ್ದ ಇರುವ ಹೆಬ್ಬಾವು ಆಹಾರ ಅರಸುತ್ತ ಜನವಸತಿ ಪ್ರದೇಶಕ್ಕೆ ಬಂದಿರಬಹುದು. ಮುಖ್ಯವಾಗಿ ಜನರಿಗೆ ಹೆಬ್ಬಾವು ಮತ್ತು ವೈಪರ್(ಕೊಳಕು ಮಂಡಲ)ಬಗ್ಗೆ ತಿಳಿವಳಿಕೆ ಇರಬೇಕು.

ಕುಮಟಾ: ತಾಲೂಕಿನ ಹೊಲನಗದ್ದೆ ಪಂಚಾಯಿತಿ ವ್ಯಾಪ್ತಿಯ ಹಣ್ಣೇಮಠದಲ್ಲಿ ಸಂಕನಕೇರಿ ಗೋಪಾಲ ಪಟಗಾರ ಎಂಬವರ ಮನೆಯಲ್ಲಿ ಭಾನುವಾರ ಕಂಡುಬಂದ ಹೆಬ್ಬಾವನ್ನು ಉರಗ ತಜ್ಞ ಪವನ ನಾಯ್ಕ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

ಈ ಬಗ್ಗೆ ವಿವರಿಸಿದ ಪವನ ನಾಯ್ಕ, ಸುಮಾರು ೧೨ ಅಡಿ ಉದ್ದ ಇರುವ ಹೆಬ್ಬಾವು ಆಹಾರ ಅರಸುತ್ತ ಜನವಸತಿ ಪ್ರದೇಶಕ್ಕೆ ಬಂದಿರಬಹುದು. ಮುಖ್ಯವಾಗಿ ಜನರಿಗೆ ಹೆಬ್ಬಾವು ಮತ್ತು ವೈಪರ್(ಕೊಳಕು ಮಂಡಲ)ಬಗ್ಗೆ ತಿಳಿವಳಿಕೆ ಇರಬೇಕು. ಹೆಬ್ಬಾವಿನಂತೆ ಕಾಣುವ ಸುಮಾರು ೬.೫ ಅಡಿ ಉದ್ದ ಇರುವ ವೈಪರ್ ಅತ್ಯಂತ ಅಪಾಯಕಾರಿ ಹಾವು. ಇತ್ತೀಚೆಗೆ ಕೊಳಕು ಮಂಡಲದ ಸಂಖ್ಯೆ ಕಡಿಮೆಯಾಗುತ್ತಿದೆ. ನಾಗರ ಹಾವಿಗೆ ವೈಪರ್‌ಗಳು ತುಂಬಾ ಇಷ್ಟವಾದ ಆಹಾರ. ಇದರ ಮರಿ ಮೊಟ್ಟೆಗಳನ್ನೆಲ್ಲ ತಿಂದು ಹಾಕುತ್ತಿರುವುದರಿಂದ ವೈಪರ್ ಸಂಖ್ಯೆ ಕ್ಷಿಣಿಸುತ್ತಿದೆ. ಆದರೆ ಕರಾವಳಿ ಭಾಗದಲ್ಲಿ ಹೆಬ್ಬಾವಿನಂತೆಯೇ ವೈಪರ್ ಸಂಖ್ಯೆ ಸಾಕಷ್ಟಿದ್ದು, ಇದು ಕಚ್ಚಿದರೆ ದೇಹದ ಮಾಂಸಖಂಡಗಳು ಕೊಳೆಯುತ್ತ ಹೋಗುತ್ತದೆ, ಇದಕ್ಕೆ ಔಷಧಿ ಇಲ್ಲ.

ಯಾವುದೇ ಹಾವು ಅದಕ್ಕೆ ಅಪಾಯ ಉಂಟಾದ ಹೊರತು ಮನುಷ್ಯನ ಮೇಲೆ ದಾಳಿ ಮಾಡುವುದಿಲ್ಲ. ಹಾವುಗಳು ಸಹ ಪರಿಸರದ ಒಂದು ಭಾಗ. ಜನರು ಹಾವುಗಳನ್ನು ಕಂಡ ತಕ್ಷಣ ಕೊಲ್ಲಬಾರದು ಎಂದು ಪವನ ನಾಯ್ಕ ಹೇಳಿದ್ದಾರೆ.ಗಾಂಜಾ ಸೇವನೆ ಮಾಡಿದ ವ್ಯಕ್ತಿ ಬಂಧನ

ಭಟ್ಕಳ: ಮುರುಡೇಶ್ವರ ಸಮುದ್ರತೀರದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಕಾರವಾರ ಸದಾಶಿವಗಡ ನಿವಾಸಿ ದಾವೂದ ನಜೀರ ಶೇಖ(34) ಬಂಧಿತ ಆರೋಪಿ. ಮುರುಡೇಶ್ವರದ ಎಡಬದಿ ಕಡಲತೀರದ ಬಳಿ ಸಂಶಯಾಸ್ಪದವಾಗಿ ಕುಳಿತ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಗಾಂಜಾ ಸೇವನೆ ಮಾಡಿದ‌ ಬಗ್ಗೆ ವೈದ್ಯರು ಖಾತ್ರಿಪಡಿಸಿದ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ. ಈ ಕುರಿತು ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV