ನವಲಗುಂದ: ತಾಲೂಕಿನಾದ್ಯಂತ ಬುಧವಾರ ಮೃಗಶಿರ ಮಳೆ ಅರ್ಭಟ ಆರಂಭಿಸಿದ್ದು, ಸಂಜೆ 4.30ರಿಂದ ಶುರುವಾದ ಮಳೆಯ ಅಬ್ಬರ, ರಾತ್ರಿವರೆಗೂ ಮುಂದುವರಿದಿತ್ತು. ತಾಲೂಕಿನ ಹಳ್ಳ- ಕೊಳ್ಳಗಳು ಮೈದುಂಬಿ ಹರಿಯುತ್ತಿವೆ. ಗೌರಿಹಳ್ಳ ಹಾಗೂ ಅಂಬಲಿ ಹಳ್ಳ ಮೈದುಂಬಿ ಹರಿಯುತ್ತಿರುವುದರಿಂದ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಹಾಳಕುಸುಗಲ್ ಗೌರಿ ಹಳ್ಳಕ್ಕೆ ಸೇತುವೆ ನಿರ್ಮಿಸಬೇಕು ಎಂಬ ಬೇಡಿಕೆ ಬಹುವರ್ಷಗಳದ್ದು. ಇದಕ್ಕಾಗಿ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಪ್ರತಿವರ್ಷ ನೀರನಲ್ಲಿ ಸಿಲುಕುವುದೇ ಆಗಿದೆ ಎಂದು ಸಣ್ಣಶೇಖಣ್ಣ ನೀಡವಣಿ ಆರೋಪಿಸಿದರು.
ನವಲಗುಂದ ಪಟ್ಟಣದ ಜಮಖಾನ ಓಣಿಯ ಹತ್ತಿರ ಹಾದು ಹೋಗುವ ಹುಬ್ಬಳ್ಳಿ- ಸೋಲಾಪೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ನಿಂತಿದ್ದರಿಂದ ಸಂಚಾರ ಸ್ಥಗಿತಗೊಂಡಿದೆ. ಇಬ್ರಾಹಿಂಪೂರ- ನವಲಗುಂದ ಮಧ್ಯದಲ್ಲಿರುವ ಅಂಬಲಿ ಹಳ್ಳದ ಪ್ರವಾಹದಿಂದ ಸಂಚಾರ ಸ್ಥಗಿತಗೊಂಡಿದೆ.ತಾಲೂಕಿನ ಗುಡಿಸಾಗರ ಹತ್ತಿರುವ ಹಳ್ಳ ತುಂಬಿ ಹರಿಯುತ್ತಿದ್ದು ನಾಗನೂರ್, ಅರಹಟ್ಟಿ, ಕಡದಳ್ಳಿ ತಡಹಾಳ, ಪಡೇಸೂರ್, ಶಾನವಾರ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ. ತಾಲೂಕಿನ ಯಮನೂರು ಗ್ರಾಮದಲ್ಲಿ 15ಕ್ಕೂ ಅಧಿಕ ಮನೆಗಳಿಗೆ ಬುಧವಾರ ರಾತ್ರಿ ನೀರು ನುಗ್ಗಿದ ಹಿನ್ನೆಲೆಯಲ್ಲಿ ಜನರು ತೊಂದರೆ ಅನುಭವಿಸುವಂತಾಯಿತು. ಗ್ರಾಮದಲ್ಲಿ ರಾಜಬಾಗ್ ಸವಾರ್ ದರ್ಗಾದ ಮುಂಭಾಗದ ಆವರಣದಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಸಿತು.
ಹುಬ್ಬಳ್ಳಿ: ಮನೆ ಎದುರು ಪಾರ್ಕಿಂಗ್ ಮಾಡಿದ ಬೈಕ್ ತೆಗೆಯುವಂತೆ ಹೇಳಿದ ವಿಚಾರಕ್ಕೆ ಇಬ್ಬರು ಮಹಿಳೆ ಸೇರಿದಂತೆ ಮೂವರ ಮೇಲೆ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಇಲ್ಲಿಯ ಗಂಗಾಧರ ನಗರದ ಶಾಂತಿ ಕಾಲನಿಯಲ್ಲಿ ನಡೆದಿದೆ. ಶಾಂತಿ ಕಾಲನಿಯ ನೇತ್ರಾ, ಯಮನಕ್ಕಾ ಹಾಗೂ ಸ್ವಯಂ ಎಂಬುವರ ಮೇಲೆ ಹಲ್ಲೆಯಾಗಿದ್ದು, ಶ್ರೀನಿವಾಸ ಬಿಜವಾಡ, ಲೋಹಿತ, ಸಾಯಿ, ರವಿ, ಮುಕೇಶ ಸೇರಿದಂತೆ ಇತರರು ಹಲ್ಲೆ ನಡೆಸಿದ್ದಾರೆ. ಮನೆ ಎದುರು ನಿಲ್ಲಿಸಿದ ಬೈಕ್ ಆ ಕಡೆ ಇಟ್ಟುಕೊಳ್ಳುವಂತೆ ಮುಕೇಶ ಅವರಿಗೆ ಹೇಳಿದ್ದಾರೆ. ಆಗ ಸಿಟ್ಟಾದ ಮುಕೇಶ್ ತಮ್ಮ ಸಂಬಂಧಿಗಳೊಂದಿಗೆ ಬಂದು ಅವಾಚ್ಯ ಪದಗಳಿಂದ ನಿಂದಿಸಿ ಹಾಕಿ ಸ್ಟಿಕ್, ಕಟ್ಟಿಗೆಯಿಂದ ಹಲ್ಲೆ ಮಾಡಿದ್ದಾರೆ ಎಂದು ದೂರಲಾಗಿದೆ.ನಿವೃತ್ತ ನೌಕರರೊಬ್ಬರಿಗೆ ₹35 ಲಕ್ಷ ವಂಚನೆ