ರಾಮನಗರ: ಜನಪರ ಆಡಳಿತದ ಜೊತೆಗೆ ಹಲವು ಪ್ರಥಮಗಳಿಗೆ ಸಾಕ್ಷಿಯಾಗಿರುವ ರಾಮನಗರ ನಗರಸಭೆ ವತಿಯಿಂದ ಇದೀಗ ರೇಷ್ಮೆನಾಡ ಕನ್ನಡ ಹಬ್ಬ ಹೆಸರಿನಲ್ಲಿ ಕನ್ನಡದ ಕಂಪನ್ನು ಹರಡಲು ಸಕಲ ಸಿದ್ಧತೆಗಳು ಭರದಿಂದ ಸಾಗಿದ್ದು, ಜಿಲ್ಲಾ ಕೇಂದ್ರ ರಾಮನಗರ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.
ದಸರಾ ಮಾದರಿಯಲ್ಲಿ ರಾಜ್ಯೋತ್ಸವ:
ರೇಷ್ಮೆ ನಾಡ ಕನ್ನಡ ಹಬ್ಬ ಹೆಸರಿನಲ್ಲಿ ಆಚರಿಸುತ್ತಿರುವ ಕನ್ನಡ ರಾಜ್ಯೋತ್ಸವವನ್ನು ಮೈಸೂರು ದಸರಾ ಮಾದರಿಯಲ್ಲಿಯೇ ಮೆರವಣಿಗೆ, ಸ್ತಬ್ಧ ಚಿತ್ರ ಪ್ರದರ್ಶನ, ಮ್ಯೂಸಿಕಲ್ ನೈಟ್, ಪೌರ ಸನ್ಮಾನ ಸೇರಿದಂತೆ ಹಲವು ಕಾರ್ಯಕ್ರಮ ಜರುಗಲಿವೆ.ಮೆರವಣಿಗೆಗೆ ಸ್ತಬ್ಧ ಚಿತ್ರಗಳ ಮೆರಗು:
ಪೌರ ಸನ್ಮಾನಕ್ಕೆ ಪಾತ್ರರಾಗಿರುವ ಹಿರಿಯ ರಾಜಕಾರಣಿ, ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಅವರನ್ನು ಮೆರವಣಿಗೆಯಲ್ಲಿ ಕರೆತರಲಾಗುತ್ತದೆ. ರಾಜ್ಯೋತ್ಸವದ ಮೆರವಣಿಗೆಯಲ್ಲಿ ಜಾನಪದ ಕಲೆಗಳು ಪ್ರದರ್ಶನಗೊಳ್ಳಲಿವೆ. ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ ಹಾಗೂ ಕರಾವಳಿ ಸೇರಿದಂತೆ ವಿವಿಧ ಬಗೆಯ ಜಾನಪದ ಕಲಾ ತಂಡಗಳು ರಂಗು ತುಂಬಲಿದೆ.
ನಗರಸಭೆಯ ವಿವಿಧ ವಿಭಾಗಗಳ ಕಾರ್ಯವೈಖರಿ, ಅವುಗಳ ಮಹತ್ವ, ಉತ್ತಮ ಆಡಳಿತದ ದಿಸೆಯಲ್ಲಿ ಇ-ಸ್ವತ್ತು, ಇ-ಖಾತೆ ಅಭಿಯಾನದ ಸಾಧನೆ, ನಾಗರಿಕರ ಪಾಲ್ಗೊಳ್ಳುವಿಕೆ, ಸ್ವಚ್ಛ ನಗರಕ್ಕಾಗಿ ಕೈಗೊಂಡ ಕ್ರಮಗಳು, ಸ್ವಚ್ಛತೆಯ ರಿಯಲ್ ಹೀರೊಗಳಾದ ಪೌರ ಕಾರ್ಮಿಕರು, ಕೆಯುಡಬ್ಲ್ಯುಡಿಎಸ್‌ಬಿಯಿಂದ ನಗರಕ್ಕೆ 24X7 ನೀರು ಪೂರೈಕೆಯಿಂದಾದ ಬದಲಾವಣೆ, ರಾಮನಗರದ ಹಿರಿಮೆಯಾದ ರಾಮದೇವರ ಬೆಟ್ಟದ ಪ್ರತಿಕೃತಿ ಸೇರಿದಂತೆ ಮತ್ತಷ್ಟು ವಿಶೇಷಗಳು ಸ್ತಬ್ದಚಿತ್ರಗಳ ಆಕರ್ಷಣೆಯಾಗಿರಲಿದೆ.
ಸಂಜೆ 6 ಗಂಟೆಗೆ ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ತಂಡ ಸಂಗೀತ ಸಂಜೆ ನಡೆಯಲಿದೆ. ಖ್ಯಾತ ಗಾಯಕರಾದ ಕುನಾಲ್ ಗಾಂಜಾವಾಲ ರಾಜೇಶ್ ಕೃಷ್ಣನ್, ಮಂಗ್ಲಿ, ಅನುರಾಧ ಭಟ್ ಸೇರಿದಂತೆ ಹಲ ಗಾಯಕರು ಸಂಗೀತದ ರಸದೌತಣ ಬಡಿಸಲಿದ್ದಾರೆ. ಆವರಣದಲ್ಲಿಯೇ ಕನ್ನಡ ಪುಸ್ತಕ ಮಾರಾಟ ಮಳಿಗೆ ತೆರೆಯಲಾಗುತ್ತಿದೆ. ಈಗಾಗಲೇ ಹತ್ತಾರು ಮಳಿಗೆಗಳು ತಲೆ ಎತ್ತಿದ್ದು, ಓದುಗರಿಗೆ ಅಗತ್ಯ ಕನ್ನಡ ಪುಸ್ತಕಗಳು ಲಭ್ಯವಾಗಲಿವೆ.
ಡಿಕೆಶಿಯಿಂದ ರೇಷ್ಮೆನಾಡ ಕನ್ನಡ ಹಬ್ಬ ಉದ್ಘಾಟನೆ
ವಿವಿಧ ಕ್ಷೇತ್ರಗಳಿಗೆ ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯ ಅವರು ''''''''ಕೆಂಗಲ್ ಹನುಮಂತಯ್ಯ ಪ್ರಶಸ್ತಿ'''''''' ಪ್ರದಾನ ಮಾಡುವರು. ಮಾಜಿ ಶಾಸಕರೂ ಆಗಿರುವ ಹಿರಿಯ ರಾಜಕಾರಣಿ ಸಿ.ಎಂ.ಲಿಂಗಪ್ಪ ಅವರಿಗೆ ''''''''ಪೌರ ಸನ್ಮಾನ'''''''' ನಡೆಯಲಿ. ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ನಗರದ ಮಿನಿ ವಿಧಾನಸೌಧದಿಂದ ಮಧ್ಯಾಹ್ನ 3 ಗಂಟೆಗೆ ಮೆರವಣಿಗೆ ಶುರುವಾಗಲಿದೆ.
ಕೆಂಗಲ್ ಹನುಮಂತಯ್ಯ ಪ್ರಶಸ್ತಿ ಪುರಸ್ಕೃತರು
ರಾಮನಗರ ನಗರಸಭೆ ಕೊಡ ಮಾಡುವ ಕೆಂಗಲ್ ಹನುಮಂತಯ್ಯ ಪ್ರಶಸ್ತಿಗೆ 17 ಮಂದಿ ಭಾಜನರಾಗಿದ್ದಾರೆ. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ರೇಷ್ಮೆನಾಡ ಕನ್ನಡ ಹಬ್ಬದಲ್ಲಿ ಗಣ್ಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಾಲು ಮರದ ನಿಂಗಣ್ಣ (ಪರಿಸರ ಸೇವೆ), ಸೈಯದ್ ಜಿಯಾವುಲ್ಲಾ ( ಆಡಳಿತ ಮತ್ತು ಸಮಾಜ ಸೇವೆ), ವಿ.ಆಶಾ (ಸಮಾಜ ಸೇವೆ), ಕೃಷ್ಣರಾಜು (ರಂಗುಭೂಮಿ), ಲಕ್ಷ್ಮಣ್ (ಸಮಾಜ ಸೇವೆ), ಪಿ.ನಾಗರಾಜು (ಹೈನುಗಾರಿಕೆ), ಶ್ರೀನಿವಾಸ (ಕಲಾ ಸೇವೆ), ಡಾ.ಶೇಖರ್ ಸುಬ್ಬಯ್ಯ (ವೈದ್ಯಕೀಯ), ವಿಷಕಂಠ (ಕ್ರೀಡೆ), ಎಚ್.ಶ್ರೀನಿವಾಸ್ (ಸಂಶೋಧನೆ), ಅಂಕನಹಳ್ಳಿ ಶಿವಣ್ಣ (ಕಲಾ ಸೇವೆ), ಚನ್ನಕೇಶವ (ಸಮಾಜ ಸೇವೆ), ಕವಿತಾ ರಾವ್ (ಸಾಂಸ್ಕೃತಿಕ ಸೇವೆ), ಡಾ.ಬೈರಮಂಗಲ ರಾಮೇಗೌಡ (ಸಾಹಿತ್ಯ), ಆಸೀಫ್ ಷರೀಫ್ (ಶಿಕ್ಷಣ ಸೇವೆ), ಎಂ.ಜಿ.ಶಿವಲಿಂಗಯ್ಯ (ಉತ್ತಮ ಆಡಳಿತ), ಡಾ.ಎಂ.ಬೈರೇಗೌಡ (ಜಾನಪದ).ಕೋಟ್ .............
ರಾಮನಗರ ನಗರಸಭೆ ವತಿಯಿಂದ ರೇಷ್ಮೆನಾಡ ಕನ್ನಡ ಹಬ್ಬ ಹೆಸರಿನಲ್ಲಿ ಕನ್ನಡ ರಾಜ್ಯೋತ್ಸವ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಅವರಿಗೆ ಪೌರಸನ್ಮಾನ, ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 17 ಮಂದಿಗೆ ಕೆಂಗಲ್ ಹನುಮಂತಯ್ಯ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ತಂಡ ಸಂಗೀತ ಸಂಜೆ ನಡೆಸಿಕೊಡಲಿದ್ದಾರೆ. ಕನ್ನಡ ಹಬ್ಬದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು.- ಕೆ.ಶೇಷಾದ್ರಿ, ಅಧ್ಯಕ್ಷರು, ನಗರಸಭೆ, ರಾಮನಗರ
21ಕೆಆರ್ ಎಂಎನ್ 1,2,3.ಜೆಪಿಜಿ1,2.ನಗರಸಭೆ ಸಿದ್ಧಪಡಿಸಿರುವ ಸ್ತಬ್ಧಚಿತ್ರ
3.ನಗರದಲ್ಲಿ ಕನ್ನಡ ಬಾವುಟಗಳು ರಾರಾಜಿಸುತ್ತಿರುವುದು.4.ಕೆ.ಶೇಷಾದ್ರಿ, ಅಧ್ಯಕ್ಷರು, ನಗರಸಭೆ, ರಾಮನಗರ.