ರದ್ಧಾದ ಬಿಪಿಎಲ್‌ ಕಾರ್ಡಿಗೆ ದಿನಕ್ಕೊಂದು ರಾದ್ಧಾಂತ

KannadaprabhaNewsNetwork | Published : Nov 20, 2024 12:31 AM

ಸಾರಾಂಶ

ಕೊರಟಗೆರೆ ತಾಲೂಕಿನಲ್ಲಿ ೬೦೦ಕ್ಕೂ ಹೆಚ್ಚು ಕಾರ್ಡ್‌ಗಳು ಬಿಪಿಎಲ್ ಇಂದ ಎಪಿಎಲ್‌ಗೆ ವರ್ಗಾವಣೆಯಾಗಿದ್ದು ಸರ್ಕಾರದ ಈ ನಿರ್ಧಾರದಿಂದಾಗಿ ಅರ್ಹರ ಬಡ ಕುಟುಂಬಗಳು ಸಹ ಅಕ್ಕಿ ಇಲ್ಲದೆ ಕಂಗಾಲಾಗಿವೆ.

ಕನ್ನಡಪ್ರಭ ವಾರ್ತೆ ಕೊರಟಗೆರೆ

ತಾಲೂಕಿನಲ್ಲಿ ೬೦೦ಕ್ಕೂ ಹೆಚ್ಚು ಕಾರ್ಡ್‌ಗಳು ಬಿಪಿಎಲ್ ಇಂದ ಎಪಿಎಲ್‌ಗೆ ವರ್ಗಾವಣೆಯಾಗಿದ್ದು ಸರ್ಕಾರದ ಈ ನಿರ್ಧಾರದಿಂದಾಗಿ ಅರ್ಹರ ಬಡ ಕುಟುಂಬಗಳು ಸಹ ಅಕ್ಕಿ ಇಲ್ಲದೆ ಕಂಗಾಲಾಗಿವೆ. ರಾಜ್ಯ ಸರ್ಕಾರಗಳು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಆಹಾರ ಒದಗಿಸಲು ಬಿಪಿಎಲ್ ಕಾರ್ಡ್ ನೀಡಲಾಗಿದೆ. ಪ್ರತಿ ತಿಂಗಳು ನೀಡುವ ಆಹಾರ ಧಾನ್ಯದಿಂದ ಎಷ್ಟೋ ಕುಟುಂಬಗಳು ಜೀವನ ನಡೆಸುತ್ತಿವೆ. ರಾಜ್ಯ ಸರ್ಕಾರ ರಾಜ್ಯದಲ್ಲಿ ನಕಲಿ ಕಾರ್ಡ್‌ಗಳು ಸೃಷ್ಠಿಯಾಗಿದೆ ಎಂದು ಸರ್ವೆ ಮಾಡಿಸಿ ನಕಲಿ ಕಾರ್ಡ್‌ಗಳನ್ನ ಕಡಿವಾಣ ಹಾಕುವ ಭರದಲ್ಲಿ ನಿಜವಾದ ಫಲಾನುವಿಗಳ ಆಹಾರ ಧಾನ್ಯಕ್ಕೆ ಕತ್ತರಿ ಹಾಕಿರುವುದು ದುರದೃಷ್ಟಕರ.

ಕೇಂದ್ರ ಸರ್ಕಾರ ೫ ಕೆ.ಜಿ. ಅಕ್ಕಿ ನೀಡದರೆ, ರಾಜ್ಯ ಸರ್ಕಾರ ೫ ಕೆಜಿ ಅಕ್ಕಿ ಬದಲಿಗೆ ಒಬ್ಬ ವ್ಯಕ್ತಿಗೆ ೧೭೦ ರೂ ನಂತೆ ಒಂದು ಕುಟುಂಬದ ನಾಲ್ಕು ಜನ ಸದಸ್ಯರಿಗೆ ೬೮೦ ಹಣ ಕುಟುಂಬದ ಸದಸ್ಯರ ಖಾತೆಗೆ ಹಾಕಲಾಗುತ್ತಿದೆ. ಒಂದು ಕುಟುಂಬದ ನಾಲ್ಕು ಜನರ ಒಂದು ತಿಂಗಳಿಗೆ ೬೮೦ ಆದರೆ ವರ್ಷಕ್ಕೆ ೮,೧೬೦ ಆ ಬಡ ಕುಟುಂಬದ ಖಾತೆಗೆ ಹೋಗುತ್ತದೆ. ವಿವಿಧ ಕಾರಣ ನೀಡಿ ಬಿಪಿಎಲ್ ಕಾರ್ಡ್ ರದ್ದು ಮಾಡಿರುವುದೇ ಈ ರಾದ್ಧಾಂತಕ್ಕೆ ಕಾರಣವಾಗಿದೆ. ಗ್ರಾಮಗಳಲ್ಲಿ ಅಡಿಕೆ, ಹತ್ತಾರು ಎಕರೆ ಹೊಲ ಗದ್ದೆ ಸೇರಿದಂತೆ ಐಷಾರಾಮಿ ಬಂಗಲೆ ಕಟ್ಟಿಕೊಂಡು ಆದಾಯ ತೆರಿಗೆ ಕಟ್ಟುತ್ತಿರುವ ಅನೇಕ ಕುಟುಂಬದವರ ಮನೆಯಲ್ಲಿ ಬಿಪಿಎಲ್ ಕಾರ್ಡ್ ಇದೆ ಎಂಬ ಕಾರಣಕ್ಕೆ ಅವರ ಕಾರ್ಡುಗಳನ್ನು ರದ್ದು ಮಾಡಲು ಹೋಗಿ ಅರ್ಹರ ಕಾರ್ಡುಗಳ ರದ್ಧಾಗಿರುವುದು ತಾಲೂಕಿನ ಬಡ ಜನರ ಕೆಂಗಣ್ಣಿಗೆ ಗುರಿಯಾಗಿದೆ.

ತಾಲೂಕಿನಲ್ಲಿ ಜೀವನ ನಡೆಸಲು ಸೆಕ್ಯೂರಿಟಿ, ಗಾಮೆಂಟ್ಸ್, ಪ್ರೈವೇಟ್ ಫ್ಯಾಕ್ಟರಿ, ಬಡಿಗೆ ಕೆಲಸ, ಗಾರೆ ಕೆಲಸ ಮಾಡುವವರು, ತಿಂಗಳಿಗೆ ೧೦ ರಿಂದ ೧೫ ಸಾವಿರ ದುಡಿಯುತ್ತಿರುವ ಮೂರು ಜನ ಸದಸ್ಯರು ಬಿಪಿಎಲ್ ಕಾರ್ಡಿನಲ್ಲಿ ಇದ್ದರೆ ಇವರೆಲ್ಲರೂ ಟ್ಯಾಕ್ಸ್ ಪೇಯರನ್ನು ನಿರ್ಧಾರ ಮಾಡಲಾಗಿ, ಇವರ ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್ ಆಗಿ ಪರಿವರ್ತನೆ ಮಾಡಲಾಗಿದೆ. ಇತ್ತ ಹೊಟ್ಟೆಗೂ ಇಲ್ಲ ಬಟ್ಟೆಗೂ ಇಲ್ಲ ಎನ್ನವ ಪರಿಸ್ಥಿತಿಗೆ ಬಂದು ನಿಂತಿದ್ದಾರೆ.

Share this article