ದಾಬಸ್‍ಪೇಟೆ: ಸೋಲೂರು ಹೋಬಳಿಯ ಸಮಗ್ರ ಅಭಿವೃದ್ಧಿ ನನ್ನ ಗುರಿ, ಪ್ರತಿ ಗ್ರಾಮಗಳ ಮೂಲ ಸೌಲಭ್ಯಗಳಿಗೆ ಒತ್ತು ನೀಡಿದ್ದೇನೆ, ಆಲೂರು ಕಾಲೋನಿಯ ಜನರ 70 ವರ್ಷದ ಬೇಡಿಕೆಯಾದ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ ಎಂದು ಶಾಸಕ ಎನ್.ಶ್ರೀನಿವಾಸ್ ಹೇಳಿದರು.
ಗ್ರಾಮ ಮುಖಂಡ ನಾಗರಾಜು ಮಾತನಾಡಿ, 70 ವರ್ಷದಿಂದ ಶಾಲಾ ಮಕ್ಕಳು, ಗ್ರಾಮಸ್ಥರು, ವಯೋವೃದ್ದರು, ಇಡೀ ಹರಿಜನ ಕಾಲೋನಿ ಜನಕ್ಕೆ ಸೂಕ್ತ ರಸ್ತೆ ಇರಲಿಲ್ಲ, ಮುಖಂಡರಾದ ಗ್ರಾಪಂ ಮಾಜಿ ಅಧ್ಯಕ್ಷ ಗಂಗರಂಗಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರುದ್ರ ಶರ್ಮಾ, ಜಿಪಂ ಮಾಜಿ ಸದಸ್ಯ ರಂಗಸ್ವಾಮಿ, ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ಕೆಡಿಪಿ ಸದಸ್ಯ ಕೃಷ್ಣಪ್ಪ, ತೋಪೇಗೌಡ್ರು ಸಹಕಾರದಿಂದ ಶಾಸಕ ಎನ್.ಶ್ರೀನಿವಾಸ್ ನಮ್ಮ ಬಹುದಿನದ ಬೇಡಿಕೆ ರಸ್ತೆ ಮುಖಾಂತರ ಈಡೇರಿಸಿದ್ದಾರೆ. ರಸ್ತೆಯ ಮೇಲೆ ಸುಮಾರು 50ಕ್ಕೂ ಅಧಿಕ ಮಹಿಳೆಯರು ರಂಗೋಲಿ ಬಿಡಿಸಿರುವುದು ಸಂತಸವಾಗಿದೆ ಎಂದರು.
ಪಂಚ ಗ್ಯಾರಂಟಿಗಳ ರಂಗೋಲಿ: ರಂಗೋಲಿ ಸ್ಪರ್ಧೆಯಲ್ಲಿ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳ ಪ್ರಸ್ತುತ ಪಡಿಸುವ ರಂಗೋಲಿ, ನೆಲಮಂಗಲ ಶಾಸಕ ಮುಂದಿನ ಸಚಿವ ಎನ್ನುವ ರಂಗೋಲಿಗಳು ಹಲವರ ಮೆಚ್ಚುಗೆ ಪಾತ್ರವಾಯಿತು.ಈ ಸಂದರ್ಭದಲ್ಲಿ ಗ್ಯಾರಂಟಿ ಸಮಿತಿಯ ತಾಲೂಕು ಅಧ್ಯಕ್ಷೆ ನಾಗರತ್ನಮ್ಮ, ಗ್ರಾಪಂ ಮಾಜಿ ಸದಸ್ಯೆ ಜಯಮ್ಮ ಕರಿಯಪ್ಪ, ಆಲೂರು ಅರುಣ್ ಕುಮಾರ್, ನಾಗರಾಜು, ಗ್ರಾಮದವರಾದ ನಾಗರಾಜು, ಚಿದಾನಂದ, ನರಸಿಂಹಮೂರ್ತಿ, ಪೂಜಹನುಮಂತಯ್ಯ, ಸೂರ್ಯಕುಮಾರ್, ರವಿಕುಮಾರ್, ಚೌಡಯ್ಯ, ಆಂಜಿನಪ್ಪ, ಹಲವಾರು ಮಹಿಳೆಯರು ಗ್ರಾಮಸ್ಥರು ಹಾಜರಿದ್ದರು.