- ಚನ್ನಗಿರಿ ಬಸವ ಬಳಗದಿಂದ ಬಸವಣ್ಣ ಜಯಂತ್ಯುತ್ಸವದಲ್ಲಿ ಸಿರಿಗೆರೆ ತರಳಬಾಳು ಜಗದ್ಗುರು ಹೇಳಿಕೆ - - - ಕನ್ನಡಪ್ರಭ ವಾರ್ತೆ, ಚನ್ನಗಿರಿ
ಪಟ್ಟಣದ ಹೊರವಲಯದ ಶ್ರೀ ಚನ್ನಮ್ಮಾಜಿ ಸಮುದಾಯ ಭವನದಲ್ಲಿ ಶನಿವಾರ ತಾಲೂಕು ಬಸವ ಬಳಗ ವತಿಯಿಂದ ಹಮ್ಮಿಕೊಂಡಿದ್ದ 891ನೇ ವಿಶ್ವಗುರು ಬಸವಣ್ಣನವರ ಜಯಂತ್ಯುತ್ಸವ ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಿ ಅವರು ಮಾತನಾಡಿದರು. ಮುಂದಿನ ಕೆಲ ದಿನಗಳಲ್ಲಿ ಉಬ್ರಾಣಿ ಏತ ನೀರಾವರಿ ಯೋಜನೆಯ ಎಲ್ಲಾ ಕೆರೆಗಳ ಅಚ್ಚುಕಟ್ಟು ಪ್ರದೇಶ ಗ್ರಾಮಗಳ ರೈತರ ಸಭೆ ಕರೆದು, ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲಾಗುವುದು ಎಂದರು.
ಸಹಕಾರ-ಸಹಬಾಳ್ವೆ ಇರಲಿ:ಉಬ್ರಾಣಿ- ಅಮೃತಾಪುರ ಏತನೀರಾವರಿ ಯೋಜನೆ ಜಾರಿಗೊಂಡ ನಂತರ ಈ ಭಾಗದ ರೈತರು ನೆಮ್ಮದಿ ಜೀವನ ನಡೆಸುತ್ತಿದ್ದಾರೆ. ಈ ಯೋಜನೆ ಪ್ರಾರಂಭದಲ್ಲಿಯೇ ರೈತರಿಗೆ ತಿಳಿಸಿದಂತೆ ಕೆರೆಯ ಅರ್ಧ ಭಾಗವನ್ನು ತುಂಬಿಸುವ ಕೆಲಸ ಮಾಡಲಾಗುತ್ತಿದೆ. ಆದರೆ, ಕೆಲ ಗ್ರಾಮಗಳಲ್ಲಿ ನಮ್ಮೂರ ಕೆರೆ ತುಂಬ ಬೇಕು ಎಂಬ ಸ್ವಾರ್ಥದಿಂದ ಕೆರೆ ತುಂಬುವವರೆಗೂ ಮುಂದಿನ ಕೆರೆಗಳಿಗೆ ನೀರು ಬಿಡುತ್ತಿಲ್ಲ. ಇದು ಆಗಬಾರದು. ಪರಸ್ಪರ ಸಹಕಾರ ಸಹಬಾಳ್ವೆಯಿಂದ ರೈತರು ಜೀವನ ನಡೆಸಬೇಕು ಎಂದರು.
ಜೀವನದ ಪ್ರತಿಯೊಂದು ಸಮಸ್ಯೆಗಳು, ಸವಾಲುಗಳಿಗೆ ಬಸವಣ್ಣನವರ ವಚನಗಳಲ್ಲಿ ಉತ್ತರ ಅಡಗಿದೆ. ನಮ್ಮ ಮಠದ ಸಂಕಲ್ಪದಂತೆ ಪ್ರತಿಯೊಬ್ಬರಿಗೂ ವಚನಗಳ ಸಾರ ತಿಳಿಸುವ ಉದ್ದೇಶದಿಂದ "ವಚನ ತರಳಬಾಳು " ಎಂಬ ವೆಬ್ ಸೈಟ್‌ನಲ್ಲಿ 12ನೇ ಶತಮಾನದ ಎಲ್ಲ ಶಿವಶರಣರ ಸುಮಾರು 22 ಸಾವಿರಕ್ಕೂ ಹೆಚ್ಚಿನ ವಚನಗಳು ಸಿಗುವಂತೆ ಮಾಡಲಾಗಿದೆ ಎಂದರು.
ನಾನು ರಾಜಕಾರಣಕ್ಕೆ ಅನಿರೀಕ್ಷಿತವಾಗಿ ಬಂದವನಾಗಿದ್ದು, ಸಾಮಾನ್ಯ ಕುಟುಂಬದಿಂದ ಬಂದವನನ್ನು ಗುರುತಿಸಿ ಇಂದು ಶಾಸಕನನ್ನಾಗಿ ಮಾಡಿದ್ದೀರಿ. ಇದರಲ್ಲಿ ತರಳಬಾಳು ಗುರುಗಳ ಆಶೀರ್ವಾದವಿದ್ದು, ಸಿರಿಗೆರೆಯ ತರಳಬಾಳು ಬೃಹ್ಮಮಠಕ್ಕೆ ಸದಾ ಚಿರಋಣಿ. ಶ್ರೀಗಳ ನೇತೃತ್ವದಲ್ಲಿ ಉಬ್ರಾಣಿ ಏತ ನೀರಾವರಿ ಯೋಜನೆ ಯಶಸ್ವಿಯಾಗಿದೆ. ಸಾಸಿವೆಹಳ್ಳಿ ಏತನೀರಾವರಿ ಯೋಜನೆಗೆ ಇದ್ದ ಎಲ್ಲ ಅಡೆ-ತಡೆಗಳನ್ನು ಬಗೆಹರಿಸಿದ್ದು, ಈ ಮಳೆಗಾಲ ಮುಗಿಯುವ ಒಳಗಾಗಿ ಸಾಸಿವೆಹಳ್ಳಿ ಏತನೀರಾವರಿ ಯೋಜನೆ ಎಲ್ಲ ಕೆರೆಗಳಿಗೆ ನೀರು ಹರಿಸುತ್ತೇನೆ ಎಂದರು.
"ಇಂದಿಗೆ ಸಲ್ಲುವ ಬಸವಣ್ಣ " ಎಂಬ ವಿಷಯದ ಬಗ್ಗೆ ನಿವೃತ್ತ ಪ್ರಾಂಶುಪಾಲ ರಾ. ವೆಂಕಟೇಶ ಶೆಟ್ಟಿ ಉಪನ್ಯಾಸ ನೀಡಿದರು. ಅಧ್ಯಕ್ಷತೆಯನ್ನು ಬಳಗದ ಉಪಾಧ್ಯಕ್ಷ ಎಚ್.ಎಸ್.ಮಲ್ಲಿಕಾರ್ಜುನಪ್ಪ ವಹಿಸಿದ್ದರು.
- - -
- ಬಸವರಾಜ ವಿ. ಶಿವಗಂಗಾ, ಶಾಸಕ, ಚನ್ನಗಿರಿ ಕ್ಷೇತ್ರ
ಸಮಾರಂಭದ ಉದ್ಘಾಟನೆಯನ್ನು ಸಿರಿಗೆರೆ ತರಳಬಾಳು ಬೃಹನ್ಮಠ ಜಗದ್ಗುರು ಶ್ರೀ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನೆರವೇರಿಸಿದರು.