ರಿಯಾಜಅಹ್ಮದ ಎಂ. ದೊಡ್ಡಮನಿ
ಈ ಕಾರ್ಯಕ್ಕೆ ಹೊಸಕೋಟೆಯ ಭಾಗದ ವಿಶೇಷ ಮಾದರಿ ಕಲ್ಲು ತರಿಸಲಾಗಿದ್ದು, ₹6 ಕೋಟಿ ವೆಚ್ಚದ ನೀಲನಕ್ಷೆ ರೂಪಿಸಲಾಗಿದೆ. ಅದರಂತೆ ಕಾಮಗಾರಿ ನಡೆಯುತ್ತಿದೆ.
ದೇಗುಲಕ್ಕೆ ಕಲ್ಲಿನ ಮಂಟಪ ನಿರ್ಮಿಸಬೇಕು ಎಂಬುದು ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಆಶಯವಾಗಿತ್ತು. ಅದನ್ನು ಕಾರ್ಯರೂಪಕ್ಕೆ ತರಲು ಡಾ. ತೋಂಟದ ಸಿದ್ದರಾಮ ಶ್ರೀಗಳು ಮುಂದಡಿ ಇಟ್ಟಿದ್ದಾರೆ.ತೋಂಟದ ಮದರ್ಧನಾರೀಶ್ವರರು: ಡಂಬಳ ಗ್ರಾಮದ ಜಗದ್ಗುರು ತೋಂಟದಾರ್ಯ ಮಠಕ್ಕೆ 900 ವರ್ಷಗಳ ಇತಿಹಾಸವಿದೆ. ಇದು ಕೋಮಸೌಹಾರ್ದದ ಮಠ ಎಂದು ಹೆಸರಾಗಿದೆ.
ಬಸವತತ್ವದ ಬೆಳಕು: ಲಿಂ. ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಪಟ್ಟಕ್ಕೆ ಬಂದ ಆನಂತರ ಬಸವತತ್ವದಂತೆ, 1975ರಲ್ಲಿ ಮನುಷ್ಯ ಮನುಷ್ಯರನ್ನು ಹೊರುವುದು ಯಾವ ನ್ಯಾಯ? ಎಂದು ಅಡ್ಡಪಲ್ಲಕ್ಕಿಯನ್ನು ನಿರಾಕರಿಸಿದರು. ಅಡ್ಡಪಲ್ಲಕ್ಕಿಯಲ್ಲಿ ಷಟ್‌ಸ್ಥಲ ಜ್ಞಾನ ಸಾರಾಮೃತ ವಚನ ಕಟ್ಟುಗಳ ಮೆರವಣಿಗೆ ನಡೆಸಿದರು. ಶ್ರೀಗಳು ಇಂತಹ ನೂರಾರು ಸಾಮಾಜಿಕ ಕಾರ್ಯಗಳಿಗೆ ನಾಂದಿ ಹಾಡಿದರು. ಸಾಮಾಜಿಕ, ಶೈಕ್ಷಣಿಕ, ಪರಿಸರ ಕ್ರಾಂತಿಯ ಮೂಲಕ ಬದಲಾವಣೆ ತಂದು ಭಕ್ತರ ಪ್ರೀತಿಗೆ ಪಾತ್ರರಾದರು.
ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳು ಹಾಕಿಕೊಟ್ಟ ದಾರಿಯಲ್ಲಿ ಡಾ. ತೋಂಟದ ಸಿದ್ದರಾಮ ಶ್ರೀಗಳು ನಡೆಯುತ್ತಿದ್ದು, ಮಠದ ಆವರಣ ಕಟ್ಟಿಸುವ ಕಾರ್ಯ ನಡೆಸುತ್ತಿದ್ದಾರೆ. ಈ ಮೂಲಕ ಗುರು-ಶಿಷ್ಯರ ನಡುವಿನ ಸಂಬಂಧ ದೊಡ್ಡದು ಎಂದು ಸಾರಿದ್ದಾರೆ.ಡಾ. ತೋಂಟದ ಶ್ರೀಗಳ ಆಶಯದಂತೆ ಡಾ. ತೋಂಟದ ಸಿದ್ಧರಾಮ ಶ್ರೀಗಳು ಡಂಬಳ ಮಠದ ಆವರಣ ಅಭಿವೃದ್ಧಿಪಡಿಸುತ್ತಿರುವುದು ಸಂತಸ ತಂದಿದೆ ಎಂದು ಗೋಣಿಬಸಪ್ಪ ಎಸ್. ಕೋರ್ಲಹಳ್ಳಿ ಹೇಳುತ್ತಾರೆ.