ಪರಸ್ಪರ ಗೌರವದಿಂದ ಸುಗಮ ಜೀವನ: ಡಾ.ಎಂ.ಎನ್. ರಾಜೇಂದ್ರ ಕುಮಾರ್

KannadaprabhaNewsNetwork |  
Published : Oct 01, 2025, 01:01 AM IST
ತುಂಬೆ: ಶ್ರೀ ಶಾರದಾ ಸಮುದಾಯ ಭವನ ಲೋಕಾರ್ಪಣಾ ಕಾರ್ಯಕ್ರಮ.ಶಾಂತಿ ಪ್ರಿಯ ನಾಡಿನಲ್ಲಿ ಎಲ್ಲರನ್ನು ಗೌರವಿಸುವ ಗುಣ ನಮ್ಮದಾಗಲಿ: ಡಾ ಎಂ ಎನ್ ರಾಜೇಂದ್ರ ಕುಮಾರ್ | Kannada Prabha

ಸಾರಾಂಶ

ರಾಮಲ್ ಕಟ್ಟೆ ಶ್ರೀ ಶಾರದಾ ಸೇವಾ ಪ್ರತಿಷ್ಠಾನದ ಶ್ರೀ ಶಾರದಾ ರಜತ ಮಹೋತ್ಸವ ಸಮಿತಿ ವತಿಯಿಂದ ರಾಮಲ್ ಕಟ್ಟೆಯಲ್ಲಿ ಸುಮಾರು 1.5 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಂಡ ಶ್ರೀ ಶಾರದಾ ಸಮುದಾಯ ಭವನವನ್ನು ಭಾನುವಾರ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಲೋಕಾರ್ಪಣೆಗೊಳಿಸಿದರು.

ಬಂಟ್ವಾಳ: ತುಂಬೆ ರಾಮಲ್ ಕಟ್ಟೆ ಶ್ರೀ ಶಾರದಾ ಸೇವಾ ಪ್ರತಿಷ್ಠಾನದ ಶ್ರೀ ಶಾರದಾ ರಜತ ಮಹೋತ್ಸವ ಸಮಿತಿ ವತಿಯಿಂದ ರಾಮಲ್ ಕಟ್ಟೆಯಲ್ಲಿ ಸುಮಾರು 1.5 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಂಡ ಶ್ರೀ ಶಾರದಾ ಸಮುದಾಯ ಭವನವನ್ನು ಭಾನುವಾರ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಲೋಕಾರ್ಪಣೆಗೊಳಿಸಿದರು.

ಬಳಿಕ ಮಾತನಾಡಿದ ಅವರು, ಶಾಂತಿ ಪ್ರಿಯರಾದ ನಾವು ಎಲ್ಲರನ್ನು ಪ್ರೀತಿಸಿ, ಗೌರವಿಸಿ, ಸಮಾಜವನ್ನು ಬೆಳೆಸಿದರೆ ಯಾವುದೇ ಗೊಂದಲವಿಲ್ಲದೆ ಜೀವನ ಸಾಗಿಸಬಹುದು ಎಂದು ಹೇಳಿ 6 ಲಕ್ಷ ರು. ದೇಣಿಗೆಯನ್ನು ಘೋಷಿಸಿದರು. ಈ ಸಂದರ್ಭ ಅವರನ್ನು ಸನ್ಮಾನಿಸಲಾಯಿತು.

ಸಂಸದ ಕ್ಯಾ. ಬ್ರಿಜೇಶ್ ಚೌಟ ಅಧ್ಯಕ್ಷತೆ ವಹಿಸಿ, ಊರಿಗೆ ಊರೇ ಒಟ್ಟಾದರೆ ಸಂಕಲ್ಪ ಸಿದ್ಧಿಯಾಗುತ್ತದೆ. ಹಿಂದೂ ಸಮಾಜದ ಸಂಖ್ಯೆ ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ಹಿಂದೂ ಸಮಾಜ ಒಗ್ಗಟ್ಟಾಗಿ ಸಾಗಲು ಧಾರ್ಮಿಕ ಕಾರ್ಯಕ್ರಮಗಳು ಸಹಕಾರಿಯಾಗಲಿ ಎಂದರು.ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ವಿಎಚ್‌ಪಿ ಸಹ ಕಾರ್ಯದರ್ಶಿ ಶರಣ್ ಪಂಪವೆಲ್ ಮಾತನಾಡಿದರು.

ರೇಖಾ ಬಿ. ಆಳ್ವ ಪೇರ್ಲಬೈಲು, ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ಕುಮಾರ್ ರೈ ಬಾಲ್ಯೊಟ್ಟು, ಜಿ.ಪಂ. ಮಾಜಿ ಸದಸ್ಯ ಸಂತೋಷ್ ಕುಮಾರ್ ರೈ ಬೋಳಿಯಾರು, ಉದ್ಯಮಿ ಭುವನೇಶ್ ಪಚ್ಚಿನಡ್ಕ, ಉದ್ಯಮಿ ಅಜಿತ್ ಚೌಟ ದೇವಸ್ಯ, ಉದ್ಯಮಿ ಮಹಾಬಲ ಕೊಟ್ಟಾರಿ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಬಿ.ಎನ್. ರವೀಂದ್ರ, ಪ್ರಮುಖರಾದ ಜಗದೀಶ ಆಳ್ವ ಕುವೆತ್ತಬೈಲು, ಸೀತಾರಾಮ, ಮಹೇಶ್ ಜೋಗಿ, ಜಿ.ಪಂ. ಮಾಜಿ ಸದಸ್ಯ ಚಂದ್ರಪ್ರಕಾಶ ಶೆಟ್ಟಿ ತುಂಬೆ, ಸೌಮ್ಯ ಆರ್. ಶೆಟ್ಟಿ, ಸೌರಭ್ ಶೆಟ್ಟಿ ಗುರ್ಮೆ, ಪ್ರಕಾಶ್ ಚಂದ್ರ ರೈ ದೇವಸ್ಯ, ಉದ್ಯಮಿ ಉಮೇಶ್ ಸಾಲ್ಯಾನ್ ಬೆಂಜನಪದವು, ಬೂಡಾ ಅಧ್ಯಕ್ಷ ಬೇಬಿ ಕುಂದರ್, ಪೊಳಲಿ ಗಿರಿಪ್ರಕಾಶ ತಂತ್ರಿ, ಚಂದ್ರಶೇಖರ ಗಾಂಭೀರ, ಶಶಿಧರ ಬ್ರಹ್ಮರಕೊಟ್ಲು, ಗೋಪಾಲ್ ಮೈಂದನ್ ತುಂಬೆ, ದಿವಾಕರ ಪಂಬದಬೆಟ್ಟು, ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ, ಉದ್ಯಮಿ ಜಯಪ್ರಕಾಶ ತುಂಬೆ, ಉಮೇಶ್ ಶೆಟ್ಟಿ ಬರ್ಕೆ, ಉದ್ಯಮಿ ದಯಾನಂದ ರೈ, ಪ್ರಿಯಾ ಸುನಿಲ್, ಶ್ರೀ ಶಾರದಾ ರಜತ ಮಹೋತ್ಸವದ ಸಮಿತಿ ಅಧ್ಯಕ್ಷ ರಾಘವ ಬಂಗೇರ ಪೇರ್ಲಬೈಲು ಇದ್ದರು.

ಪ್ರಮುಖರಾದ ಶ್ರೀ ಶಾರದಾ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಗಣೇಶ್ ಸುವರ್ಣ ತುಂಬೆ, ಪದಾಧಿಕಾರಿಗಳಾದ ಕುಮುದಾಕ್ಷ ತುಂಬೆ, ಜಗದೀಶ ಪೂಜಾರಿ ಕುಮ್ಡೇಲ್, ಯೋಗೀಶ್ ಕೋಟ್ಯಾನ್ ಕುಮ್ಡೇಲ್, ವಿನೋದ್ ಬೊಳ್ಳಾರಿ, ರಾಮಚಂದ್ರ ಸುವರ್ಣ ತುಂಬೆ, ವಿಜಯ್ ಕಜೆಕಂಡ, ದಿವಾಕರ ಪೇರ್ಲಬೈಲು, ಸುಶಾನ್ ಆಚಾರ್ಯ ಬೊಳ್ಳಾರಿ, ಜಗನ್ನಾಥ ಸಾಲಿಯಾನ್ ತುಂಬೆ, ಪ್ರಶಾಂತ್ ಕೊಟ್ಟಾರಿ ಮತ್ತಿತರರು ಉಪಸ್ಥಿತರಿದ್ದರು.

ಶ್ರೀ ಶಾರದಾ ರಜತ ಸಂಭ್ರಮ ಮಹೋತ್ಸವ ಸಮಿತಿಯ ಸಂಚಾಲಕ ತಾರಾನಾಥ ಕೊಟ್ಟಾರಿ ತೇವು ಸ್ವಾಗತಿಸಿದರು. ಸಂತೋಷ್ ಕೋಟ್ಯಾನ್ ತುಂಬೆ ಅಭಿನಂದನಾ ಪತ್ರ ವಾಚಿಸಿದರು. ಯೋಗೀಶ ಕಜೆಕಂಡ ವಂದಿಸಿದರು. ಕಲಾವಿದ ಎಚ್.ಕೆ. ನೈನಾಡ್ ನಿರೂಪಿಸಿದರು.

PREV

Recommended Stories

ಇಂದಿನಿಂದ ಮಹಿಳಾ ಏಕದಿನ ವಿಶ್ವಕಪ್‌ : 8 ತಂಡ, 31 ಪಂದ್ಯ
ಅಕ್ರಮ ತಡೆಗೆ ‘ಡಿಜಿಟಲ್‌’ ಭೂಸ್ವಾಧೀನ: ಬೈರೇಗೌಡ